ಹೊಸಪೇಟೆ (ವಿಜಯನಗರ): ವಿಶ್ವವಿಖ್ಯಾತ ಹಂಪಿಗೆ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು ಕುಟುಂಬ ಸಮೇತ ಭೇಟಿ ನೀಡಿದ್ದಾರೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನ ವಿರೂಪಾಕ್ಷೇಶ್ವರ ದೇವಸ್ಥಾನದ ಲಕ್ಷ್ಮೀ ಆನೆ ಹೂವಿನ ಮಾಲೆ ಹಾಕುವ ಮೂಲಕ ಸ್ವಾಗತಿಸಿತು.
ಬಳಿಕ ವಿರೂಪಾಕ್ಷೇಶ್ವರ, ಪಾರ್ವತಿ, ಭುವನೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಹಂಪಿಯ ವಿದ್ಯಾರಣ್ಯ ಪೀಠದ ವಿದ್ಯಾರಣ್ಯ ಭಾರತಿ ಶ್ರೀಗಳು ಉಪಸ್ಥಿತರಿದ್ದರು. ಭೇಟಿ ವೇಳೆ ಹಂಪಿಯ ಸ್ಮಾರಕ, ಕಲ್ಲಿನ ರಥ ಹಾಗೂ ವಾಸ್ತುಶಿಲ್ಪ ಕಂಡು ಬೆರಗಾಗಿದ್ದಾರೆ. ವೆಂಕಯ್ಯ ನಾಯ್ಡು ಅವರ ಭೇಟಿ ಹಿನ್ನೆಲೆ ಹಂಪಿಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಇಂದಿನ ವಿವಿಧ ಕಾರ್ಯಕ್ರಮಗಳ ಬಳಿಕ ನಾಳೆ ಬೆಳಗ್ಗೆ ಅವರು ಹುಬ್ಬಳ್ಳಿಗೆ ಪ್ರಯಾಣ ಬೆಳೆಸಲಿದ್ದಾರೆ.
![Vice president Venkaiah Naidu visits Hampi Temple](https://etvbharatimages.akamaized.net/etvbharat/prod-images/kn-hpt-02-vice-president-venki-naydu-visit-hampi-vsl-ka10031_21082021103401_2108f_1629522241_786.jpg)
![Vice president Venkaiah Naidu visits Hampi Temple](https://etvbharatimages.akamaized.net/etvbharat/prod-images/kn-hpt-02-vice-president-venki-naydu-visit-hampi-vsl-ka10031_21082021103401_2108f_1629522241_466.jpg)
![Vice president Venkaiah Naidu visits Hampi Temple](https://etvbharatimages.akamaized.net/etvbharat/prod-images/kn-hpt-02-vice-president-venki-naydu-visit-hampi-vsl-ka10031_21082021103401_2108f_1629522241_498.jpg)