ಬಳ್ಳಾರಿ: ಬೆಳಗ್ಗೆ ಗಣಿ ನಗರಿಯ ಜನ ಬೆಚ್ಚಿ ಬಿದ್ದಿದ್ದು, ವ್ಯಕ್ತಿಯೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಮಿಲ್ಲರ್ ಪೇಟೆಯ ಆಟೋ ನಿಲ್ದಾಣದಲ್ಲಿ ಚಾಕುವಿನಿಂದ ತಿವಿದು ಜೀನ್ಸ್ ಫ್ಯಾಕ್ಟರಿಯ ಕಾರ್ಮಿಕ ಇಸ್ಮಾಯಿಲ್ (19) ಎಂಬಾತನನ್ನು ಕೊಲೆ ಮಾಡಲಾಗಿದೆ. ಈ ಘಟನೆಯನ್ನು ಸೆರೆ ಹಿಡಿಯಲು ಹೋಗಿದ್ದ ವ್ಯಕ್ತಿಯ ಮೊಬೈಲ್ ಅನ್ನು ಪೊಲೀಸರು ಕಸಿದುಕೊಂಡಿರುವುದು ಸಾರ್ವಜನಿಕರನ್ನು ಕೆರಳಿಸಿದೆ. ಪೊಲೀಸರು ಘಟನೆಯ ಮಾಹಿತಿ ಗೌಪ್ಯವಾಗಿಡಲು ಕಾರಣವೇನು ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ಈ ಕುರಿತು ಈಟಿವಿ ಭಾರತ್ಗೆ ಪ್ರತಿಕ್ರಿಯಿಸಿರುವ ಬಳ್ಳಾರಿ ನಗರ ಉಪ ವಿಭಾಗದ ಡಿವೈಎಸ್ಪಿ ರಮೇಶ್ ಕುಮಾರ್, ನಗರದ ಮಿಲ್ಲರ್ ಪೇಟೆಯ ಆಟೋ ನಿಲ್ದಾಣದ ಬಳಿ ಇಸ್ಮಾಯಿಲ್ ಎಂಬಾತನ ಕೊಲೆಯಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ತಲೆಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿ ಕೊಲೆ, ಪ್ರಕರಣದಲ್ಲಿ ಅಣ್ಣನೇ ಆರೋಪಿ
ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆಲುವು ಸಾಧಿಸಿರುವುದಕ್ಕೆ ನಮ್ಮ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಲಾಗ್ತಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ಇದು ಪುಷ್ಠಿ ನೀಡುವಂತಿದೆ. ಈ ಬಗ್ಗೆ ಸರಿಯಾದ ಮಾಹಿತಿ ಪೊಲೀಸರೇ ನೀಡಬೇಕಿದೆ.