ETV Bharat / state

ಸಿಎಸ್​ಐ ತೆಲುಗು ಚರ್ಚ್​ ಫಾದರ್​ ವಿರುದ್ಧ ಹಣ ವಂಚನೆ ಆರೋಪ ಕ್ರಮಕ್ಕೆ ಅನುಯಾಯಿಗಳ ಆಗ್ರಹ - ಬಳ್ಳಾರಿ ಸುದ್ದಿ

ಸಿಎಸ್​ಐ ತೆಲುಗು ಚರ್ಚ್​ನ ಜೀರ್ಣೋದ್ಧಾರಕ್ಕಾಗಿ ಬಿಡುಗಡೆಗೊಳಿಸಿದ ಲಕ್ಷಾಂತರ ರೂ.ಗಳ ಸರ್ಕಾರಿ ಅನುದಾನವನ್ನ ಫಾದರ್ ರೆವರೆಂಡ್ ಇಮ್ಯಾನುಯೇಲ್ ಎಂಬುವವರು ತಮ್ಮ ಸ್ವಂತ ಖಾತೆಗೆ ಜಮಾಯಿಸಿಕೊಂಡು ವಂಚನೆ ಮಾಡಿದ್ದಾರೆಂದು ಚರ್ಚ್​ನ ಅನುಯಾಯಿಗಳು ಆರೋಪಿಸಿದ್ದಾರೆ.

Telugu CSI chuch
ಸಿಎಸ್​ಐ ತೆಲುಗು ಚರ್ಚ್​
author img

By

Published : Jan 21, 2021, 6:21 AM IST

ಬಳ್ಳಾರಿ: ಗಣಿನಗರಿ ಬಳ್ಳಾರಿಯ ಸಿಎಸ್​ಐ ತೆಲುಗು ಚರ್ಚ್​ನ ಫಾದರ್​ನಿಂದ ಸರ್ಕಾರಿ ಹಣವನ್ನ ಸ್ವಂತ ಖಾತೆಗೆ ಜಮಾವಣೆ ಮಾಡಿಕೊಳ್ಳುವ ಮುಖೇನ ಭಾರಿ ಭ್ರಷ್ಟಾಚಾರ ನಡೆಸಿರೋದು ಇದೀಗ ಬೆಳಕಿಗೆ ಬಂದಿದೆ.

ಈ ಹಿಂದೆ ಫಾದರ್ ರವಿಕುಮಾರ ಎಂಬಾತ ಯುವತಿಯೊಂದಿಗೆ ಪರಾರಿಯಾಗಿದ್ದಲ್ಲದೇ ಮಹಿಳೆಯಿಂದ ಪಡೆದ ಸುಮಾರು 9 ಲಕ್ಷ ರೂ.ಗಳ ಹಣವನ್ನ ವಾಪಸ್ ನೀಡದೆ ವಂಚನೆ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಪಾಲಾಗಿದ್ದ. ಇದರ ಬೆನ್ನಲ್ಲೇ 2018ರಲ್ಲಿ ನಡೆದ ಈ ಪ್ರಕರಣವು ಈಗ‌ ಮತ್ತೆ ಮುನ್ನಲೆಗೆ ಬಂದಿದೆ. ಸಿಎಸ್​ಐ ತೆಲುಗು ಚರ್ಚ್​ನ ಜೀರ್ಣೋದ್ಧಾರಕ್ಕಾಗಿ ಬಿಡುಗಡೆಗೊಳಿಸಿದ ಲಕ್ಷಾಂತರ ರೂ.ಗಳ ಸರ್ಕಾರಿ ಅನುದಾನವನ್ನ ಫಾದರ್ ರೆವರೆಂಡ್ ಇಮ್ಯಾನುಯೇಲ್ ಎಂಬುವವರು ತಮ್ಮ ಸ್ವಂತ ಖಾತೆಗೆ ಜಮಾಯಿಸಿಕೊಂಡು ವಂಚನೆ ಮಾಡಿದ್ದಾರೆಂಬ ಆರೋಪಗಳು ಕೇಳಿಬಂದಿವೆ.

