ಬೀದರ್ : ಜಿಲ್ಲೆಯ ಗುರುನಾನಕ್ ದೇವ್ ಎಂಜಿನಿಯರಿಂಗ್ ಕಾಲೇಜು ಹಳೆಯ ವಿದ್ಯಾರ್ಥಿ ಕುಲ್ತಾರ್ ಸಿಂಗ್ ಅವರು ಈಗ ಪಂಜಾಬ್ನ ವಿಧಾನಸಭಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕುಲ್ತಾರ್ ಸಿಂಗ್ ಅವರು ಕಾಲೇಜಿನ 1993ರ ಬ್ಯಾಚ್ ವಿದ್ಯಾರ್ಥಿ. ಆಟೋಮೊಬೈಲ್ ವಿಭಾಗದಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ.
ಪಂಜಾಬ್ ಮೊಹಾಲಿಯ ಪಿಸಿಎ ಕ್ರೀಡಾಂಗಣದಲ್ಲಿ ಬೀದರ್ನ ಗುರುನಾನಕ್ ಝೀರಾ ಫೌಂಡೇಶನ್ ಅಧ್ಯಕ್ಷ ಸರ್ದಾರ್ ಬಲಬೀರ್ ಸಿಂಗ್ ಹಾಗೂ ಗುರುನಾನಕ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ರೇಷ್ಮಾ ಕೌರ್ ಅವರು ಕುಲ್ತಾರ್ ಸಿಂಗ್ ಅವರನ್ನು ಸನ್ಮಾನಿಸಿದ್ದಾರೆ. ಕಾಲೇಜು ಹಳೆಯ ವಿದ್ಯಾರ್ಥಿ ವಿಧಾನಸಭಾಧ್ಯಕ್ಷ ಹುದ್ದೆ ಅಲಂಕರಿಸಿರುವುದು ಹೆಮ್ಮೆಯ ಸಂಗತಿ. ಕುಲ್ತಾರ್ ಸಿಂಗ್ ಅವರ ಸಾಧನೆ ನಿಜಕ್ಕೂ ಅನುಕರಣೀಯ ಎಂದು ರೇಷ್ಮ ಕೌರ್ ಹೆಮ್ಮೆಪಟ್ಟಿದ್ದಾರೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಮಳೆ ಅವಾಂತರ ; ಗಾಳಿಗೆ ಮರಬಿದ್ದು 50 ಬೈಕ್ ಜಖಂ,ಇಬ್ಬರಿಗೆ ಗಾಯ
ಇತ್ತೀಚೆಗಷ್ಟೇ ಪಂಜಾಬ್‍ನಲ್ಲಿ ಎಎಪಿ ಪಕ್ಷ ಭರ್ಜರಿ ಜಯಗಳಿಸಿ ಅಧಿಕಾರದ ಗದ್ದುಗೆ ಏರಿತ್ತು. ಈಗ ಬೀದರ್ ಹಳೇ ವಿದ್ಯಾರ್ಥಿ ಪಂಜಾಬ್ ವಿಧಾನಸಭಾಧ್ಯಕ್ಷರಾಗಿದ್ದು, ಜಿಲ್ಲೆಯ ಜನರಿಗೆ ಹರ್ಷವನ್ನುಂಟು ಮಾಡಿದೆ. ಕುಲ್ತಾರ್ ಸಿಂಗ್ ಕೊಟಕಾಪುರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಈ ಸಮಾರಂಭದಲ್ಲಿ ವಿವಿಧ ಬ್ಯಾಚ್‌ಗಳ ವ್ಯಾಸಂಗ ಮಾಡಿದ 140ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.