ETV Bharat / state

2020 ಗಣಿ ಜಿಲ್ಲೆಗೆ ಸಿಹಿಗಿಂತಲೂ ಕಹಿ ಉಣಿಸಿದ್ದೇ ಹೆಚ್ಚು! - Bellary Latest News Update

ಬಳ್ಳಾರಿ ಜಿಲ್ಲೆಯ ಮಟ್ಟಿಗೆ 2020ರಲ್ಲಿ ಸಿಹಿಗಿಂತಲೂ ಕಹಿ ಘಟನೆಗಳೇ ಹೆಚ್ಚು ನಡೆದಿವೆ ಎನ್ನಬಹುದು. ಜಿಲ್ಲೆಯ ವಿವಿಧ ಘಟನೆಗಳ ಒಂದು ಕಿರು ನೋಟ ಇಲ್ಲಿದೆ.

The year 2020 was more bitter than sweet for Bellary
2020ರ ವರ್ಷ ಗಣಿಜಿಲ್ಲೆಗೆ ಸಿಹಿಗಿಂತಲೂ ಕಹಿ ಉಣಿಸಿದ್ದೇ ಹೆಚ್ಚು..!
author img

By

Published : Dec 28, 2020, 6:34 PM IST

ಬಳ್ಳಾರಿ: ಗಣಿ ನಾಡು ಬಳ್ಳಾರಿ ಜಿಲ್ಲೆಯ ಮಟ್ಟಿಗೆ 2020ನೇ ವರ್ಷದಲ್ಲಿ ಸಿಹಿಗಿಂತಲೂ ಕಹಿ ಘಟನೆಗಳೇ ಹೆಚ್ಚು ನಡೆದಿವೆ ಎನ್ನಬಹುದು. 2020ನೇ ವರ್ಷಾರಂಭದಲ್ಲಿ ಕೋಮು‌ ಸೌಹಾರ್ದತೆಯ ನಡುವೆ ಶಾಂತಿ ಕದಡುವ ವಾತಾವರಣ ನಿರ್ಮಾಣವಾಗಿದ್ದರಿಂದ ಹಿಡಿದು ಅಖಂಡ ಬಳ್ಳಾರಿ ಜಿಲ್ಲೆಯ ವಿಭಜನೆಯವರೆಗೂ ಕೂಡ ಕಹಿ ಘಟನೆಗಳ ಸರಣಿಯೇ ಜಿಲ್ಲೆಯನ್ನು ಆವರಿಸಿವೆ. ಮತ್ತೊಂದೆಡೆ ಮಹಾಮಾರಿ ಕೊರೊನಾ ಸೋಂಕಿನಿಂದಲೂ ಕೂಡ ಗಣಿ ಜಿಲ್ಲೆ ಅಕ್ಷರಶಃ ನಲುಗಿ ಹೋಗಿದೆ.

ಈ ವರ್ಷಾರಂಭದಲ್ಲೇ ಅಂದರೆ ಜನವರಿ 3ರಂದು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಗಳಿಗೆ ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ನೇರವಾಗಿಯೇ ಎಚ್ಚರಿಕೆ ನೀಡಿದ್ದರು. ತಮ್ಮ ಪ್ರಚೋದನಕಾರಿ ಭಾಷಣದಲ್ಲಿ ಹಿಂದೂಗಳು ಒಂದಾದರೆ ನಿಮಗೆ ಈ ದೇಶದಲ್ಲಿ ಉಳಿಗಾಲವಿಲ್ಲ ಎಂಬ ಹೇಳಿಕೆ ನೀಡಿದ್ದರು.

ಶಾಸಕ ಸೋಮಶೇಖರ ರೆಡ್ಡಿಯವರ ಪ್ರಚೋದನಕಾರಿ ಭಾಷಣಕ್ಕೆ ಕಲ್ಯಾಣ ಸ್ವಾಮೀಜಿ ಸಾಥ್ ನೀಡಿದ್ದರು. ಇದು ಹಲವಾರು ಪ್ರತಿಭಟನೆ, ಗಲಭೆಗಳಿಗೆ ಸಾಕ್ಷಿಯಾಯಿತು‌.

