ಬೀದರ್: ಯುವತಿಯೊಬ್ಬಳು ನಗ್ನ ವಿಡಿಯೋ ತೋರಿಸಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿರುವುದಾಗಿ ಆರೋಪಿಸಿ ಬೀದರ್ ಬಿಜೆಪಿ ಮುಖಂಡ ಹಾಗು ಬಿಎಸ್ಎನ್ಎಲ್ ಸಲಹಾ ಸಮಿತಿ ಸದಸ್ಯ ಸಂಗಮೇಶ ನಾಸಿಗಾರ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಫೇಸ್ಬುಕ್ನಲ್ಲಿ ಬೆಂಗಳೂರಿನವಳೆಂದು ಯುವತಿ ಪರಿಚಯಿಸಿಕೊಂಡಳು. ನಂತರ ನನ್ನ ವಾಟ್ಸಪ್ ನಂಬರ್ ಪಡೆದು, ವಿಡಿಯೋ ಕರೆ ಮಾಡಿ ಒಂದೆರಡು ದಿನ ಆತ್ಮೀಯವಾಗಿ ಮಾತನಾಡಿದಳು. ತಿಂಗಳ ಹಿಂದೆ ವಿಡಿಯೋ ಕಾಲ್‌ನಲ್ಲಿ ಮಾತನಾಡುವಾಗ ನಗ್ನವಾದ ಆಕೆ, ವಿಡಿಯೋ ರೆಕಾರ್ಡಿಂಗ್ ಮಾಡಿಕೊಂಡಿದ್ದು, ಹಣಕ್ಕಾಗಿ ಪೀಡಿಸುತ್ತಿದ್ದಾಳೆ. ಯುವತಿಯ ಕಿರುಕುಳ ಹೆಚ್ಚಾದಾಗ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ದಾಖಲಾತಿ ಪರಿಶೀಲನೆ ಹೆಸರಿನಲ್ಲಿ ವಾಹನಗಳನ್ನು ಎಲ್ಲೆಂದರಲ್ಲಿ ತಡೆದು ನಿಲ್ಲಿಸದಿರಿ.. ಪ್ರವೀಣ್ ಸೂದ್ ಸೂಚನೆ
ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಬೇರೆ ಯಾರಾದರೂ ಸಂತ್ರಸ್ತರಿದ್ದರೆ ದೂರು ನೀಡುವಂತೆಯೂ ಸೂಚಿಸಿದ್ದಾರೆ.