ETV Bharat / state

ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿಯರಿಗೆ ಸುರೇಶ್‌ಕುಮಾರ್​ ಕರೆ.. ಆತ್ಮಸ್ಥೈರ್ಯ ತುಂಬಿದ ಶಿಕ್ಷಣ ಸಚಿವರು

author img

By

Published : Jun 28, 2020, 10:22 PM IST

ಕೊರೊನಾ ವೈರಸ್‌ಗೆ ಭಯಪಡುವ ಅಗತ್ಯವಿಲ್ಲ. ಸ್ಯಾನಿಟೈಸರ್‌ನಿಂದ ಕೈತೊಳೆಯಬೇಕು. ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ವಿದ್ಯಾರ್ಥಿನಿಯರಿಗೆ ಶಿಕ್ಷಣ ಸಚಿವರು ಹೇಳಿದ್ದಾರೆ..

dsdd
ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿಯರಿಗೆ ಸುರೇಶ್​ ಕುಮಾರ್​ ಕರೆ

ಬಳ್ಳಾರಿ : ಜಿಲ್ಲೆಯ ಹೊಸಪೇಟೆ ಮೂಲದ ಇಬ್ಬರು ಎಸ್​ಸ್​ಎಲ್​ಸಿ ವಿದ್ಯಾರ್ಥಿನಿಯರಿಗೆ ಸ್ವತಃ ಶಿಕ್ಷಣ ಸಚಿವ ಎಸ್. ಸುರೇಶ್​ ಕುಮಾರ್​ ಕರೆಮಾಡಿ ಆಲ್ ದಿ ಬೆಸ್ಟ್ ಹೇಳುವ ಮುಖೇನ ವಿದ್ಯಾರ್ಥಿನಿಯರಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ.

ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿಯರಿಗೆ ಸಚಿವ ಸುರೇಶ್‌ಕುಮಾರ್​ ಕರೆ..

ನಗರದ ಎಂಜೆನಗರದ ಆದರ್ಶ ಶಾಲೆಯ ವಿದ್ಯಾರ್ಥಿನಿ ಹರ್ಷಿತಾ ಹಾಗೂ ಕಾನಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸ್ವಪ್ನಾ ಎಂಬುವರ ಮೊಬೈಲ್ ಸಂಖ್ಯೆಗೆ ಕರೆಮಾಡಿ ಎಸ್​ಎಸ್​ಎಲ್​ಸಿ ಪರೀಕ್ಷೆಯ ಪೂರ್ವ ಸಿದ್ಧತೆ ಕುರಿತು ವಿಚಾರಿಸಿದ್ದಾರೆ. ಪರೀಕ್ಷಾ ಕೇಂದ್ರದಲ್ಲಿ ತೆಗೆದುಕೊಂಡ ಕ್ರಮಗಳ ಕುರಿತು ವಿದ್ಯಾರ್ಥಿನಿಯರಿಂದ ಸಚಿವರು ಮಾಹಿತಿ ಪಡೆದಿದ್ದಾರೆ.

ಇದಲ್ಲದೇ ಕೊರೊನಾ ವೈರಸ್‌ಗೆ ಭಯಪಡುವ ಅಗತ್ಯವಿಲ್ಲ. ಸ್ಯಾನಿಟೈಸರ್‌ನಿಂದ ಕೈತೊಳೆಯಬೇಕು. ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ವಿದ್ಯಾರ್ಥಿನಿಯರಿಗೆ ಶಿಕ್ಷಣ ಸಚಿವರು ಹೇಳಿದ್ದಾರೆ. ಸ್ವತಃ ಶಿಕ್ಷಣ ಸಚಿವರು ಕರೆ ಮಾಡಿದ್ದಕ್ಕೆ ವಿದ್ಯಾರ್ಥಿನಿಯರು ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ಪರೀಕ್ಷೆ ಬರೆಯಲು ಮತ್ತಷ್ಟು ಹುಮ್ಮಸ್ಸು ಬಂದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.