ETV Bharat / state

ಹೊಸ ವರ್ಷ ಸ್ವಾಗತಿಸಲು ಸಜ್ಜಾದ ಶಿವಮೊಗ್ಗ : ಮ್ಯೂಸಿಕಲ್ ನೈಟ್ ತಂಡದಿಂದ ಸಂಗೀತ ರಸದೌತಣ - MUSICAL NIGHT

ಶಿವಮೊಗ್ಗದ ಜನತೆ 2025 ಹೊಸ ವರ್ಷವನ್ನ ಸ್ವಾಗತಿಸಲು ಸಜ್ಜಾಗಿದ್ದಾರೆ. ಹೀಗಾಗಿ, ಜಿಲ್ಲೆಯ ಜನತೆಯನ್ನ ರಂಜಿಸಲು ಮ್ಯೂಸಿಕಲ್ ನೈಟ್ ತಂಡ ಸಿದ್ಧವಾಗಿದೆ.

Setting the stage for the One Night in Tomorrowland music party
ಒನ್ ನೈಟ್ ಇನ್ ಟುಮಾರೊಲ್ಯಾಂಡ್ ಮ್ಯೂಸಿಕ್ ಪಾರ್ಟಿಗೆ ವೇದಿಕೆಯನ್ನು ಸಿದ್ಧಪಡಿಸಲಾಗುತ್ತಿದೆ (ETV Bharat)
author img

By ETV Bharat Karnataka Team

Published : Dec 31, 2024, 5:48 PM IST

ಶಿವಮೊಗ್ಗ : 2025 ಹೊಸ ವರ್ಷವನ್ನು ಸ್ವಾಗತಿಸಲು ಶಿವಮೊಗ್ಗ ಜಿಲ್ಲೆಯ ಜನತೆ ಸಿದ್ಧವಾಗಿದ್ದಾರೆ. ಇದಕ್ಕಾಗಿ ನಗರದ ಕಂಟ್ರಿ ಕ್ಲಬ್​ನಲ್ಲಿ ಮ್ಯೂಸಿಕಲ್ ನೈಟ್ ತಂಡ ಸಿದ್ಧವಾಗಿದೆ. ಜಿಲ್ಲೆಯ ವಿದ್ಯಾನಗರ ಕಂಟ್ರಿ ಕ್ಲಬ್​ನಲ್ಲಿ ದೊಡ್ಡ ಮ್ಯೂಸಿಕಲ್ ನೈಟ್ ಆಯೋಜನೆ ಮಾಡಲಾಗಿದೆ. ಇಲ್ಲಿ ಡಿಜೆ ಇದೆ. ಡಿಜೆಯಲ್ಲಿ ರಾಜ್ಯದ ಪ್ರಸಿದ್ಧ ಡಿಜೆಯಾದ ಎಂಸಿರವರು ಬರಲಿದ್ದಾರೆ. ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲು ಬರುವ ಶಿವಮೊಗ್ಗ ಜನತೆಗೆ ಈ ತಂಡ ಸಂಗೀತದ ರಸದೌತಣವನ್ನು ನೀಡಲು ಸಜ್ಜಾಗಿದೆ. ಇದಕ್ಕಾಗಿ ತಂಡ ಎಂಟ್ರಿ ಫೀ ಸಹ ನಿಗದಿಪಡಿಸಿದೆ.

