ETV Bharat / state

ಬಳ್ಳಾರಿಯಲ್ಲಿ ಮಹಾತ್ಮನ ಹೆಜ್ಜೆ ಗುರುತು: ಗಣಿ ಜಿಲ್ಲೆಗೆ ಎರಡು ಬಾರಿ ಭೇಟಿ ನೀಡಿದ್ದರು ರಾಷ್ಟ್ರಪಿತ

ಬಳ್ಳಾರಿ ಜಿಲ್ಲೆಯಲ್ಲೂ ಮಹಾತ್ಮ ಗಾಂಧಿಯವರ ಹೆಜ್ಜೆ ಗುರುತುಗಳಿವೆ. 1934ರ ಮಾರ್ಚ್ 3 ರಂದು ಎರಡು ಕಾರಣಗಳಿಗಾಗಿ ಬಳ್ಳಾರಿಗೆ ಗಾಂಧೀಜಿ ಭೇಟಿ ನೀಡಿದ್ದರು.

gandhi-jayanthi
ಬಳ್ಳಾರಿಗೆ ಎರಡು ಬಾರಿ ಭೇಟಿ ನೀಡಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ
author img

By

Published : Oct 2, 2020, 9:49 AM IST

ಬಳ್ಳಾರಿ: ಅದು 1934ರ ದಶಕ. ಸ್ವಾತಂತ್ರ್ಯ ಸಂಗ್ರಾಮ ಹೋರಾಟದ ರೂವಾರಿಯಾಗಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಗಣಿನಾಡು ಬಳ್ಳಾರಿ ಜಿಲ್ಲೆಗೆ ಎರಡು ಬಾರಿ ಭೇಟಿ ನೀಡಿರುವುದು ಇದೀಗ ಇತಿಹಾಸ.

1934ರ ಮಾರ್ಚ್ 3 ರಂದು ಎರಡು ಕಾರಣಗಳಿಗಾಗಿ ಜಿಲ್ಲೆಗೆ ಗಾಂಧೀಜಿಯವರು ಭೇಟಿ ನೀಡುತ್ತಾರೆ. ಸ್ವಾತಂತ್ರ್ಯ ಸಂಗ್ರಾಮ ಹೋರಾಟದ ರೂಪುರೇಷೆಗಳಿಗೆ ಆರ್ಥಿಕ ನೆರವು ನೀಡುವಂತೆ ಕೋರಿ ಹಾಗೂ ಜಿಲ್ಲೆಯ ಸಂಡೂರು ತಾಲೂಕಿನ ಬೆಟ್ಟ-ಗುಡ್ಡದಲ್ಲಿ ನೆಲೆಸಿರುವ ಕುಮಾರಸ್ವಾಮಿ ಆಲಯದೊಳಗೆ ದಲಿತ ಸಮುದಾಯದವರ ಪ್ರವೇಶಾತಿ ನೀಡಿದ್ದ ಅಂದಿನ ಮಹಾರಾಜರಿಗೆ ಅಭಿನಂದನೆ ಸಲ್ಲಿಸುವ ಸಲುವಾಗಿಯೇ ರಾಷ್ಟ್ರಪಿತ ಭೇಟಿ ನೀಡಿದ್ದರು.

ಅಂದು ಸಂಡೂರು ತಾಲೂಕಿನ ಕುಮಾರಸ್ವಾಮಿ ಆಲಯಕ್ಕೆ ಭೇಟಿ ನೀಡಿದ್ದ ಮಹಾತ್ಮ ಗಾಂಧೀಜಿಯವರು, ಸ್ವಾಮಿಯ ದರ್ಶನ ಪಡೆದು ಕೃತಾತ್ಮರಾಗುತ್ತಾರೆ. ಆಗ ಸಂಡೂರಿನ ಸೌಂದರ್ಯದ ಸೊಬಗನ್ನು ಕಣ್ಣಾರೆ ಕಂಡ ಗಾಂಧೀಜಿಯವರು, ಅದನ್ನು ಓಯಾಸಿಸ್ ಎಂದು ಬಣ್ಣಿಸಿದ್ದಾರೆ. ಸೆಪ್ಟೆಂಬರ್ ತಿಂಗಳಲ್ಲಿ ಸಂಡೂರನ್ನು ವೀಕ್ಷಣೆ ಮಾಡಿ ಎಂದಿದ್ದಾರೆ. ಇಂದಿಗೂ ಅವರ ಮಾತಿನ ಈ ವಾಕ್ಯವನ್ನು ಮಾನಸ ಸರೋವರ ಬಳಿ ರಸ್ತೆಯ ಇಕ್ಕೆಲದಲ್ಲಿನ ಕಲ್ಲುಬಂಡೆ ಮೇಲೆ ಬರೆಯಲಾಗಿದೆ.