ಜೋರಾಗೇ ಇತ್ತು ಹಾಲಿ-ಮಾಜಿ ಶಾಸಕರ ಬೀದಿ ಕಾಳಗ:

ಹಗರಿಬೊಮ್ಮನಹಳ್ಳಿ ತಾಲೂಕು ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯ ಚುನಾವಣೆ ಸಂದರ್ಭ ಹಾಲಿ ಶಾಸಕ ಭೀಮಾನಾಯ್ಕ ದುಂಡಾವರ್ತನೆ ಪ್ರದರ್ಶನದ ಆರೋಪ ಹೊತ್ತಿದ್ದ ಹಿನ್ನೆಲೆ ಹಾಲಿ-ಮಾಜಿ ಶಾಸಕರ ಬೀದಿ ಕಾಳಗವೂ ಕೂಡ ಜೋರಾಗಿತ್ತು.

ಗಣಿ ಜಿಲ್ಲೆಗೆ ಭೇಟಿಯಾದ ಸಚಿವರು:

ವಿಜಯನಗರ ಕ್ಷೇತ್ರದ ಉಪಚುನಾವಣೆ ಸಂದರ್ಭ ರಾಜ್ಯ ಸರ್ಕಾರದ ಆರು ಸಚಿವರು‌ ಹೊಸಪೇಟೆಗೆ ಬಂದಿಳಿದಿದ್ದರು‌. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ನಳಿನ್ ಕುಮಾರ್ ಕಟೀಲ್ ಬಳ್ಳಾರಿ ಜಿಲ್ಲೆಗೆ ಭೇಟಿ ಕೊಟ್ಟಿದ್ದರು. ಸಚಿವರಾದ ವಿ.ಸೋಮಣ್ಣ, ಭೈರತಿ ಬಸವರಾಜ್​, ಬಿ.ಸಿ.ಪಾಟೀಲ್​, ಲಕ್ಷ್ಮಣ ಸವದಿ, ಡಾ. ಕೆ.ಸುಧಾಕರ್​, ಡಿಸಿಎಂಗಳಾದ ಗೋವಿಂದ ಕಾರಜೋಳ, ಡಾ. ಸಿ.ಅಶ್ವತ್ಥ​ ನಾರಾಯಣ, ಕೆ.ಎಸ್.ಈಶ್ವರಪ್ಪ, ಸಿ.ಟಿ‌.ರವಿ ಕೂಡ ಹಲವು ಸಂದರ್ಭಗಳಲ್ಲಿ ಭೇಟಿ ನೀಡಿದ್ದರು.

ಇದಲ್ಲದೆ ಗಣಿನಾಡಿನಲ್ಲಿ ಒಂದಷ್ಟು ಸಿಹಿ ಘಟನೆಗಳೂ ನಡೆದಿವೆ. ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿ, ಕೋಮು ಸೌಹಾರ್ದತೆಗೆ ಸಾಕ್ಷಿಯಾಗುವಂತೆ ನೂತನ ಮಸೀದಿ ನಿರ್ಮಾಣ ಹಾಗೂ ಜೀರ್ಣೋದ್ಧಾರ ಕಾರ್ಯವು ನಡೆದಿರೋದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.

ಜಿಲ್ಲೆಯಲ್ಲಿ 2020ರ ಘಟನೆಗಳು:

