ಹೊಸಪೇಟೆ: ಜಿಲ್ಲೆಯ ಕಂಪ್ಲಿ ಪಟ್ಟಣದಲ್ಲಿ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ.
ಮೃತ ಮಹಿಳೆಯನ್ನು ಶಾರದಮ್ಮ ಶೆಟ್ಟರ (58) ಎಂದು ಗುರುತಿಸಲಾಗಿದೆ. ಪಟ್ಟಣದ ಭಾರತ್ ಟಾಕೀಸ್ ಬಳಿಯ ರಾಮಲಿಂಗ ದೇಗುಲದ ಪಕ್ಕದ ಮನೆಯಲ್ಲಿ ಶಾರದಮ್ಮ ವಾಸವಿದ್ದರು. ಕಳೆದ 9 ತಿಂಗಳ ಹಿಂದೆಯಷ್ಟೇ ಶಾರದಮ್ಮ ಅವರ ಪತಿ ವೇಣುಗೋಪಾಲ ಅನಾರೋಗ್ಯದಿಂದ ನಿಧನ ಹೊಂದಿದ್ದರು. ಹೀಗಾಗಿ ಶಾರದಮ್ಮ ಅವರು ಮನೆ ಬಳಿಯೇ ಕಿರಾಣಿ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು.
ಮೃತ ಮಹಿಳೆಯ ತಲೆಗೆ ಬಲವಾದ ಪೆಟ್ಟು ಬಿದ್ದು ನೆತ್ತರು ಹರಿದಿರುವುದು ಕಂಡು ಬಂದಿದೆ. ಬೆಳಗ್ಗೆ ಕೆಲಸದಾಕೆ ಬಂದು ನೋಡಿದಾಗ ಮೃತಪಟ್ಟಿರುವ ವಿಚಾರ ಗೊತ್ತಾಗಿದೆ. ಕಂಪ್ಲಿ ಸಿಪಿಐ ನೇತೃತ್ವದ ತಂಡ ಪರಿಶೀಲನೆ ಬಳಿಕ ತನಿಖೆ ಕೈಗೊಂಡಿದೆ.