ಬಳ್ಳಾರಿಗರ ಅಳಿಲು ಸೇವೆ: ಸ್ವಾತಂತ್ರ್ಯ ಸಂಗ್ರಾಮ ಹೋರಾಟದ ರೂವಾರಿಯಾಗಿದ್ದ ಗಾಂಧೀಜಿಯವರು, ಹೋರಾಟಕ್ಕೆ ಆರ್ಥಿಕ ಸಂಕಷ್ಟ ಎದುರಾಗಬಾರದು ಎಂಬ ಉದ್ದೇಶದೊಂದಿಗೆ ಅವರು ಭೇಟಿ ನೀಡಿದ ಸಂದರ್ಭ ಬಳ್ಳಾರಿಗರಲ್ಲಿ ಆರ್ಥಿಕ ನೆರವು ನೀಡುವಂತೆ ಕೋರಿದ್ದರು. ಹೀಗಾಗಿ, ಬಳ್ಳಾರಿಗರದೂ ಕೂಡ ಸ್ವಾತಂತ್ರ್ಯ ಸಂಗ್ರಾಮ ಹೋರಾಟಕ್ಕೆ ಅಳಿಲು ಸೇವೆ ಇದೆಯೆಂದು ಇತಿಹಾಸದಿಂದ ತಿಳಿಯಬಹುದಾಗಿದೆ.

1921ರ ಅಕ್ಟೋಬರ್ 1ರಂದು ಧಾರವಾಡ ಜಿಲ್ಲೆಗೆ ತೆರಳುವ ಸಲುವಾಗಿ ಬಳ್ಳಾರಿಗೆ ಗಾಂಧೀಜಿ ಭೇಟಿ ನೀಡುತ್ತಾರೆ. ರಾಷ್ಟ್ರಪಿತರು ಭೇಟಿ ನೀಡುತ್ತಿದ್ದಂತೆಯೇ ತೆಲುಗು ಮತ್ತು ಕನ್ನಡ ಭಾಷಿಕ ಕಾಂಗ್ರೆಸ್ ಪಕ್ಷದ ಮುಖಂಡರುಗಳು ನಮ್ಮಲ್ಲಿ ಬರುವಂತೆ ದುಂಬಾಲು ಬೀಳುತ್ತಾರಂತೆ. ಅವರಿಬ್ಬರ ಬಳಿಯೂ ಹೋಗದೇ ಬಳ್ಳಾರಿ ರೈಲು ನಿಲ್ದಾಣದಲ್ಲೇ ಸರಿ ಸುಮಾರು 8 ಗಂಟೆಗಳ ಕಾಲ ತಂಗಿರುತ್ತಾರೆ. ಆ ಬಳಿಕ, ರೈಲಿನಲ್ಲಿ ಧಾರವಾಡ ಜಿಲ್ಲೆಯತ್ತ ಪ್ರಯಾಣ ಬೆಳೆಸಿದ್ದಾರೆಂಬುದು ಈಗ ನೆನಪು.

ಮೂರು ಜೈಲುಗಳಿವೆ : ಅಂತಾರಾಷ್ಟ್ರೀಯ - ರಾಷ್ಟ್ರೀಯ ಮಟ್ಟದ ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿ, ಸೆರೆಮನೆ ವಾಸದಲ್ಲಿಡಲು ಆಗಿನ ಬ್ರಿಟಿಷ್ ಸರ್ಕಾರವು ಕಂಟೋನ್ಮಂಟ್ ಪ್ರದೇಶದಲ್ಲಿ ಸುಮಾರು 779 ಎಕರೆಯ ವಿಸ್ತೀರ್ಣದಲ್ಲಿ ಮೂರು ಜೈಲುಗಳನ್ನು ನಿರ್ಮಿಸಿತ್ತು. ಅಲ್ಲೀಪುರ ಜೈಲು, ಸೆಂಟ್ರಲ್ ಜೈಲು ಹಾಗೂ ಟಿ.ಬಿ. ಸ್ಯಾನಿಟೋರಿಯಂನ ವೆಲ್ಲೆಸ್ಲಿ ಜೈಲು. ಸ್ವಾತಂತ್ರ್ಯ ಹೋರಾಟಗಾರರಾದ ಚಕ್ರವರ್ತಿ ರಾಜಗೋಪಾಲ, ತೆಲುಗು ಭಾಷೆಯ ಗಾಯಕ ಘಂಟಸಾಲ, ಟರ್ಕಿ ಮಹಾರಾಜರು, ಕಮ್ಯುನಿಸ್ಟ್ ಪಕ್ಷದ ಮುಖಂಡ ಎ.ಕೆ. ಗೋಪಾಲನ್ ಸೇರಿದಂತೆ ಇತರರನ್ನು ಬಂಧಿಸಿ ಈ ಮೂರು ಜೈಲುಗಳಲ್ಲಿ ಇರಿಸಲಾಗಿತ್ತು ಎಂಬುದು ಇತಿಹಾಸದಿಂದ ತಿಳಿದುಬರುತ್ತದೆ.

