ETV Bharat / state

ವಿಜಯನಗರ: ಸ್ಪರ್ಧಾ ವಿಜೇತರಿಗೆ ಪ್ರಶಸ್ತಿ ನೀಡಲು ಸನ್ನಿ ಲಿಯೋನ್‌ಗೆ ಆಹ್ವಾನ - ಬಾಲಿವುಡ್ ಬೆಡಗಿ ಸನ್ನಿ ಲಿಯೋನ್‌ಗೆ ಆಹ್ವಾನ

ಆಗಸ್ಟ್‌ 15ರಂದು ವಿಜಯನಗರದಲ್ಲಿ ಗುಡ್ಡ ಹತ್ತುವ ಹಾಗೂ ಓಟದ ಸ್ಪರ್ಧೆ ಆಯೋಜಿಸಲಾಗಿದೆ.

Sunny is invited to give peize to the winners of the competition
ಸ್ಪರ್ಧೆಯಲ್ಲಿ ವಿಜೇತರಾಗುವವರಿಗೆ ಪ್ರಶಸ್ತಿ ನೀಡಲು ಸನ್ನಿಗೆ ಆಹ್ವಾನ
author img

By

Published : Aug 12, 2022, 8:10 PM IST

ವಿಜಯನಗರ: ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಆಗಸ್ಟ್ 15ಕ್ಕೆ ವಿಜಯನಗರ ಕೇಂದ್ರ ಸ್ಥಾನ ಹೊಸಪೇಟೆಯಲ್ಲಿ ಕರುನಾಡ ಕ್ರಿಯಾಶೀಲ ಸಮಿತಿ ವತಿಯಿಂದ ಗುಡ್ಡ ಹತ್ತುವ ಹಾಗೂ ಓಟದ ಸ್ಪರ್ಧೆ ಆಯೋಜಿಸಲಾಗಿದೆ. ಈ ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ಪ್ರಶಸ್ತಿ ಪ್ರದಾನ ಮಾಡಲು ಬಾಲಿವುಡ್ ನಟಿ ಸನ್ನಿ ಲಿಯೋನ್‌ಗೆ ಆಹ್ವಾನ ನೀಡಲಾಗಿದೆ ಎಂದು ಸಮಿತಿಯ ಸಂಚಾಲಕ ಪಿ.ವಿ.ವೆಂಕಟೇಶ್ ತಿಳಿಸಿದರು.

ಪ್ರಶಸ್ತಿ ನೀಡಲು ಸನ್ನಿಗೆ ಆಹ್ವಾನ

ಹೊಸಪೇಟೆಯಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಆಗಸ್ಟ್ 15ರಂದು ಚಾಂಪಿಯನ್ ಚಿತ್ರತಂಡ ಹೊಸಪೇಟೆಗೆ ಆಗಮಿಸಲಿದೆ. ಈ ಚಿತ್ರದ ಐಟಂ ಸಾಂಗ್ ಒಂದರಲ್ಲಿ ಸನ್ನಿ ಲಿಯೋನ್ ನೃತ್ಯ ಮಾಡಿದ್ದಾರೆ. ಹೊಸಪೇಟೆಯಲ್ಲಿ ನಡೆಯಲಿರುವ ಬೆಟ್ಟ ಹತ್ತುವ ಮತ್ತು ಓಟದ ಸ್ಪರ್ಧೆಯಲ್ಲಿ ವಿಜೇತರಾಗುವವರಿಗೆ ಪ್ರಶಸ್ತಿ ಪ್ರದಾನ ಮಾಡಲು ಬರುವಂತೆ ನಟಿಗೆ ಆಹ್ವಾನ ನೀಡಲಾಗಿದೆ ಎಂದರು.

ಇದನ್ನೂ ಓದಿ: ಸ್ವಾತಂತ್ರ್ಯದ ಅಮೃತ ಮಹೋತ್ಸವ: ಮಂಗಳೂರಿನ ಧಕ್ಕೆಯಲ್ಲಿ ಬೋಟ್ ರ‍್ಯಾಲಿ

ಚಾಂಪಿಯನ್ ಚಿತ್ರದಲ್ಲಿ ಉತ್ತರ ಕರ್ನಾಟಕದ ಹುಡುಗ ಸಚಿನ್ ಧನಪಾಲ್ ನಾಯಕನಾಗಿ, ನಟಿ ಅಧಿತಿಪ್ರಭುದೇವ ನಾಯಕಿಯಾಗಿ ಅಭಿನಯಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.