ETV Bharat / state

VIDEO: ಮದ್ಯ ಕೊಳ್ಳುವ ನೆಪದಲ್ಲಿ ಬಂದು ಹಣ ಕದ್ದು ಎಸ್ಕೇಪ್​ - hospet news

ಪಟ್ಟಣದ ಬೈಪಾಸ್ ಬಳಿ ಇದ್ದ ಅಶ್ವಿನಿ ವೈನ್ ಶಾಪ್ ನಲ್ಲಿ ಹಣ ಕಳ್ಳತನ ಮಾಡಲಾಗಿದೆ. ಈ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮದ್ಯ ಕೊಳ್ಳುವ ನೆಪದಲ್ಲಿ ಬಂದು ಹಣ ಕದ್ದು ಎಸ್ಕೇಪ್​

author img

By

Published : Aug 19, 2021, 9:40 PM IST

Updated : Aug 19, 2021, 10:20 PM IST

ಹೊಸಪೇಟೆ (ವಿಜಯನಗರ): ಮದ್ಯ ಖರೀದಿ ನೆಪದಲ್ಲಿ ಅಂಗಡಿಗೆ ಬಂದು ಹಣ ಲಪಟಾಯಿಸಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಹರಪನಹಳ್ಳಿ ಪಟ್ಟಣದ ಆಂಜನೇಯ ಬಡಾವಣೆಯಲ್ಲಿ ಈ ಘಟನೆ ಜರುಗಿದೆ.

ಪಟ್ಟಣದ ಬೈಪಾಸ್ ಬಳಿ ಇದ್ದ ಅಶ್ವಿನಿ ವೈನ್ ಶಾಪ್ ನಲ್ಲಿ 55 ಸಾವಿರ ರೂಪಾಯಿ ಹಣ ಕಳ್ಳತನ ಮಾಡಲಾಗಿದೆ. ಗೀತಾ ಎಂಬುವರಿಗೆ ಸೇರಿದ ಬಾರ್​ ಇದಾಗಿದ್ದು, ಕಳ್ಳರು ಹಣ ಲಪಟಾಯಿಸುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.‌

ಮದ್ಯ ಕೊಳ್ಳುವ ನೆಪದಲ್ಲಿ ಬಂದು ಹಣ ಕದ್ದು ಎಸ್ಕೇಪ್​

ಮದ್ಯ ಕೊಳ್ಳುವ ನೆಪದಲ್ಲಿ ಬಾರ್​​​​ಗೆ ಮೂರು ಜನರ ತಂಡ ಬಂದಿದೆ.‌ ಇಬ್ಬರು ಮ್ಯಾನೇಜರ್​​​ ಮತ್ತು ಸಿಬ್ಬಂದಿಯ ಗಮನ ಬೇರೆಡೆ ಸೆಳೆಯುತ್ತಾರೆ. ಮತ್ತೊಬ್ಬ ಟೇಬಲ್ ಮೇಲೆ ಇಟ್ಟಿದ್ದ 55 ಸಾವಿರ ರೂಪಾಯಿ ಹಣ ಕಳ್ಳತನ ಮಾಡಿ ಪರಾರಿಯಾಗಿದ್ದಾನೆ. ಹಣ ಕಳುವಾಗಿರೋದು ತಿಳಿದ ತಕ್ಷಣ ಹರಪನಹಳ್ಳಿ ಪೊಲೀಸ್ ಠಾಣೆಗೆ ಬಾರ್ ಮಾಲೀಕ ದೂರು‌ ನೀಡಿದ್ದಾರೆ.

Last Updated : Aug 19, 2021, 10:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.