ಹೊಸಪೇಟೆ: ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ ಎಂಬ ಕಾರಣ ನೀಡಿ, ನಗರದ ಪೊಲೀಸರು ಸೈಕಲ್ ಅಂಗಡಿಯ ಮಾಲೀಕನಿಗೆ 5,000 ರೂ. ದಂಡ ವಿಧಿಸಿರುವ ಘಟನೆ ಚರ್ಚೆಗೆ ಗ್ರಾಸವಾಗಿದೆ.
ಜನ ಕಡಿಮೆ ಪ್ರಮಾಣದಲ್ಲಿ ಸೇರುವ ಸೈಕಲ್ ಅಂಗಡಿಯಂತಹ ಸ್ಥಳದಲ್ಲಿ, ನಿಯಮವನ್ನು ಈ ಪರಿ ಅಳವಡಿಸಲು ಮುಂದಾಗಿದ್ದರ ಹಿನ್ನೆಲೆ ಏನು? ಈ ಪರಿ ದಂಡ ಹಾಕುವ ಮೂಲಕ ಜನರಲ್ಲಿ ಮೂಡುವುದು ಕಾನೂನು ಪ್ರಜ್ಞೆಯೇ ಅಥವಾ ಸರ್ಕಾರಿ ವಿರೋಧಿ ಧೋರಣೆಯೆ ಎಂಬ ಚರ್ಚೆಗಳು ಸಾರ್ವಜನಿಕರಲ್ಲಿ ಆರಂಭವಾಗಿವೆ.
ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ. ಆದರೆ, ಕಾನೂನು ಹೆಸರಿನಲ್ಲಿ ಜನಸಾಮಾನ್ಯರಿಗೆ ಆರ್ಥಿಕ ಹೊರೆಯಾಗಿಸುವುದು ತಪ್ಪು ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿವೆ.