ಬಳ್ಳಾರಿ : ಲಾಕ್ ಡೌನ್ ಉಲ್ಲಂಘಿಸಿ ಅನಾವಶ್ಯಕವಾಗಿ ಓಡಾಡ್ತಿದ್ದ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಗರ ಮೋತಿ ಸರ್ಕಲ್ ನಲ್ಲಿ ಕಾರ್ಯಚರಣೆ ನಡೆಸಿದ ಪೊಲೀಸರು, ವಾಹನಗಳನ್ನು ವಶಪಡಿಸಿಕೊಂಡು ಠಾಣೆಯಲ್ಲಿಟ್ಟಿದ್ದಾರೆ. ಹೀಗಾಗಿ ನಗರದ ಗಾಂಧಿ ನಗರ, ಬ್ರೂಸ್ ಪೇಟ್ ಪೊಲೀಸ್ ಠಾಣೆ ಮತ್ತು ಸಂಚಾರಿ ಪೊಲೀಸ್ ಠಾಣೆಗಳ ಆವರಣದಲ್ಲಿ ವಾಹನ ಚಾಲಕರು ಜಮಾಯಿಸಿದ್ದರು.
ಲಾಕ್ ಡೌನ್ ಉಲ್ಲಂಘಿಸಿ ರಸ್ತೆಗಿಳಿದ ವಾಹನಗಳು ವಾಹನಗಳು ಸೀಝ್ ಈ ಕುರಿತು ಪ್ರತಿಕ್ರಯಿಸಿದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸಿ.ಕೆ ಬಾಬಾ, ಅಂತರ್ ಜಿಲ್ಲೆ ಮತ್ತು ರಾಜ್ಯ ಗಡಿಗಳು ಸಂಪೂರ್ಣ ಬಂದ್ ಆಗಿವೆ. ಈ ನಡುವೆ ಬೆಂಗಳೂರಿನಿಂದ ನೂರಾರು ಟಾಟಾ ಸುಮೋ, ಕ್ರೂಷರ್ ವಾಹನಗಳು ನಗರದಲ್ಲಿ ಹೇಗೆ ಬಂದಿವೆ ಎಂದು ತಿಳಿಯುತ್ತಿಲ್ಲ. ವಶಪಡಿಸಿಕೊಂಡ ವಾಹನಗಳನ್ನು ಯಾವುದೇ ಕಾರಣಕ್ಕೂ ಕೊರೊನಾ ವೈರಸ್ ಮುಕ್ತಾಯವಾಗುವವರೆಗೂ ವಾಪಸ್ ನೀಡಲ್ಲ. ನಂತರ ಅದಕ್ಕೆ ದಂಡ ಕಟ್ಟಿಸಿಕೊಂಡು ಕೊಡುತ್ತೇವೆ ಎಂದರು.