ಹೊಸಪೇಟೆ : ವಿಶ್ವವಿಖ್ಯಾತ ಹಂಪಿಯಲ್ಲಿ ಇಂದಿನಿಂದ ಪ್ರವಾಸಿಗರಿಗೆ ಆಫ್ಲೈನ್ ಟಿಕೆಟ್ ಸೌಲಭ್ಯ ಒದಗಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮುಂದಾಗಿದೆ.
ಹಂಪಿಯ ಕಮಲಮಹಲ್, ಕಮಲಾಪುರದ ವಸ್ತುಸಂಗ್ರಹಾಲಯ, ವಿಜಯವಿಠ್ಠಲ ದೇವಸ್ಥಾನ ಸ್ಮಾರಕಗಳನ್ನು ವೀಕ್ಷಣೆ ಮಾಡಲು ಈ ಹಿಂದೆ ಆನ್ಲೈನ್ ಮೂಲಕ ಬುಕ್ ಮಾಡಬೇಕಿತ್ತು. ಕೊರೊನಾ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಒಂದು ದಿನಕ್ಕೆ 2000 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.
ಕೆಲ ಸಲ ಪ್ರವಾಸಿಗರು ನೆಟ್ವರ್ಕ್ ಸಮಸ್ಯೆಯಿಂದ ಪರದಾಡುವಂತ ಸ್ಥಿತಿ ಇತ್ತು. ಇದೀಗ ಆನ್ಲೈನ್ ಹಾಗೂ ಕೌಂಟರ್ ಮೂಲಕ ಟಿಕೆಟ್ ಪಡೆದು ಸ್ಮಾರಕಗಳನ್ನು ಪ್ರವಾಸಿಗರು ವೀಕ್ಷಣೆ ಮಾಡಬಹುದು.
ಓದಿ: ಕ್ರಿಸ್ ಮಸ್, ಹೊಸ ವರ್ಷಾಚರಣೆಗೆ ಸರ್ಕಾರದ ಮಾರ್ಗಸೂಚಿ.. ಹೀಗೆ ಮಾಡಿ, ಹಾಗೇ ಮಾಡ್ಬೇಡಿ..
ಜನರ ಮಿತಿಯನ್ನು ತೆಗೆದು ಹಾಕಲಾಗಿದೆ ಎಂದು ಪುರಾತತ್ವ ಇಲಾಖೆಯ ಉಪ ಅಧೀಕ್ಷಕ ಪಿ ಕಾಳಿಮುತ್ತು ಈಟಿವಿ ಭಾರತಗೆ ತಿಳಿಸಿದರು.