ETV Bharat / state

ಬಸವಕಲ್ಯಾಣ, ಇಂದು ಮೂವರಿಗೆ ಪಾಸಿಟಿವ್: ಸೋಂಕಿತರ ಸಂಖ್ಯೆ 5ಕ್ಕೆ ಏರಿಕೆ - ಇಂದು ಮೂವರಿಗೆ ಪಾಸಿಟಿವ್, ಸೋಂಕಿತರ ಸಂಖ್ಯೆ 5ಕ್ಕೆ ಏರಿಕೆ

ಬಸವಕಲ್ಯಾಣ ತಾಲೂಕಿನ ಮೂವರು ವಲಸೆ ಕಾರ್ಮಿಕರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ತಾಲೂಕಿನಲ್ಲಿ ಇದುವರೆಗೆ ಸೋಂಕು ಪತ್ತೆಯಾದವರ ಸಂಖ್ಯೆ 5ಕ್ಕೆ ಏರಿದೆ.

Basavakalyana, today corona  positives for all three
ಬಸವಕಲ್ಯಾಣ, ಇಂದು ಮೂವರಿಗೆ ಪಾಸಿಟಿವ್, ಸೋಂಕಿತರ ಸಂಖ್ಯೆ 5ಕ್ಕೆ ಏರಿಕೆ
author img

By

Published : May 25, 2020, 12:01 AM IST

ಬಸವಕಲ್ಯಾಣ: ಮಹಾರಾಷ್ಟ್ರದ ಮುಂಬೈ ನಗರಕ್ಕೆ ತೆರಳಿ ಗ್ರಾಮಕ್ಕೆ ಮರಳಿದ ತಾಲೂಕಿನ ಮೂವರು ವಲಸೆ ಕಾರ್ಮಿಕರಲ್ಲಿ ಮಹಾಮಾರಿ ಕೊರೊನಾ ಸೋಂಕು ದೃಢಪಟ್ಟಿದೆ. ತಾಲೂಕಿನಲ್ಲಿ ಇದುವರೆಗೆ ಸೋಂಕು ಪತ್ತೆಯಾದವರ ಸಂಖ್ಯೆ 5ಕ್ಕೆ ಏರಿದೆ.

Basavakalyana, today corona  positives for all three
ಬಸವಕಲ್ಯಾಣ, ಇಂದು ಮೂವರಿಗೆ ಪಾಸಿಟಿವ್, ಸೋಂಕಿತರ ಸಂಖ್ಯೆ 5ಕ್ಕೆ ಏರಿಕೆ

ತಾಲೂಕಿನ ಧನ್ನೂರ(ಕೆ)ವಾಡಿಯ ಒಂದೇ ಕುಟುಂಬದ ಇಬ್ಬರು ಮತ್ತು ಉಜಳಂಬ ಗ್ರಾಮದ ಯುವಕನೊಬ್ಬನಲ್ಲಿ ಸೋಂಕು ದೃಢಪಟ್ಟಿದ್ದು, ಇವರೆಲ್ಲರನ್ನು ಬೀದರ್ ನ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಧನ್ನೂರ(ಕೆ)ವಾಡಿಯ ದಂಪತಿ ತಮ್ಮ ಇಬ್ಬರು ಮಕ್ಕಳೊಂದಿಗೆ ಕಳೆದ 15ರಂದು ಮುಂಬೈನಿಂದ ವಾಡಿಗೆ ಮರಳಿದ್ದು, ನಾಲ್ವರು ಸಹ ಧನ್ನೂರಪುನರ್ ‌ವಸತಿ ಕೇಂದ್ರದ ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿದ್ದರು.

ಇವರಲ್ಲಿ 54 ವರ್ಷದ ಮಹಿಳೆ ಮತ್ತು ಇವರ 21 ವರ್ಷದ ಪುತ್ರನಲ್ಲಿ ಸೋಂಕು ಪತ್ತೆಯಾಗಿದೆ. ಮುಂಬೈಗೆ ತೆರಳಿದ ಉಜಳಂಬ ಗ್ರಾಮದ ಮೂವರು ಯುವಕರು ಕಳೆದ 13ರಂದು ಮುಂಬೈನಿಂದ ಗ್ರಾಮಕ್ಕೆ ಮರಳಿದ್ದು, ಗ್ರಾಮದ ಸರ್ಕಾರಿ ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿದ್ದರು, ಇವರಲ್ಲಿ 24 ವರ್ಷದ ಓರ್ವ ಯುವಕನಿಗೆ ಕಳೆದ 17ರಂದು ನೆಗಡಿ ಸೇರಿದಂತೆ ಇತರ ಲಕ್ಷಣಗಳು ಕಂಡಬಂದ ಹಿನ್ನೆಲೆಯಲ್ಲಿ ನಗರದ ಸರ್ಕಾರಿ ಅಸ್ಪತ್ರೆ ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇತನಲ್ಲಿ ಭಾನುವಾರ ಸೋಂಕು ದೃಢಪಟ್ಟಿದ್ದು, ಬೀದರ್ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ.

ಇದೇ ವಾಡಿಯಲ್ಲಿ ಈಗ ಮತ್ತೆ ಇಬ್ಬರಲ್ಲಿ ಸೋಂಕು ಪತ್ತೆಯಾಗಿರುವುದು ಸಹಜವಾಗಿ ವಾಡಿ ಸೇರಿ ತಾಲೂಕಿನ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಪರಿಶೀಲನೆ: ಧನ್ನೂರ ವಾಡಿಯಲ್ಲಿ 15 ರಂದು ವ್ಯಕ್ತಿಯೊಬ್ಬನಲ್ಲಿ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈಗ ಮತ್ತೆ ಇದೇ ವಾಡಿಯ ಇಬ್ಬರಲ್ಲಿ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಸಾವಿತ್ರಿ ಸಲಗರ್ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮುಂಬೈನಿದ ಆಗಮಿಸಿದ ನಾಲ್ವರ ಟ್ರಾವೆಲ್​ ಹಿಸ್ಟರಿ ಇವರ ಸಂಪರ್ಕಕ್ಕೆ ಬಂದವರ ಮಾಹಿತಿ ಪಡೆದರು.

ಉಜಳಂಬ ಗ್ರಾಮದ ಯುವಕನೊಬ್ಬನಲ್ಲಿ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಅಗತ್ಯವಿರುವ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲು ಸಿದ್ದತೆ ನಡೆದಿದೆ. ಸಿಪಿಐ ಮಹೇಶಗೌಡ ಪಾಟೀಲ್, ಪಿಎಸ್‌ಐ ಬಸಲಿಂಗಪ್ಪ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.