ಬೀದರ್: ದಿನೇ ದಿನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ನಡುವೆ ಕಳೆದ 4 ತಿಂಗಳಿಂದ ಮನೆಯಲ್ಲಿಯೇ ಇದ್ದ ಜನರು ಇದೀಗ ನಿಧಾನವಾಗಿ ಚೇತರಿಸಿಕೊಂಡು ಸಹಜ ಸ್ಥಿತಿಗೆ ಮರಳಿದ್ದಾರೆ.
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1,938ಕ್ಕೆ ಏರಿಕೆಯಾಗಿದ್ದು, 73 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಮೊದಲ ಹಂತದಲ್ಲಿ ಭಾರಿ ಭೀತಿ ಮೂಡಿಸಿದೆ. ಕೊರೊನಾ ಸೋಂಕು ಈಗ ಸಮುದಾಯ ಹಂತಕ್ಕೆ ಹರಡುವ ಸಾಧ್ಯತೆಗಳಿವೆ ಎಂಬ ಎಚ್ಚರಿಕೆ ಒದೆ. ಇಷ್ಟಿದ್ದರೂ ಜನರಲ್ಲಿ ನಿರ್ಲಕ್ಷ್ಯತನ ಎದ್ದು ಕಾಣುತ್ತಿದೆ.
ಬೀದಿ ಬದಿ ವ್ಯಾಪಾರ, ಅಂಗಡಿ ಮುಂಗಟ್ಟು, ವ್ಯವಹಾರ, ಸಾರಿಗೆ ಸಂಚಾರ ಕ್ರಮೇಣವಾಗಿ ಆರಂಭವಾಗಿದೆ. ಇದು ಜನರಲ್ಲಿ ತುಸು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.