ETV Bharat / state

ಬೀದರ್​ನಲ್ಲಿ ಮತ್ತೆ 45 ಜನರ ರಕ್ತ ಹಾಗೂ ಕಫದ ಮಾದರಿ ಪ್ರಯೋಗಾಲಯಕ್ಕೆ ರವಾನೆ

author img

By

Published : Apr 12, 2020, 9:45 AM IST

ಬೀದರ್​ನಲ್ಲಿ ಶಂಕಿತ ಕೊರೊನಾ ಸೋಂಕಿತರಸಂಖ್ಯೆ 146 ಆಗಿದೆ. ಇವರೆಲ್ಲರ ರಕ್ತ ಹಾಗೂ ಕಫದ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.

ಕೊರೊನಾ ಟೆಸ್ಟ್​
ಕೊರೊನಾ ಟೆಸ್ಟ್​

ಬೀದರ್: ಕೊವಿಡ್-19 ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದವರು, ಬ್ರೀಮ್ಸ್ ಆಸ್ಪತ್ರೆಯ ವೈದ್ಯಕೀಯ ವಿಧ್ಯಾರ್ಥಿಗಳು ಸೇರಿದಂತೆ ಶುಕ್ರವಾರ 91 ಜನರ ರಕ್ತ ಹಾಗೂ ಕಫದ ಮಾದರಿ ರವಾನಿಸಲಾಯಿತು.

ಈ ನಡುವೆ ಓಲ್ಡ್ ಸಿಟಿಯ ಕೇಸ್ ನಂಬರ್ 122 ಸೊಂಕಿತ ವ್ಯಕ್ತಿಯ ಸಂಪರ್ಕದಲ್ಲಿದ್ದ ಮಹಿಳೆಗೆ ಪಾಸಿಟಿವ್ ಸೋಂಕು ತಗುಲಿರುವುದು ದೃಢವಾಗುತ್ತಿದ್ದಂತೆ ಜಿಲ್ಲಾಡಳಿತ ಶನಿವಾರ ಮತ್ತೆ 41 ಜನರ ಸ್ಯಾಂಪಲ್ಅನ್ನು ಪ್ರಯೋಗಾಲಯಕ್ಕೆ ರವಾನೆ ಮಾಡಿದೆ.

ಕೊರೊನಾ ಲಾಕ್​ಡೌನ್​
ಹೆಲ್ತ್​ ಬುಲೆಟಿನ್​
ಈ ಕುರಿತು ಕೊರೊನಾ ಬುಲೆಟಿನ್​ನಲ್ಲಿ ಜಿಲ್ಲಾಡಳಿತ ನೀಡಿದ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 10 ಜನರಲ್ಲಿ ಸೋಂಕು ಇತ್ತು . ಇಂದು ಮೊತ್ತೊಬ್ಬ ಮಹಿಳೆಯಲ್ಲಿ ಸೊಂಕು ಧೃಢವಾಗಿದ್ದರಿಂದ ಒಟ್ಟು 11 ಕ್ಕೆ ಏರಿಕೆಯಾಗಿದೆ. ಇದರಿಂದಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಸೋಂಕಿತರೊಂದಿಗೆ ಪ್ರಾಥಮಿಕವಾಗಿ ಸಂಪರ್ಕದಲ್ಲಿರುವವರನ್ನು ಕ್ವಾರಂಟೈನ್ ಅವಧಿ ಮುಗಿದ ಮೇಲೆ ಅವರ ರಕ್ತ ಹಾಗೂ ಕಫದ ಮಾದರಿಯನ್ನು ಕಲ್ಬುರ್ಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ. ಶುಕ್ರವಾರ 91 ಜನರು ಸೇರಿದಂತೆ ಗುರುವಾರ ಕಳುಹಿಸಿದ 10 ಜನರ ಸ್ಯಾಂಪಲ್ ಹಾಗೂ ಶನಿವಾರ 45 ಜನರ ಸ್ಯಾಪಲ್ ಸೇರಿ ಒಟ್ಟು ಜಿಲ್ಲೆಯ ಶಂಕಿತ ಸೋಂಕಿತರಸಂಖ್ಯೆ 146 ಆಗಿದೆ. ಸಧ್ಯ ದೆಹಲಿಯ ಜಮಾತ್​ಗೆ ಹೊಗಿ ಬಂದವರ ಸಂಪರ್ಕದಲ್ಲಿದ್ದ ಕೇಸ್​ ನಂಬರ್ 122 ರ ವ್ಯಕ್ತಿಯ ಅಣ್ಣನ ಹೆಂಡತಿಯಲ್ಲಿ ಸೋಂಕು ಪತ್ತೆಯಾಗಿದ್ದರಿಂದ ಸೋಂಕಿತರ ಎರಡನೇ ಹಂತದ ಸಂಪರ್ಕದಲ್ಲಿರುವವರ ರಕ್ತ ಹಾಗೂ ಕಫದ ಮಾದರಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.