ಬೀದರ್ : ಜಿಲ್ಲೆಯ ಜನರು ಪ್ರವಾಹ ಸಂತ್ರಸ್ತರಿಗೆ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ನಗರದ ಗುರುದ್ವಾರದಲ್ಲಿ ಭಗತಸಿಂಗ್ ಯೂತ್ ಬ್ರಿಗೇಡ್ ಕಾರ್ಯಕರ್ತರು ಸಾರ್ವಜನಿಕರಿಂದ ದವಸ-ಧಾನ್ಯ, ಬಟ್ಟೆಗಳು, ಮೆಡಿಕಲ್ ಕಿಟ್, ಶುದ್ಧಕುಡಿಯುವ ನೀರು ಸೇರಿದಂತೆ ದಿನ ನಿತ್ಯ ಬೇಕಾಗಿರುವ ಅವಶ್ಯಕ ಸಾಮಗ್ರಿಗಳನ್ನು ಕಳುಹಿಸಿಕೊಟ್ಟಿದ್ದಾರೆ. ಬೆಳಗಾವಿ, ಬಾಗಲಕೋಟೆ, ಯಾದಗಿರಿ, ವಿಜಯಪುರ ಜಿಲ್ಲೆ ಸೇರಿದಂತೆ ನೆರೆಯಿಂದ ನೊಂದ ಜನರ ಸಹಕಾರಕ್ಕೆ ಮುಂದಾಗಿದ್ದಾರೆ.
ಕಳೆದ ಎರಡು ವಾರಗಳಿಂದ ಬೀದರ್ ಜನರು ಸಾಮೂಹಿಕವಾಗಿ ಪ್ರವಾಹ ಸಂತ್ರಸ್ತರಿಗೆ ನೈತಿಕವಾಗಿ ನೆರವಾಗಿರುವುದಲ್ಲದೆ ಭೀಕರ ಬರದಿಂದ ಬೆಂದು ಹೋಗಿದ್ರು. ತಮಗಿಂತ ಹೆಚ್ಚಿನ ಕಷ್ಟದಲ್ಲಿರುವ ನೆರೆ ಸಂತ್ರಸ್ತರಿಗೆ ಸಹಾಯ ಮಾಡಿದ್ದಾರೆ.