ಕಾರ್ಯಕ್ರಮಕ್ಕೆ ಬರುವವರಿಗೆ ಸಂಗೀತದ ರಸದೌತಣದ ಜೊತೆಗೆ ವೆಜ್ ಹಾಗೂ ನಾನ್ ವೆಜ್​ ಊಟವನ್ನು ಸಹ ನೀಡಲಾಗುತ್ತಿದೆ. ಅಲ್ಲದೆ ಮಹಿಳೆಯರಿಗೆ, ಮಕ್ಕಳಿಗೆ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಪಾರ್ಟಿಯಲ್ಲಿ ಡ್ಯಾನ್ಸ್ ಮಾಡಲು ಪುರುಷರಿಗೆ ಹಾಗೂ ಮಹಿಳೆಯರಿಗೆ ಬೇರೆ ಬೇರೆ ವ್ಯವಸ್ಥೆ ಮಾಡಲಾಗಿದೆ. ಶಿವಮೊಗ್ಗ ನಗರದಲ್ಲಿ ಕಂಟ್ರಿ ಕ್ಲಬ್ ನಲ್ಲಿ ಮಾತ್ರ ಹೊಸ ವರ್ಷದ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದಲ್ಲದೆ ಸಾಗರ ಪಟ್ಟಣದ ಹೊರ ವಲಯ ತ್ಯಾಗರ್ತಿ ಕ್ರಾಸ್​ನಲ್ಲಿ ಹಾಗೂ ಸಾಗರದ ಗ್ರೀನ್ ಅಂಬಾಸಿ ಹೋಟೆಲ್​ನಲ್ಲೂ ಸಹ ಹೊಸ ವರ್ಷದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮ ಆಯೋಜಕರಾದ ನಿವೇದಿತಾ ಮಾತನಾಡಿದರು (ETV Bharat)

ಈ ಕುರಿತು ಕಾರ್ಯಕ್ರಮದ ಆಯೋಜಕರಾದ ನಿವೇದಿತಾ ಮಾತನಾಡಿ, 'ಶಿವಮೊಗ್ಗದ ಕಂಟ್ರಿ ಕ್ಲಬ್​ನಲ್ಲಿ ಮ್ಯಾಡ್ ಮ್ಯೂಸಿಕ್ ವತಿಯಿಂದ 'ಒನ್​​ನೈಟ್​ ಇನ್​ ಟುಮಾರೊಲ್ಯಾಂಡ್' ಎಂಬ ಹೊಸ ವಿಷಯವನ್ನು ನಾವು ಪ್ರಾರಂಭಿಸುತ್ತಿದ್ದೇವೆ. ಇಲ್ಲಿ ಇಂದು ಸಂಜೆ 7:30 ರಿಂದ ರಾತ್ರಿ 12:30ರ ತನಕ ಮ್ಯೂಸಿಕ್ ಪಾರ್ಟಿ ಆಯೋಜನೆ ಮಾಡಲಾಗಿದೆ. ಗೇಮ್ ಆಡಿಸಲಾಗುತ್ತಿದೆ. ಬ್ಯಾಂಡ್ ಫಾರ್ಮಸಿಸ್ ಬೆಂಗಳೂರು ಟೀಂ ಬರುತ್ತಿದೆ. ಅಲ್ಲದೆ ಎಲ್ಲರನ್ನು ರಂಜಿಸಲು ಎಂಸಿ ಬರ್ತಾ ಇದ್ದಾರೆ. ಚಂಡೆ ಸಹ ಇರಲಿದೆ. ಚಂಡೆ ಹಾಗೂ ಡಿಜೆ ಜನರನ್ನು ರಂಜಿಸಲಿದ್ದಾರೆ. ಡಿಜೆಯಲ್ಲಿ ಫಿಮೆಲ್​ ಟ್ರಾನ್ಸ್ ಕೂಡಾ ಪ್ಲೇ ಮಾಡ್ತಾ ಇದ್ದಾರೆ. ಇಂದು ಒಂದು ಸಾವಿರ ಜನ ಸೇರುವ ನಿರೀಕ್ಷೆ ಇದೆ' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : 2025ನೇ ವರ್ಷ ಸ್ವಾಗತಿಸಲು ಮದುವಣಗಿತ್ತಿಯಂತೆ ಸಿಂಗಾರಗೊಂಡ ಸಿಲಿಕಾನ್‌ ಸಿಟಿ: ಮೆಟ್ರೋ ಸೌಲಭ್ಯವೂ ಉಂಟು - NEW YEAR 2025

ETV Bharat Logo

Copyright © 2025 Ushodaya Enterprises Pvt. Ltd., All Rights Reserved.