ಬೀದರ್ : ಕಬ್ಬಿನ ಗದ್ದೆಯಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಅಬಕಾರಿ ಇಲಾಖೆಯ ಪೊಲೀಸರು ಆತನಿಂದ 32 ಕೆಜಿ ಗಾಂಜಾ ಬೆಳೆಯನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಹುಮನಾಬಾದ್ ತಾಲೂಕಿನ ಜಲಸಂಗಿ ಗ್ರಾಮದ ಮಹಬೂಬ್ ಪಟೇಲ್ ಎಂಬಾತನ ಗದ್ದೆಯಲ್ಲಿ ಈ ಪ್ರಮಾಣದ ಅಕ್ರಮ ಗಾಂಜಾ ಬೆಳೆಯಲಾಗಿತ್ತು. ಸುದ್ದಿ ತಿಳಿದು ಅಬಕಾರಿ ಇಲಾಖೆಯ ಪೊಲೀಸರು ದಾಳಿ ಮಾಡಿದ್ದಾರೆ.
ಅಲ್ಲದೆ ಬೀದರ್-ಕಲಬುರಗಿ ಹೆದ್ದಾರಿ ಜಲಸಂಗಿ ಕ್ರಾಸ್ ಬಳಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಬಸವಕಲ್ಯಾಣ ತಾಲೂಕಿನ ಘಾಟಹಿಪ್ಪರಗಾ ಗ್ರಾಮದ ಜಯಪ್ರಕಾಶ ಪೋಸ್ತೆ ಎಂಬಾತನನನ್ನು ಬಂಧಿಸಿದ ಪೊಲೀಸರು, ಆತನಿಂದ 4.5 ಕೆಜಿ ಗಾಂಜಾ ಜಪ್ತಿ ಮಾಡಿಕೊಂಡಿದ್ದಾರೆ.
ಅಬಕಾರಿ ಜಿಲ್ಲಾಧಿಕಾರಿ ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಅನೀಲಕುಮಾರ್ ಪೊದ್ದಾರ್, ಇನ್ಸ್ಪೆಕ್ಟರ್ ದೇವಿದಾಸ ಭೋಸ್ಲೆ, ಪಿಎಸ್ಐ ಜೆಟೆಪ್ಪ ಅವರ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿದ್ದಾರೆ.