ETV Bharat / state

ಓದಿದ್ದು ಪಿಯುಸಿ, ಆಗಿದ್ದು ಡಾಕ್ಟರ್​... ಬಳ್ಳಾರಿಯಲ್ಲಿ ಇಬ್ಬರು ನಕಲಿ ವೈದ್ಯರ ಬಣ್ಣ ಬಯಲು - bellary crime news

ಜಿಲ್ಲೆಯ ಕೊಟ್ಟೂರು ತಾಲೂಕಿನಲ್ಲಿ ಖಚಿತ ಮಾಹಿತಿ ಆಧರಿಸಿ ತಹಶೀಲ್ದಾರ್ ಜಿ.ಅನಿಲ್‌ಕುಮಾರ್ ನೇತೃತ್ವದ ತಂಡ ಪಟ್ಟಣದ ಎರಡು ಕ್ಲಿನಿಕ್​‌ ಮೇಲೆ ದಾಳಿ ನಡೆಸಿ ಇಬ್ಬರು ನಕಲಿ ವೈದ್ಯರನ್ನು ಬಂಧಿಸಿದ್ದಾರೆ.

two fake doctors who run the clinic ,arrest
ಕ್ಲಿನಿಕ್​ ನಡೆಸುತ್ತಿದ್ದ ಇಬ್ಬರು ನಕಲಿ ವೈದ್ಯರು ಅಂದರ್​
author img

By

Published : Apr 29, 2020, 8:46 AM IST

ಬಳ್ಳಾರಿ: ನಕಲಿ ದಾಖಲೆ ಇಟ್ಟುಕೊಂಡು ಕ್ಲಿನಿಕ್​‌ ನಡೆಸುತ್ತಿದ್ದ ಇಬ್ಬರು ಫೇಕ್​ ಡಾಕ್ಟರ್​​ಗಳನ್ನು ಪೊಲೀಸರು ಬಂಧಿಸಿದ್ದಾರೆ.

ಜಿಲ್ಲೆಯ ಕೊಟ್ಟೂರು ತಾಲೂಕಿನಲ್ಲಿ ಖಚಿತ ಮಾಹಿತಿ ಆಧರಿಸಿ ತಹಶೀಲ್ದಾರ್ ಜಿ.ಅನಿಲ್‌ಕುಮಾರ್ ನೇತೃತ್ವದ ತಂಡ ಪಟ್ಟಣದ ಎರಡು ಕ್ಲಿನಿಕ್​‌ ಮೇಲೆ ದಾಳಿ ನಡೆಸಿ ಇಬ್ಬರು ನಕಲಿ ವೈದ್ಯರನ್ನು ಬಂಧಿಸಿದ್ದಾರೆ. ಜಗದೀಶ್​ ಹಾಗೂ ಷಣ್ಮುಖಪ್ಪ ಬಂಧಿತರು. ಇವರಿಂದ ಔಷಧಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕೇವಲ ದ್ವಿತೀಯ ಪಿಯು ಮಾತ್ರ ಓದಿದ್ದ ಜಗದೀಶ್​ ಪಟ್ಟಣದ ತೇರು ಗಡ್ಡೆಯ ಬಳಿ ಕ್ಲಿನಿಕ್​‌ ನಡೆಸುತ್ತಿದ್ದ. ಇನ್ನು ಷಣ್ಮುಖಪ್ಪ ಮಸೀದಿ ಓಣಿಯಲ್ಲಿ ಕ್ಲಿನಿಕ್​‌ ಹೊಂದಿದ್ದು, ಅಲ್ಲಿಗೂ ಭೇಟಿ ನೀಡಿದ ಅಧಿಕಾರಿಗಳು ಔಷಧಗಳನ್ನು ವಶಕ್ಕೆ ಪಡೆದು ಎರಡೂ ಕ್ಲಿನಿಕ್‌ಗಳಿಗೆ ಬೀಗ ಜಡಿದಿದ್ದಾರೆ.

two fake doctors who run the clinic ,arrest
ಕ್ಲಿನಿಕ್​ ನಡೆಸುತ್ತಿದ್ದ ಇಬ್ಬರು ನಕಲಿ ವೈದ್ಯರು ಅಂದರ್​

ಇಬ್ಬರ ಬಳಿ ಯಾವುದೇ ಅಧಿಕೃತ ದಾಖಲೆಗಳಿಲ್ಲ. ಎರಡು ಕ್ಲಿನಿಕ್​ಗಳಿಗೆ​‌ ಬೀಗ ಹಾಕಲಾಗಿದೆ. ಅವರ ಮೇಲೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಜಿ.ಅನಿಲ್‌ಕುಮಾರ್ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.