ETV Bharat / state

ಕೊಟ್ಟೂರು ಬಳಿ ಭೀಕರ ಕಾರು ಅಪಘಾತ: ಇಬ್ಬರ ದುರ್ಮರಣ - kannadanews

ಬಳ್ಳಾರಿ ಜಿಲ್ಲೆಯ ಕೊಟ್ಟೂರು ಬಳಿ ಭೀಕರ ಕಾರು ಅಪಘಾತ ಸಂಭವಿಸಿದ್ದು, ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಕಾರು ಅಪಘಾತದಲ್ಲಿ ಇಬ್ಬರು ಯುವಕರ ಸಾವು
author img

By

Published : Jul 7, 2019, 10:59 PM IST

ಬಳ್ಳಾರಿ: ಜಿಲ್ಲೆಯ ಕೊಟ್ಟೂರು ತಾಲೂಕಿನ ಹಿರೆವಡೇರಹಳ್ಳಿ ಬಳಿ ಭೀಕರ ಕಾರು ಅಪಘಾತ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಕೊಟ್ಟೂರಿನಿಂದ ಉಜ್ಜಿನಿಗೆ ಹೋಗುತ್ತಿದ್ದ ಕಾರು ಹಿರೆವಡೇರಹಳ್ಳಿ ಕ್ರಾಸ್​​ನಲ್ಲಿ ನಿಯಂತ್ರಣ ತಪ್ಪಿ ಮರವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕೊಟ್ಟೂರಿನ ಸಂತೋಷ (30), ನಡುಮಾವಿನ ಹಳ್ಳಿ ಬಸವರಾಜ (25) ಎಂಬುವವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

car
ಕಾರು ಅಪಘಾತದಲ್ಲಿ ಇಬ್ಬರು ಯುವಕರ ಸಾವು

ಅಪಘಾತದ ತೀವ್ರತೆಗೆ ಸಂತೋಷ ಮತ್ತು ಬಸವರಾಜ ಕಾರಿನಲ್ಲಿ ಸಿಕ್ಕಿಹಾಕಿಕೊಂಡಿದ್ದು, ಸಾರ್ವಜನಿಕರು ಮೃತರ ದೇಹಗಳನ್ನು ಹೊರತೆಗೆದಿದ್ದಾರೆ. ಘಟನಾ ಸ್ಥಳಕ್ಕೆ ಪಿಎಸ್ಐ ಎ.ಕಾಳಿಂಗ ಮತ್ತು ಸರ್ಕಲ್ ಇನ್ಸ್​​ಪೆಕ್ಟರ್ ರವೀಂದ್ರ ಕುರುಬಗಟ್ಟಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Intro:ಭೀಕರ ಕಾರು ಅಪಘಾತ: ಇಬ್ಬರು ದುರ್ಮರಣ
ಬಳ್ಳಾರಿ: ಜಿಲ್ಲೆಯ ಕೊಟ್ಟೂರು ತಾಲೂಕಿನ ಹಿರೆವಡೇರಹಳ್ಳಿ ಬಳಿ ಇಂದು ಭೀಕರ ಕಾರು ಅಪಘಾತವಾಗಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಕೊಟ್ಟೂರುನಿಂದ ಉಜ್ಜಿನಿಗೆ ಹೋಗುತ್ತಿದ್ದ ಹಿರೆವಡೇರಹಳ್ಳಿ ಕ್ರಾಸ್ ನಲ್ಲಿ ಕಾರು ನಿಯಂತ್ರಣ ತಪ್ಪಿ ಮರವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕೊಟ್ಟೂರಿನ ಸಂತೋಷ (30) ನಡುಮಾವಿನ ಹಳ್ಳಿ ಬಸವರಾಜ (25) ಎಂಬುವವರು ಸ್ಥಳದಲ್ಲಿಯೇ ಮರಣ ಹೊಂದಿದ್ದಾರೆ.
Body:ಈ ಭೀಕರ ಕಾರು ಅಪಘಾತದ ರಭಸಕ್ಕೆ ಸಂತೋಷ ಮತ್ತು ಬಸವರಾಜ ಕಾರಿನಲ್ಲಿ ಸಿಕ್ಕಿಹಾಕಿಕೊಂಡಿದ್ದು ಸಾರ್ವಜನಿಕರು ಮೃತರ ದೇಹವನ್ನು ಹೊರತೆಗೆದಿದ್ದಾರೆ.
ಪಿಎಸ್ಐ ಎ.ಕಾಳಿಂಗ ಮತ್ತು ಸರ್ಕಲ್ ಇನ್ಸ್ ಪೆಕ್ಟರ್ ರವೀಂದ್ರ ಕುರುಬಗಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತರಿಬ್ಬರು ಅವಿವಾಹಿತರು ಎಂದು ತಿಳಿದುಬಂದಿದೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_03_CAR_ACCIDENT_TWO_DEATHS_7203310

KN_BLY_03a_CAR_ACCIDENT_TWO_DEATHS_7203310

KN_BLY_03b_CAR_ACCIDENT_TWO_DEATHS_7203310

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.