ಬೀದರ್ : ಬೀದರ್ನಲ್ಲಿ ಕೊರೊನಾ ಭೀತಿ ಹೆಚ್ಚಾಗುತ್ತಿದ್ದಂತೆ ಜಿಲ್ಲೆಯನ್ನು ಕೆಂಪು ವಲಯವಾಗಿ ಘೋಷಣೆ ಮಾಡಲಾಗಿದೆ. ಲಾಕ್ಡೌನ್ ನಿಯಮ ಉಲ್ಲಂಘಿಸಿ ರಸ್ತೆಗೆ ಬರುವ ವಾಹನ ಸವಾರರಿಗೆ ಪೊಲೀಸರು ಕ್ಲಾಸ್ ತೆಗೆದುಕೊಂಡಿದ್ದಾರೆ.
ನಗರದ ಅಂಬೇಡ್ಕರ್ ವೃತದಲ್ಲಿ ಡಿವೈಎಸ್ಪಿ ಬಸವೇಶ್ವರ ಹೀರಾ ನೇತೃತ್ವದಲ್ಲಿ ಪೊಲೀಸರು ಲಾಕ್ಡೌನ್ ನಿಯಮ ಉಲ್ಲಂಘಿಸಿದವರನ್ನು ನಡು ರಸ್ತೆಯಲ್ಲೇ ಬಸ್ಕಿ ಹೊಡೆಸಿ ಶಿಕ್ಷೆ ನೀಡಿದರು. ಬೇಕಾಬಿಟ್ಟಿ ರಸ್ತೆಗಿಳಿದ ವಾಹನ ಸವಾರರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಪೊಲೀಸರು ಎಷ್ಟೇ ಹೇಳಿದರೂ ಕೇಳದೆ ಬೇಕಾಬಿಟ್ಟಿ ಓಡಾಡುವ ಪುಡಾರಿಗಳಿಗೆ ಬಸ್ಕಿ ಹೊಡೆಯುವ ಶಿಕ್ಷೆ ನೀಡಿದ್ದಾರೆ.
ಲಾಕ್ಡೌನ್ ಇದ್ದರೂ ಅನಗತ್ಯ ಮನೆಯಿಂದ ಹೊರಬರುವವರ ಪ್ರಮಾಣ ಹೆಚ್ಚಾಗುತ್ತಿದೆ. ಬೀದರ್ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಪ್ರಕರಣಗಳು ನಿಯಂತ್ರಣಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಬೀದರ್ ಜಿಲ್ಲೆಗೆ ಆರೇಂಜ್ ಝೋನ್ಗೆ ಸೇರಿಸಲಾಗಿದೆ. ಆದರೆ, ಬೀದರ್ ಓಲ್ಡ್ ಸಿಟಿ ಈಗಲೂ ಕೂಡ ರೆಡ್ ಝೋನ್ನಲ್ಲೇ ಇಡಲಾಗಿದೆ. ಸುಡು ಬಿಸಿಲಿನ ತಾಪದ ನಡುವೆ ಬೈಕ್ ಮೇಲೆ ಮನೆಯಿಂದ ಹೊರ ಬಂದ ಸವಾರರಿಗೆ ಬಸ್ಕಿ ಹೊಡೆಸಿರುವುದಲ್ಲದೆ ದಂಡ ವಿಧಿಸಿದ್ದಾರೆ ಪೊಲೀಸರು.