ಬಳ್ಳಾರಿ : ಪತ್ನಿಯ ಶೀಲ ಶಂಕಿಸಿ ನಿತ್ಯ ಕಿರುಕುಳ ನೀಡುತ್ತಿದ್ದ ಗಂಡನ ಹಿಂಸೆ ತಾಳಲಾರದೇ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದ ಆರೋಪ ದೂರು ಸಂಡೂರು ತಾಲೂಕಿನಲ್ಲಿ ದಾಖಲಾಗಿದೆ.
ಆತ್ಮಹತ್ಯೆಗೆ ಶರಣಾದ ಗೌರಮ್ಮ ಎಂಬುವವರು ಹುಣೇಸೆಕಾಯಿ ಕುಮಾರಸ್ವಾಮಿ ಎಂಬುವವರೊಂದಿಗೆ ಮದುವೆ ಆಗಿದ್ದರು. ಪತಿ, ಮದುವೆ ಆದಗಿನಿಂದಲೂ ಪತ್ನಿಯ ಶೀಲ ಶಂಕಿಸಿ ನಿತ್ಯ ಕಿರುಕುಳ ನೀಡುತ್ತಿದ್ದ. ಕಿರುಕುಳ ಸಹಿಸಿಕೊಳ್ಳಲು ಆಗದೆ ಗೌರಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ತಾಯಿ ನಾಗಮ್ಮ ದೂರು ನೀಡಿದ್ದಾರೆ.
ಫೆಬ್ರವರಿ 16ರಂದು ಕುಮಾರಸ್ವಾಮಿ, 'ನನ್ನನ್ನು ಬಿಟ್ಟು ಹೋಗು. ನಾನು ಬೇರೆಯೊಬ್ಬಳ್ಳನ್ನು ಮದುವೆಯಾಗುತ್ತೇನೆ' ಎಂದು ಹೆಂಡತಿ ಜೊತೆ ಜಗಳವಾಡಿದ್ದಾನೆ ಎಂಬದನ್ನು ನೆರೆಹೊರೆಯವರ ಹೇಳಿಕೆ.
ಪತಿಯ ಕಿರುಕುಳ ತಾಳಲಾರದೆ ಆಕೆ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಮುಂದಾಗಿದ್ದಾಳೆ. ತೀವ್ರ ಗಾಯಗೊಂಡಿದ್ದ ಗೌರಮ್ಮಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿಯ ವಿಮ್ಸ್ಗೆ ದಾಖಲು ಮಾಡಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
ಈ ಸಂಬಂಧ ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.