ವಿಜಯನಗರ: ನಕಲಿ ಬಂಗಾರದ ನಾಣ್ಯಗಳನ್ನು ಅಸಲಿ ಚಿನ್ನದ ನಾಣ್ಯಗಳೆಂದು ನಂಬಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಹೊಸಪೇಟೆ ಪಟ್ಟಣ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ, ನಗರದ ಬಸ್ ನಿಲ್ದಾಣದಲ್ಲಿ ಸೆರೆ ಹಿಡಿದಿದ್ದಾರೆ. ಒಬ್ಬ ಆರೋಪಿ ಪರಾರಿಯಾಗಿದ್ದು, ಪೊಲೀಸರು ಬಲೆ ಬೀಸಿದ್ದಾರೆ.
ಕೂಡ್ಲಿಗಿಯ ನಾಗರಾಜ (53), ಕಿರಣ್ (20) ಬಂಧಿತ ಆರೋಪಿಗಳು, ಹರಪನಹಳ್ಳಿಯ ಪವನಪುರ ಗ್ರಾಮದ ತಿಮ್ಮಣ್ಣ ಎಂಬ ಆರೋಪಿ ಪರಾರಿಯಾಗಿದ್ದು, ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ನಗರದ ಬಸ್ ನಿಲ್ದಾಣದಲ್ಲಿ ನಕಲಿ ಚಿನ್ನದ ನಾಣ್ಯ ಮಾರಾಟ ಮಾಡಲು ಯತ್ನಿಸುತ್ತಿರುವುದನ್ನು ಗಮನಿಸಿದ ಪೊಲೀಸರು, ಆರೋಪಿಗಳ ಬಂಧನಕ್ಕೆ ಮುಂದಾದಾಗ ಒಬ್ಬ ಪರಾರಿಯಾಗಿದ್ದಾನೆ. ಬಂಧಿತ ಇಬ್ಬರಿಂದ 2,606 ಗ್ರಾಂ ತೂಕದ ನಕಲಿ ಬಂಗಾರದ ನಾಣ್ಯಗಳು, 2,000 ರೂ. ನಗದು ಮತ್ತು ಒಂದು ಮೊಬೈಲ್ ಜಪ್ತಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ದಾವಣಗೆರೆಯಲ್ಲಿ ಹೆಚ್ಚುತ್ತಲೇ ಇವೆ ಪಾರಂಪರಿಕ ಚಿನ್ನದ ಆಸೆ ತೋರಿಸಿ ವಂಚಿಸುವ ಪ್ರಕರಣಗಳು.. ಒಬ್ಬ ವಂಚಕ ಅಂದರ್