ETV Bharat / state

ವಿಜಯನಗರ: ಮದುವೆಗೆ 3 ದಿನ ಇರುವಾಗ ಪ್ರಿಯಕರನ ಮನೆಯಲ್ಲೇ ಯುವತಿ ಅನುಮಾನಾಸ್ಪದ ಸಾವು - ನಿಶಾನಿ ಕ್ಯಾಂಪ್​

ಮದುವೆಗೆ ಮೂರು ದಿನ ಇರುವಾಗಲೇ ಪ್ರಿಯಕರನ ಮನೆಯಲ್ಲೇ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಹೊಸಪೇಟೆ ತಾಲೂಕಿನಲ್ಲಿ ನಡೆದಿದೆ.

young-woman-commits-suicide-in-hosapete
ಯುವತಿ ಅನುಮಾನಾಸ್ಪದ ಸಾವು
author img

By ETV Bharat Karnataka Team

Published : Nov 20, 2023, 5:59 PM IST

ಯುವತಿ ಸಾವು ಪ್ರಕರಣದ ಬಗ್ಗೆ ಎಸ್​ಪಿ ಮಾಹಿತಿ

ವಿಜಯನಗರ: ಮದುವೆಗೆ ಕೇವಲ ಮೂರು ದಿನ ಇರುವಾಗಲೇ ಪ್ರಿಯಕರನ ಮನೆಯಲ್ಲೇ ಯುವತಿ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಹೊಸಪೇಟೆ ತಾಲೂಕಿನ ಟಿ ಬಿ ಡ್ಯಾಂ ಪೊಲೀಸ್ ಠಾಣೆ ವ್ಯಾಪ್ತಿಯ ನಿಶಾನಿ ಕ್ಯಾಂಪ್​ನಲ್ಲಿ ಬೆಳಕಿಗೆ ಬಂದಿದೆ. ಯುವತಿಯು ಪ್ರೀತಿಸುತ್ತಿದ್ದ ಯುವಕನ ಕಡೆಯವರು ನಿಂದನೆ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಮೃತಳ ಪೋಷಕರು ದೂರಿದ್ದಾರೆ.

