ಬೀದರ್: ಸಂಕಷ್ಟದಲ್ಲಿರುವ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ(ಬಿ.ಎಸ್.ಎಸ್.ಕೆ)ಯ ಕಾರ್ಮಿಕರು ಕುಟುಂಬ ಸಮೇತ ಜಿಲ್ಲಾಧಿಕಾರಿಗಳ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಕಾರ್ಖಾನೆಯಲ್ಲಿ ಖಾಯಂ 164, ಹಂಗಾಮಿ 222 ಹಾಗೂ ಗುತ್ತಿಗೆ ಆಧಾರಿತ 4 ಜನ ಸೇರಿ ಒಟ್ಟು 390 ಕಾರ್ಮಿಕರಿದ್ದೇವೆ. ನಮಗೆ 30 ತಿಂಗಳಿನ ವೇತನ ನೀಡಿಲ್ಲ. ಹಾಗೂ 2019-20ನೇ ಸಾಲಿನ ಹಂಗಾಮು ಪ್ರಾರಂಭವಾಗದೇ ಇರುವುದರಿಂದ ತಾವು ಸಂಕಷ್ಟದಲ್ಲಿ ಸಿಲುಕಿರುವುದಾಗಿ ಕಾರ್ಮಿಕರು ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಅವರಿಗೆ ತಿಳಿಸಿದರು.
ಕಾರ್ಮಿಕರ ಅಹವಾಲುಗಳನ್ನು ಆಲಿಸಿದ ಆರ್. ರಾಮಚಂದ್ರನ್, ಕಾರ್ಮಿಕರಿಗೆ ವೇತನ ಮತ್ತು ಶಾಸನ ಬದ್ಧ ಸೌಲಭ್ಯಗಳನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಸಂಬಂಧಿಸಿದ ಕಾರ್ಯದರ್ಶಿಗಳಿಗೆ ತಿಳಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ರು.