ಜ. 03: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಗಳಿಗೆ ಶಾಸಕ ಸೋಮಶೇಖರ ರೆಡ್ಡಿ ನೇರಾ ನೇರಾ ಎಚ್ಚರಿಕೆ ನೀಡಿದ್ದ ದಿನ.
ಜ.04: ಶಾಸಕ ರೆಡ್ಡಿ‌ ಪ್ರಚೋದನಕಾರಿ ಭಾಷಣ ಖಂಡಿಸಿ ಕೈಗೊಂಡಿದ್ದ ಪ್ರತಿಭಟನೆಯಲ್ಲಿ ದಿಢೀರನೇ ಅಲಿಖಾನ್ ಪ್ರತ್ಯೇಕವಾಗಿದ್ದರು.
ಜ.10: ಪ್ರಚೋದನಕಾರಿ ಭಾಷಣದ ಹಿನ್ನೆಲೆ ಶಾಸಕ ಸೋಮಶೇಖರ ರೆಡ್ಡಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಈ ಕುರಿತ ಸುದ್ದಿ ಈಟಿವಿ ಭಾರತದಲ್ಲೇ ಮೊದಲು ಪ್ರಕಟವಾಗಿತ್ತು.
ಜ.13: ಶಾಸಕ ಜಮೀರ್, ಸೋಮಶೇಖರ್​ ರೆಡ್ಡಿಗೆ ಬಾರೋ ರೆಡ್ಡಿ ಬಳ್ಳಾರಿಗೆ ಬಂದಿದ್ದೀನಿ ಎಂದಿದ್ದರು.
ಜ.13: ಸೋಮಶೇಖರ ರೆಡ್ಡಿಗೆ ಮಾನ, ಮರ್ಯಾದೆ ಇಲ್ಲ ಎಂದು ಶಾಸಕ ಜಮೀರ್ ವಾಗ್ದಾಳಿ ನಡೆಸಿದ್ದರು.
ಜ.13: ಶಾಸಕ ಜಮೀರ್​ಗೆ ಹುಚ್ಚು ನಾಯಿ ಕಡಿದಿರಬೇಕು ಎಂದು ಶಾಸಕ ಸೋಮಶೇಖರ ರೆಡ್ಡಿ ವಾಗ್ದಾಳಿ ನಡೆಸಿದ್ದರು.
ಜ.21: ಗಣಿ ನಗರಿಯಲ್ಲಿ ಮೊದಲನೇ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಅದರಲ್ಲಿ ಸಾವಿರಕ್ಕೂ ಅಧಿಕ ಕರಾಟೆ ಪಟುಗಳು ಭಾಗಿಯಾಗಿದ್ದರು.
ಜ.28: ಬಿಎಸ್ಎನ್ಎಲ್ ನೌಕರರ ಸ್ವಯಂ ಘೋಷಿತ ನಿವೃತ್ತಿ ಜಾರಿ: ಈ ತಿಂಗಳಾಂತ್ಯಕ್ಕೆ 177 ಮಂದಿ ಸ್ವಯಂ ಘೋಷಿತ ನಿವೃತ್ತಿ!
ಜ.29: ಕೂಡ್ಲಿಗಿ ಹಾಲಿ ತಾಪಂ ಅಧ್ಯಕ್ಷ ವೆಂಕಟೇಶ ನಾಯ್ಕ ಬಂಧನ!
ಫೆ.01: ಅನೈತಿಕ ಸಂಬಂಧ ಹಿನ್ನೆಲೆ: ಹಸುಗೂಸಿಗೆ ಚಿತ್ರಹಿಂಸೆ ಕೊಟ್ಟ ಹೆತ್ತ ತಾಯಿ!
ಫೆ.02: ಗ್ರಾಮ‌ ದೇವರ ಜಾತ್ರೆಯಲ್ಲಿ ಸಂಭವಿಸಿದ ಅವಘಡ: ಕಾಲು ಕಳೆದುಕೊಂಡ ಮಕ್ಕಳು!
ಫೆ.02: ಮಾಜಿ ಸಚಿವ ಲಾಡ್: ಶಾಸಕ ಗಣೇಶ್​ ಕಬಡ್ಡಿ ಪ್ರದರ್ಶನ
ಫೆ.04: ಗಣಿ ಜಿಲ್ಲೆಯ ಉಸ್ತುವಾರಿ ಯಾರಿಗೆ ಒಲಿಯುತ್ತೆ: ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆಗೆ ಪಟ್ಟು ಹಿಡಿದಿದ್ದ ಆನಂದ್​ ಸಿಂಗ್​ ಕೊನೆಗೂ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ.
ಫೆ.08: ಗಣಿ ನಗರಿಗೆ ಬಂದಿಳಿದ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್
ಫೆ.09: ಕರಡಿ ಅಡ್ಡ ಬಂದು ಮಾಜಿ ಶಾಸಕ ಹಿಟ್ನಾಳ್‍ ಕಾರು ಪಲ್ಟಿ!
ಫೆ.13: ಅಪಘಾತಕ್ಕೀಡಾದ ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ರಾಜ್ಯದ ಪ್ರಭಾವಿ ಸಚಿವರ ಪುತ್ರನಿದ್ದ ರೂಮರ್!
ಫೆ.17: ಕಾಲು ಕಟ್ಟಿ ಮಗಳನ್ನೇ ಕೊಂದ ಪಾಪಿ ತಂದೆ: ಗಣಿನಗರಿಯಲ್ಲಿ ಮನಕಲುಕುವಂತಹ‌ ಮತ್ತೊಂದು ಘಟನೆಯಿದು..!
ಫೆ.17: ಕಳುವಾದ ಮಾಲನ್ನು ಸಿಪಿಐ- ಪಿಎಸ್​​ಐ ಹಂಚಿಕೊಂಡ ಕಥೆ!! ಎಸ್​ಪಿ ಬಾಬಾ ಅವರತ್ತ ಬಂದ ಕಳ್ಳತನ‌ ಪ್ರಕರಣ: ಉಭಯ ಅಧಿಕಾರಿಗಳ‌ ಅಮಾನತಿಗೆ ಶಿಫಾರಸು....
ಫೆ.22:ದೇಶದ್ರೋಹಿ ಹೇಳಿಕೆ ನೀಡಿದವರ ಹತೈಗೈದರೆ ಹತ್ತು ಲಕ್ಷ ಬಹುಮಾನ‌ ಕೊಡ್ತೀವಿ: ಶ್ರೀರಾಮಸೇನೆ ಘೋಷಣೆ
ಫೆ.25: ಸಿಎಂ ಬಿಎಸ್​​ವೈಗೆ ಯಾವ ಉತ್ತರಾಧಿಕಾರಿನೂ ಇಲ್ಲ... ಪತ್ರಾಧಿಕಾರಿನೂ ಇಲ್ಲ: ಸಚಿವ ಸೋಮಣ್ಣ ಸ್ಪಷ್ಟನೆ