ನಗರದ ಟಿ.ಬಿ ಡ್ಯಾಂನ ಐಶ್ವರ್ಯ (29) ಮೃತ ಯುವತಿ. ಐಶ್ವರ್ಯ ಹಾಗೂ ಇದೇ ಪ್ರದೇಶದ ಆಶೋಕ್​ ಎಂಬುವರು ಪರಸ್ಪರ ಪ್ರೀತಿಸುತ್ತಿದ್ದರು. ಯುವತಿ ದಲಿತ ಸಮುದಾಯದವಳಾಗಿದ್ದು, ಅಂತರ್ಜಾತಿ ಹಿನ್ನೆಲೆ ಇವರ ಪ್ರೀತಿಗೆ ಪೋಷಕರಿಂದ ವಿರೋಧ ವ್ಯಕ್ತವಾಗಿತ್ತು. ಆದರೆ, ಇತ್ತೀಚೆಗೆ ಎಲ್ಲರನ್ನೂ ಒಪ್ಪಿಸಿ ಮದುವೆಗೆ ಸಿದ್ಧರಾಗಿದ್ದರು. ಈ ನಡುವೆ ಯುವತಿ ಭಾನುವಾರ ಮೃತಪಟ್ಟಿದ್ದಾಳೆ. ಯುವಕ ಮೇಲ್ಜಾತಿಯವನಾಗಿದ್ದು, ಇದೇ ವಿಚಾರ ಇಟ್ಟುಕೊಂಡು ಆತನ ಕಡೆಯವರು ಯುವತಿಗೆ ನಿಂದಿಸಿ ಮಾನಸಿಕ ಕಿರುಕುಳ ನೀಡಿದ್ದಾರೆ. ಇದರಿಂದ ನೊಂದು ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಯುವತಿಯ ಪೋಷಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ದೂರಿನಲ್ಲಿ ಏನಿದೆ?: ಐಶ್ವರ್ಯ ಹಾಗೂ ಅಶೋಕ್‌ ಪರಸ್ಪರ ಪ್ರೀತಿಸುತ್ತಿದ್ದು, ಆತ ಮೇಲ್ಜಾತಿಗೆ ಸೇರಿದವನಾಗಿದ್ದಾನೆ. ಆದರೂ ಕೂಡ ಮದುವೆಗೆ ಒಪ್ಪಿಗೆ ಸೂಚಿಸಿದ್ದರು. ನವೆಂಬರ್‌ 23 ರಂದು ಹೊಸಪೇಟೆಯ ಸಾಯಿಲೀಲಾ ಮಂಟಪದಲ್ಲಿ ಮದುವೆ ನಿಶ್ಚಯವಾಗಿತ್ತು. ಆದರೆ, ನಿಮ್ಮ ಹುಡುಗಿಯನ್ನು ಮದುವೆ ಮಾಡಿಕೊಂಡರೆ ನಮಗೆ ಮರ್ಯಾದೆ ಇರುವುದಿಲ್ಲ. ಹುಡುಗಿಯನ್ನು ಅಶೋಕನ ಅಜ್ಜಿ ಮನೆಗೆ ಮದುವೆಗಿಂತ ಒಂದು ವಾರ ಮುಂಚಿತವಾಗಿ ಕಳಿಸಿ ಕೊಡಬೇಕು. ಮದುವೆ ನೀವು ಯಾರೂ ಬರಬಾರದು. ಹುಡುಗಿಯ ತಂದೆ ತಂಗಿ ಮಾತ್ರ ಮದುವೆಗೆ ಬರಬೇಕು. ಸಂಬಂಧಿಕರು ಯಾರೂ ಕೂಡ ಬರುವಂತಿಲ್ಲ ಎಂದು ತಾಕೀತು ಮಾಡಿದ್ದರು. ಅದರಂತೆ ಐಶ್ವರ್ಯಳನ್ನು ಕಳೆದ ಬುಧವಾರ ಹುಡುಗನ ಮನೆಗೆ ತಂದು ಬಿಡಲಾಗಿತ್ತು. ಆದರೆ, ಆದರೆ ಮನೆಯಲ್ಲಿ ಮದುವೆ ವಿಚಾರವಾಗಿ ಅಶೋಕನ ದೊಡ್ಡಪ್ಪನ ಮಕ್ಕಳು ಜಾತಿ ವಿಚಾರ ಮುಂದಿಟ್ಟುಕೊಂಡು ಅವಮಾನಕರವಾಗಿ ಮಾತನಾಡಿದ್ದಾರೆ. ಜಾತಿ ವಿಚಾರವಾಗಿ ಹುಡುಗನ ಮನೆಯವರು ನಿಂದಿಸಿದ್ದಲ್ಲದೇ, ಮನೆಯಲ್ಲಿ ಯಾರೂ ಆಕೆಯ ಜೊತೆ ಮಾತನಾಡುತ್ತಿರಲಿಲ್ಲ ಎಂದು ಪೋಷಕರು ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಎಸ್​ಪಿ ಹೇಳಿದ್ದಿಷ್ಟು: ''ನ.19ರಂದು ಯುವತಿ ಐಶ್ವರ್ಯ (29) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಬಗ್ಗೆ ಆಕೆಯ ತಂದೆ ದೂರು ಸಲ್ಲಿಸಿದ್ದಾರೆ. ಇದರ ಆಧಾರದ ಮೇಲೆ ಪೊಲೀಸ್​ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ, ಐಶ್ವರ್ಯ ಹಾಗೂ ಅಶೋಕ್​ ಸುಮಾರು 10 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಅಲ್ಲದೇ, ನ.23ರಂದು ಮದುವೆ ನಿಶ್ಚಯವಾಗಿರುವುದು ಗೊತ್ತಾಗಿದೆ''.

''ಆದರೆ ಯುವತಿ ಕೆಳಜಾತಿಗೆ ಸಂಬಂಧಪಟ್ಟವರಾಗಿದ್ದರು, ಅಶೋಕ್​ ಹಾಗೂ ಆತನ ಕುಟುಂಬಸ್ಥರು ಮಾನಸಿಕ ಕಿರುಕುಳ ನೀಡುತ್ತಿರುವ ಬಗ್ಗೆ ಐಶ್ವರ್ಯ ತನ್ನ ಸಹೋದರಿಯರ ಬಳಿ ಹೇಳಿಕೊಂಡಿದ್ದಳು. ಈ ಪ್ರಕರಣ ಸಂಬಂಧ ಯುವಕ ಸೇರಿ 6 ಮಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಇವರಲ್ಲಿ 5 ಮಂದಿಯನ್ನು ಪೊಲೀಸ್​ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ. ಈ ಬಗ್ಗೆ ತನಿಖೆ ಮುಂದುವರೆದಿದೆ'' ಎಂದು ಎಸ್​ಪಿ ಶ್ರೀಹರಿಬಾಬು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಒಂದೇ ಕುಟುಂಬದ 6 ಜನರ ಮೇಲೆ ಮನಬಂದಂತೆ ಗುಂಡು ಹಾರಿಸಿದ ಭಗ್ನಪ್ರೇಮಿ; ಯುವತಿ ಸೇರಿ ಮೂವರು ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.