ETV Bharat / state

ಜೆಸಿಬಿಯಿಂದ ಬ್ಯಾಂಕ್ ಕಟ್ಟಡ ಧ್ವಂಸ: ಖದೀಮರಿಂದ ಬ್ಯಾಂಕ್​​ ಕಳ್ಳತನಕ್ಕೆ ಯತ್ನ

ಜೆಸಿಬಿ ಯಂತ್ರ ಬಳಸಿ ಬ್ಯಾಂಕ್ ಕಟ್ಟಡ ಧ್ವಂಸಗೊಳಿಸುವ ಮೂಲಕ, ಕಳ್ಳತನ ಮಾಡಲು ಕಳ್ಳರು ಮುಂದಾದ ಘಟನೆ ಬೀದರ್​​ನ ಔರಾದ್​​ ತಾಲೂಕಿನ ಸಂತಪೂರ್​​ ಗ್ರಾಮದ ಸ್ಟೇಟ್​​ ಬ್ಯಾಂಕ್​​ನಲ್ಲಿ ನಡೆದಿದೆ.

attempt to bank robbery by theives
ಖದೀಮರಿಂದ ಬ್ಯಾಂಕ್​​ ಕಳ್ಳತನಕ್ಕೆ ಯತ್ನ
author img

By

Published : Feb 11, 2020, 12:05 PM IST

ಬೀದರ್: ಕಳ್ಳರು ಬ್ಯಾಂಕ್​ ಕಟ್ಟಡ ಧ್ವಂಸಗೊಳಿಸುವ ಮೂಲಕ ದರೋಡೆ ಮಾಡಲು ಯತ್ನಿಸಿ, ಬಳಿಕ ಬ್ಯಾಂಕ್​ನ ಸೈರನ್​​​ ಸೌಂಡ್​​ ಮಾಡ್ತಿದ್ದಂತೆ ಪರಾರಿಯಾದ ಘಟನೆ ಜಿಲ್ಲೆಯ ಔರಾದ್​​ ತಾಲೂಕಿನ ಸಂತಪೂರ್​​ ಗ್ರಾಮದ ಸ್ಟೇಟ್​​ ಬ್ಯಾಂಕ್​​ನಲ್ಲಿ ನಡೆದಿದೆ.

ಖದೀಮರಿಂದ ಬ್ಯಾಂಕ್​​ ಕಳ್ಳತನಕ್ಕೆ ಯತ್ನ

ಜೆಸಿಬಿ ಯಂತ್ರ ಬಳಸಿ ಬ್ಯಾಂಕ್ ಕಟ್ಟಡ ಧ್ವಂಸಗೊಳಿಸಲು ಕಳ್ಳರು ಮುಂದಾಗಿದ್ದಾರೆ. ಆದರೆ, ಬ್ಯಾಂಕ್​​ನ ಸೈರನ್ ಸೌಂಡ್ ಮಾಡ್ತಿದ್ದಂತೆ ಭಯದಿಂದ ಪರಾರಿಯಾಗಿದ್ದಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್​​ನ ಕಟ್ಟಡದ ಲಾಕರ್ ಇರುವ ಕೊಠಡಿಯನ್ನು ಜೆಸಿಬಿ ಯಂತ್ರದ ಮೂಲಕ ಧ್ವಂಸಗೊಳಿಸಲಾಗಿದೆ. ಕಟ್ಟಡದ ಕಿಟಕಿ ಮುರಿಯುತ್ತಿದ್ದಂತೆ ಸೈರನ್ ಸೌಂಡ್ ಮಾಡಿದೆ ಎನ್ನಲಾಗ್ತಿದೆ.

ಇದರಿಂದ ಜೆಸಿಬಿಯನ್ನು ಸ್ಥಳದಲ್ಲೇ ಬಿಟ್ಟು ಕಳ್ಳರು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಎಸ್.ಪಿ ನಾಗೇಶ ಡಿಎಲ್, ಡಿವೈಎಸ್ ಪಿ ಡಾ. ದೇವರಾಜ್. ಬಿ ಭೇಟಿ ನೀಡಿದ್ದಾರೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ವಶಕ್ಕೆ ತೆಗೆದುಕೊಂಡ ಸಂತಪೂರ ಪೊಲೀಸ್ ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.