ETV Bharat / state

ಈಜೀಟ್ಯಾಪ್ ಮೆಷಿನ್​ ಮೂಲಕ ದಂಡ, ಕರ ಸಂಗ್ರಹ ; ಕಾಗದ ರಹಿತ ವ್ಯವಸ್ಥೆಗೆ ಚಾಲನೆ

ಒಂದು ವೇಳೆ ಕೈ ಬರಹದ ಮೂಲಕ ರಶೀದಿ ನೀಡಿದ್ದು ಕಂಡು ಬಂದಲ್ಲಿ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈ ಕರ ಸಂಗ್ರಹಕ್ಕಾಗಿ 46 ಮೆಷಿನ್​​ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಅವುಗಳನ್ನು ಹೆಚ್​ಡಿಎಫ್​​ಸಿ ಬ್ಯಾಂಕ್​​​​ ಉಚಿತವಾಗಿ ನೀಡಿದೆ. ಸಿಬ್ಬಂದಿಗೆ ತರಬೇತಿ ನೀಡಲಾಗಿದೆ..

Use of the EasyTap Machine to collect the fine
ಈಜೀಟ್ಯಾಪ್ ಮೆಷಿನ್​ ಬಳಕೆಗೆ ಚಾಲನೆ
author img

By

Published : Jul 8, 2020, 8:49 PM IST

ಬಳ್ಳಾರಿ: ನೀರು, ಒಳಚರಂಡಿ, ಆಸ್ತಿ ಕರ ಹಾಗೂ ಇನ್ನಿತರ ದಂಡ ವಸೂಲಾತಿಗೆ ಕೈಬರಹ ರಶೀದಿ ಬದಲಿಗೆ, ಇನ್ಮುಂದೆ ಮೆಷಿನ್​​​ ಬಳಸಲಾಗುತ್ತದೆ ಎಂದು ಎಂದು ಮಹಾನಗರ ಪಾಲಿಕೆ ಆಯುಕ್ತೆ ತುಷಾರಮಣಿ ತಿಳಿಸಿದರು.

ಕಾಗದ ರಹಿತ ವ್ಯವಸ್ಥೆ ಅಳವಡಿಸಿಕೊಂಡಿರುವ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೈ ಬರಹದ ರಶೀದಿ ನೀಡುವುದಕ್ಕೆ ಇತಿಶ್ರೀ ಹಾಡಲಾಗಿದೆ. ಈಜೀಟ್ಯಾಪ್ ಮೆಷಿನ್​ ಮೂಲಕ ಕರ ಸಂಗ್ರಹ ಹಾಗೂ ದಂಡ ವಸೂಲಿ ಮಾಡಲಾಗುತ್ತದೆ. ಈ ಮೂಲಕ ಅವ್ಯವಹಾರಗಳಿಗೆ ಕಡಿವಾಣ ಹಾಕಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಒಂದು ವೇಳೆ ಕೈ ಬರಹದ ಮೂಲಕ ರಶೀದಿ ನೀಡಿದ್ದು ಕಂಡು ಬಂದಲ್ಲಿ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈ ಕರ ಸಂಗ್ರಹಕ್ಕಾಗಿ 46 ಮೆಷಿನ್​​ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಅವುಗಳನ್ನು ಹೆಚ್​ಡಿಎಫ್​​ಸಿ ಬ್ಯಾಂಕ್​​​​ ಉಚಿತವಾಗಿ ನೀಡಿದೆ. ಸಿಬ್ಬಂದಿಗೆ ತರಬೇತಿ ನೀಡಲಾಗಿದೆ ಎಂದರು.

ಈಜೀಟ್ಯಾಪ್ ಮೆಷಿನ್​ ಬಳಕೆಗೆ ಚಾಲನೆ

ಇ-ಆಸ್ತಿ ಅರ್ಜಿ ಕೊಡುವುದು ಆರಂಭ : ಪಾಲಿಕೆಯಲ್ಲಿ ಇ-ಆಸ್ತಿ ಅರ್ಜಿ (ಇ-ಆಸ್ತಿ ಡಿಜಿಟೈಸ್ ಫಾರ್ಮಾಟ್) ಕೊಡುವುದನ್ನು ಆರಂಭಿಸಲಾಗಿದೆ. ಮೊದಲು ಕೈಯಲ್ಲಿ ಬರೆದುಕೊಡುತ್ತಿದ್ದ ಕಾರಣ ಬಹಳಷ್ಟು ನಕಲು, ಅವ್ಯವಹಾರದ ದೂರು ಬರುತ್ತಿದ್ದವು. ಈಗ ಅದಕ್ಕೆ ಕಡಿವಾಣ ಬೀಳಲಿದೆ. ಅದರಲ್ಲಿ ಇ-ಆಸ್ತಿಯಲ್ಲಿ ಮನೆ, ಮನೆ ಮಾಲೀಕರ ಚಿತ್ರ, ಮನೆ ಎಷ್ಟು ಮಹಡಿಗಳಿದೆ ಎಂಬುದರ ಚಿತ್ರ ನಮೂದಾಗಲಿದೆ. ಪ್ರತಿ ಇ-ಆಸ್ತಿಗೂ ಪ್ರಾಪರ್ಟಿ ಸಂಖ್ಯೆ ನೀಡಲಾಗುವುದು. ಅದರಲ್ಲಿ ವಾರ್ಡ್, ಬ್ಲಾಕ್, ಬೀದಿ ಮತ್ತು ಮನೆ ನಂಬರ್ ಇರಲಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.