ಬೀದರ್: ಜಿಲ್ಲೆಯಲ್ಲಿ ನಿನ್ನೆ 8 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, 12 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
![Bidar: Corona to 8 people, 12 released ...](https://etvbharatimages.akamaized.net/etvbharat/prod-images/kn-bdr-05-28-coronaupdatebdr-7203280-av-01_28102020234335_2810f_1603908815_921.jpg)
ಸದ್ಯ 64 ಕೊರೊನಾ ಸೋಂಕಿತರು ವಿವಿಧ ಕೊರೊನಾ ವಾರ್ಡ್ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿವರೆಗೆ 6872 ಜನರು ಕೊರೊನಾ ಸೋಂಕಿಗೆ ಒಳಗಾಗಿದ್ದು, 6641 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 163 ಸೋಂಕಿತರು ಸಾವನಪ್ಪಿದ್ದಾರೆ ಎಂದು ಕೊರೊನಾ ಬುಲೆಟಿನ್ನಲ್ಲಿ ವಿವರಿಸಲಾಗಿದೆ.