ಸಿಹಿ ಘಟನೆಗಳಿಗೆ ಪೂರಕವಾದವು..

ಜ.23: ಗಣಿನಾಡಿನ ಲಗ್ನಪತ್ರಿಕೆಯಲ್ಲಿ ಕೇಂದ್ರ ಸರ್ಕಾರ ಯೋಜನೆ ಮುದ್ರಣ: ಬೇಟಿ ಬಚಾವೋ ಬೇಟಿ ಪಡಾವೋ
ಜ.23: ಟಿ. ರಾಂಪುರ ಗ್ರಾಮದಲ್ಲಿ ನೂತನ ಮಸೀದಿ ನಿರ್ಮಾಣಕ್ಕೆ ಭೂಮಿಪೂಜೆ: ಹಿಂದೂ-ಮುಸ್ಲಿಂ ಬಾಂಧವರ ಭಾವೈಕ್ಯತೆ ಮೆರೆದ ಗ್ರಾಮಸ್ಥರು!
ಜ.30: ಗಣಿ ನಾಡಿನಲ್ಲಿ ರಾಜ್ಯಮಟ್ಟದ ಕೀಲು - ಎಲುಬು ಸಮ್ಮೇಳನ, 600ಕ್ಕೂ ಅಧಿಕ ಹೆಚ್ಚು ವೈಜ್ಞಾನಿಕ ಪತ್ರಿಕೆಗಳ ಪ್ರದರ್ಶನ: ಅತ್ಯುತ್ತಮ ಪತ್ರಿಕೆಗೆ ಗೋಲ್ಡ್ ಮೆಡಲ್!
ಫೆ.28: ಹೈಕಮಾಂಡ್​ ಭಾಗದ ಜಾತ್ರೆಗಳಲ್ಲಿನ ತೇರಿಗೆ ಬಾಳೆಹಣ್ಣು ಎಸೆಯೋದು ವಾಡಿಕೆ: ಆ ಬಾಳೆಹಣ್ಣಿನ ಮೇಲೆ ಆರ್​ಸಿಬಿ ಕ್ರಿಕೆಟ್ ಕಪ್ ನಮ್ದೆ.. ಎಂಬ ಘೋಷವಾಕ್ಯ ಬೆಳಕಿಗೆ
ಫೆ.27: ಸಚಿವ ಶ್ರೀರಾಮುಲು ಮನೆಯಲ್ಲಿ ಮದುವೆ ಸಂಭ್ರಮ… ಮಗಳ ಅದ್ಧೂರಿ ಮದುವೆಗೆ ಸಾಕ್ಷಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.