ಬಳ್ಳಾರಿ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಎದುರಾದ ಪಾಪ ಪರಿಹಾರ ಮಾಡೋದು ಶ್ರೀರಾಮಚಂದ್ರನಲ್ಲ ಎಂದು ಗಣಿ ಅಕ್ರಮ ವಿರುದ್ಧದ ಹೋರಾಟಗಾರ ಟಪಾಲ್ ಗಣೇಶ್ ವ್ಯಂಗ್ಯವಾಡಿದ್ದಾರೆ.
ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ತಮ್ಮ ಫೇಸ್ಬುಕ್ ಖಾತೆಯಲ್ಲಿ ಪಾಪದ ಪ್ರಾಯಶ್ಚಿತಕ್ಕಾಗಿ ತಮಿಳುನಾಡು ರಾಜ್ಯದ ರಾಮೇಶ್ವರಂ ಶ್ರೀರಾಮನಾಥೇಶ್ವರ ಸ್ವಾಮಿ ದರ್ಶನ ಪಡೆದಿರೋದಾಗಿ ಶೇರ್ ಮಾಡಿಕೊಂಡಿದ್ದರ ಕುರಿತು ಈಟಿವಿ ಭಾರತ ವರದಿ ಪ್ರಕಟಿಸಿತ್ತು. ಅದನ್ನ ಸೂಕ್ಷ್ಮವಾಗಿ ಓದಿದ ಟಪಾಲ್ ಗಣೇಶ್, ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.
ಶ್ರೀರಾಮಚಂದ್ರರು ಅವತಾರ ಪುರುಷರು. ಅನ್ಯಾಯ, ಅಧರ್ಮವನ್ನ ಎತ್ತಿಹಿಡಿದ ದೈವಿ ಪುರುಷ ಅವರು. ಅಂತಹ ಮಹಾನ್ ದೇವರನ್ನ ಗಾಲಿ ಜನಾರ್ದನ ರೆಡ್ಡಿ ಅವರು ಹೋಲಿಕೆ ಮಾಡಿಕೊಳ್ಳೋದು ತರವಲ್ಲ. ನಿಮ್ಮಗಳ ಪಾಪ ಪರಿಹಾರಕ್ಕಾಗಿ ದೇವರ ಮೊರೆ ಹೋಗೋದರಿಂದ ಪರಿಹಾರ ಆಗಲ್ಲ. ನೀವು ಏನೇಯಿದ್ದರೂ ಸುಪ್ರೀಂಕೋರ್ಟ್ನ ಮೊರೆ ಹೋಗಬೇಕು. ಆಗ ಮಾತ್ರ ಪಾಪ ಯಾವುದು, ಪುಣ್ಯ ಯಾವುದು ಎಂಬುವುದು ಅರಿವಾಗುತ್ತೆ. ನಿಮ್ಮ ಹುಟ್ಟೂರಾದ ಬಳ್ಳಾರಿಗೆ ಬರಬೇಕಂದ್ರೂ ಕೂಡ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಬೇಕು ಎಂದಿದ್ದಾರೆ.