ಬಳ್ಳಾರಿ: ಬೇಕರಿ ಮಾಲೀಕನ ಮನೆ ಬೀಗ ಮುರಿದು ಸುಮಾರು 4 ಲಕ್ಷ ನಗದು ಹಾಗೂ 5 ಕೆ.ಜಿ.ಯಷ್ಟು ಬೆಳ್ಳಿ ಕಳವು ಮಾಡಿರುವ ಘಟನೆ ನಡೆದಿದೆ.
ಇಲ್ಲಿನ ಸತ್ಯನಾರಾಯಣಪೇಟೆ ನಿವಾಸಿ ಜಿ.ವಿ.ಮಂಜುನಾಥ್ ಎಂಬುವವರ ಮನೆ ಬೀಗ ಮುರಿದ ದುಷ್ಕರ್ಮಿಗಳು, ಸುಮಾರು 5 ಕೆ.ಜಿ.ಯಷ್ಟು ಬೆಳ್ಳಿ, 9 ತೊಲೆ ಬಂಗಾರ ಹಾಗೂ 4 ಲಕ್ಷ ನಗದು ಕಳವು ಮಾಡಿದ್ದಾರೆ. ಮಂಜುನಾಥ್ ಅವರು ಬೇಕರಿ ಉದ್ಯಮ ನಡೆಸುತ್ತಿದ್ದು, ಫೆ.15ರಂದು ಕುಟುಂಬ ಸಮೇತ ಊರಿಗೆ ತೆರಳಿದ್ದರು. ಶುಕ್ರವಾರ ಕೆಲಸದವರು ಮನೆ ಸ್ವಚ್ಛ ಮಾಡಲು ಬಂದಾಗ ಕಳತನ ನಡೆದದ್ದು ಬೆಳಕಿಗೆ ಬಂದಿದೆ.
ಈ ಸಂಬಂಧ ಗಾಂಧಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.