ಇದನ್ನ ಪ್ರಶ್ನಿಸಿದ್ದ ಸಿಎಸ್​ಐ ತೆಲುಗು ಚರ್ಚ್ ಟ್ರಸ್ಟ್​ನ ಕಾರ್ಯದರ್ಶಿ ಹಾಗೂ ಖಜಾಂಚಿ ಅವರನ್ನೇ ಹೊರ ಹಾಕಲಾಗಿದ್ದು, ಅವರನ್ನ ಹುದ್ದೆಯಿಂದ ಹೊರಹಾಕಲಾಗಿದೆ. ಹೀಗಾಗಿ, ತೆಲುಗು ಚರ್ಚ್​ನ ಅನುದಾನ ಗುಳುಂ ಎನಿಸಿದ ಫಾದರ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ತೆಲುಗು ಚರ್ಚ್​ನ ಅನುಯಾಯಿಗಳು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ, ಈ ಕುರಿತು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ದ್ದಾರೆ.

ಬಳ್ಳಾರಿಯ ಕೋಟೆ ಪ್ರದೇಶದಲ್ಲಿರುವ ಸಿಎಸ್​ಐ ತೆಲುಗು ಚರ್ಚ್​ನ ಫಾದರ್ ಆಗಿರುವ ರೆವರೆಂಡ್ ಇಮ್ಯಾನುಯೇಲ್ ಎಂಬುವವರು 2018ರಲ್ಲಿ ರಾಜ್ಯ ಸರ್ಕಾರದಿಂದ ಮಂಜೂರಾದ ಲಕ್ಷಾಂತರ ರೂ.ಗಳ ಹಣವನ್ನ ಗುಳುಂ ಎನಿಸಿರುವ ಆರೋಪವನ್ನ ಹೊತ್ತಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತದ ಮೊರೆ ಹೋದರೂ ಈವರೆಗೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಈ ಹಿನ್ನೆಲೆಯಲ್ಲಿ ಚರ್ಚ್​ನ ಎದುರು ಹತ್ತಾರು ಮಂದಿ ಅನುಯಾಯಿಗಳು ಶಾಂತಿಯುತ ಪ್ರತಿಭಟನೆಗೆ ಮುಂದಾಗಿದ್ದಾರೆ. ಆದರೆ, ಈ ಕುರಿತು ಯಾವುದೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ. ಅಂದಿನಿಂದ ಇಂದಿನವರಿಗೂ ಕೂಡ ಕೇವಲ ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಲಾಗಿದೆಯೇ ಹೊರತು ಪ್ರಕರಣ ದಾಖಲಾಗಿರೋದೇ ಅತೀವ ಚರ್ಚೆಗೆ ಗ್ರಾಸವಾಗಿದೆ.

ಪ್ರತಿಭಟನಾಕಾರರ ಆರೋಪ ಏನು?: ಈ ಚರ್ಚ್​ನ ಹಣ ಗುಳುಂ ಎನಿಸಿರುವ ಫಾದರ್​ನ ಹಿಂದೆ ಪ್ರಮುಖ ರಾಜಕೀಯ ಮುಖಂಡರ ಕೈವಾಡವೂ ಇದೆ. ಇಲ್ಲವಾದಲ್ಲಿ, ಆ ಫಾದರ್ ಒಬ್ಬರೇ ಲಕ್ಷಾಂತರ ರೂ. ಮೊತ್ತದ ಸರ್ಕಾರಿ ಹಣವನ್ನ ಸ್ವಾಹ ಮಾಡಲು ಸಾಧ್ಯವೇ ಇಲ್ಲ‌. ಚರ್ಚ್​ನ ಜೀರ್ಣೋದ್ಧಾರಕ್ಕಾಗಿ ಬಳಕೆ ಮಾಡಬೇಕಾದ ಈ ಅನುದಾನವು ಫಾದರ್ ಪಾಲಾಗಿರೋದನ್ನ ನಾವು ಸಹಿಸೋಲ್ಲ. ಕೂಡಲೇ ಜಿಲ್ಲಾಡಳಿತ ಸೂಕ್ತ ತನಿಖೆಗೆ ಆದೇಶಿಸಬೇಕು. ಹಣ ವಂಚನೆ ಎನಿಸಿದ ಆರೋಪ ಹೊತ್ತಿರೋ ಫಾದರ್ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗ ಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.