ಚಿತಾಭಸ್ಮದ ದರುಶನ: 1948ನೇ ಇಸವಿಯಲ್ಲಿ ಗುಂಡೇಟಿಗೆ ಬಲಿಯಾಗಿದ್ದ ಗಾಂಧೀಜಿಯವರ ಚಿತಾ ಭಸ್ಮವನ್ನ ಬಳ್ಳಾರಿ ನಗರದ ಗಾಂಧಿ ಭವನದ ಮಲ್ಲಸಜ್ಜನ ವ್ಯಾಯಾಮ ಶಾಲೆಯ ಆವರಣದಲ್ಲಿ 24 ಗಂಟೆಗಳ ಕಾಲ ಸಾರ್ವಜನಿಕರ ದರುಶನಕ್ಕೆ ಇಡಲಾಗಿತ್ತು. ಅಲ್ಲಿಂದ ಜಿಲ್ಲೆಯ ತಾಲೂಕಾದ ಕೂಡ್ಲಿಗಿಯಲ್ಲಿ ಆ ಚಿತಾ ಭಸ್ಮವನ್ನ ಸ್ಥಾಪಿಸಲಾಯಿತು.

ಮಹಾದೇವ ಮೈಲಾರ ಕ್ರೀಡಾಂಗಣ: ಸ್ವಾತಂತ್ರ್ಯ ಸಂಗ್ರಾಮದ ಹೋರಾಟ ನೆನಪಿಸುವಂತಹ ಸ್ಮಾರಕಗಳನ್ನು ದೇಶದ ಉದ್ದಗಲಕ್ಕೂ ವಿವಿಧ ಹೆಸರುಗಳಲ್ಲಿ ನಿರ್ಮಾಣ ಮಾಡಲಾಗಿದೆ. ದೆಹಲಿಯ ರಾಜ್ ಘಾಟ್ ನಂತೆಯೇ ಗಾಂಧೀಜಿ ನೆನಪಿಸುವಂತಹ ಮತ್ತೊಂದು ಸ್ಮಾರಕವನ್ನು ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಮಹಾದೇವ ಮೈಲಾರ ಕ್ರೀಡಾಂಗಣದಲ್ಲಿ ಗಾಂಧೀಜಿಯವರ ಚಿತಾಭಸ್ಮ ಇಡುವ ಮೂಲಕ ಹುತಾತ್ಮರ ಸ್ಮಾರಕ ನಿರ್ಮಿಸಲಾಗಿದೆ. ಬಿಂದು ಮಾಧವ ಎಂಬ ಶಿಕ್ಷಕರಿಂದ ಪಟ್ಟಣದ ಮಹಾದೇವ ಮೈಲಾರ ಕ್ರೀಡಾಂಗಣಾದಲ್ಲಿ ಗಾಂಧಿ ಚಿತಾ ಭಸ್ಮವನ್ನಿಟ್ಟು ಮಂಟಪ ಮಾಡಿ, ಅದಕ್ಕೆ ಹುತಾತ್ಮರ ಸ್ಮಾರಕ ಎಂದು ನಾಮಕರಣ ಮಾಡಲಾಗಿದೆ.

1950ರ ದಶಕದಲ್ಲಿ ಸ್ಥಾಪಿಸಲಾಗಿದ್ದ ಈ ಚಿತಾಭಸ್ಮದ ಸ್ಮಾರಕ ನಿರ್ಮಾಣ ಕಾರ್ಯಕ್ರಮವನ್ನು ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್​ ಅವರ ಗುರುಗಳಾದ ರಮಾನಂದ ತೀರ್ಥರು ಉದ್ಘಾಟಿಸಿದ್ದರು. ಬಳ್ಳಾರಿಗೂ ಸ್ವಾತಂತ್ರ್ಯ ಸಂಗ್ರಾಮಕ್ಕೂ ನಂಟಿದೆ. ಇದೀಗ ಗಾಂಧೀಜಿಯವರ 152 ನೇ ಜಯಂತ್ಯುತ್ಸವದ ಆಚರಣೆಯನ್ನು ಮಹಾಮಾರಿ ಈ ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಗಾಂಧೀಜಿ ಜಯಂತ್ಯುತ್ಸವವನ್ನು ಅತ್ಯಂತ ಸರಳವಾಗಿ ಆಚರಿಸಲು ನಿರ್ಧರಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.