ETV Bharat / state

ಆಟವಾಡುತ್ತಾ ನೀರಿಗಿಳಿದ ಅಕ್ಕ-ತಮ್ಮನ ಪ್ರಾಣ ಕಸಿದ ಜವರಾಯ.. - ಬೀದರ್​ ಕ್ರೈಂ ಸುದ್ದಿ

ರಸ್ತೆ ಪಕ್ಕದಲ್ಲಿ ಆಟವಾಡ್ತಿದ್ದ ಇಬ್ಬರು ಮಕ್ಕಳು ಸೈಕಲ್ ಟೈರ್ ಜತೆ ಆಟವಾಡುತ್ತಾ ನೀರಿನ ಬಳಿ ತೆರಳಿದ್ದಾರೆ. ಈ ವೇಳೆ ನೋಡ ನೋಡುತ್ತಲೇ ಇಬ್ಬರು ಮಕ್ಕಳು ನೀರಿನಲ್ಲಿ ಮುಳುಗಿದ್ದಾರೆ..

ಮಕ್ಕಳ ಪ್ರಾಣ ಕಿತ್ತುಕೊಂಡ ಜವರಾಯ
ಮಕ್ಕಳ ಪ್ರಾಣ ಕಿತ್ತುಕೊಂಡ ಜವರಾಯ
author img

By

Published : Sep 20, 2020, 6:03 PM IST

Updated : Sep 20, 2020, 11:04 PM IST

ಬೀದರ್ : ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಕೆರೆಕಟ್ಟೆಗಳು ತುಂಬಿವೆ. ಈ ವೇಳೆ ಊರ ಹೊರಗಿನ ಕೆರೆಯ ಪಕ್ಕದಲ್ಲಿ ಆಟವಾಡಲು ಹೋದ ಇಬ್ಬರು ಮಕ್ಕಳು ನೀರುಪಾಲಾದ ಹೃದಯ ವಿದ್ರಾವಕ ಘಟನೆ ನಡೆದಿದೆ.

ನಿಜಾಂಪೂರ್ ಗ್ರಾಮದ ಕೆರೆಯ ಬಳಿ ಸೈಕಲ್ ಟೈರ್​ನಲ್ಲಿ ಆಟವಾಡಲು ಹೋಗಿದ್ದ ಅಕ್ಕ-ತಮ್ಮ ಇಬ್ಬರು ನೀರುಪಾಲಾಗಿದ್ದಾರೆ. ಅರಸು ಫಕ್ರು(6) ಹಾಗೂ ಅನು ಫಕ್ರು(8) ಮೃತ ಮಕ್ಕಳು. ಜಿಲ್ಲೆಯಾದ್ಯಂತ ಸುರಿದ ಧಾರಾಕಾರ ಮಳೆಯಿಂದಾಗ ಕೆರೆ ಕಟ್ಟೆಗಳೆಲ್ಲವೂ ತುಂಬಿವೆ.

ಅಕ್ಕ-ತಮ್ಮನ ಪ್ರಾಣ ಕಸಿದ ಜವರಾಯ

ರಸ್ತೆ ಪಕ್ಕದಲ್ಲಿ ಆಟವಾಡ್ತಿದ್ದ ಇಬ್ಬರು ಮಕ್ಕಳು ಸೈಕಲ್ ಟೈರ್ ಜತೆ ಆಟವಾಡುತ್ತಾ ನೀರಿನ ಬಳಿ ತೆರಳಿದ್ದಾರೆ. ಈ ವೇಳೆ ನೋಡ ನೋಡುತ್ತಲೇ ಇಬ್ಬರು ಮಕ್ಕಳು ನೀರಿನಲ್ಲಿ ಮುಳುಗಿದ್ದಾರೆ.

ಘಟನೆಯಿಂದ ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Sep 20, 2020, 11:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.