ETV Bharat / state

ಸಣ್ಣ ಪುಟ್ಟ ಸಮಸ್ಯೆಗಳಿಂದ ಭಾನುವಾರದ ಸಂತೆ ಮಾರುಕಟ್ಟೆ ಸ್ಥಗಿತ: ಡಿಸಿ

ಬಳ್ಳಾರಿ ನಗರದ ಎಪಿಎಂಸಿ ಮಾರುಕಟ್ಟೆಯ ಆವರಣದಲ್ಲಿ ಅಂದಾಜು 3 ಕೋಟಿ ರೂ. ವೆಚ್ಚದಲ್ಲಿ ಭಾನುವಾರದ ಸಂತೆ ಮಾರುಕಟ್ಟೆ ನಿರ್ಮಾಣ ಮಾಡಲಾಗಿದ್ದು, ಕೆಲವು ಸಮಸ್ಯೆಗಳಿರುವ ಕಾರಣ ಮಾರುಕಟ್ಟೆಯನ್ನು ಬಳಕೆ ಮಾಡುತ್ತಿಲ್ಲವೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಎಸ್.ಎಸ್. ನಕುಲ್
author img

By

Published : Jul 29, 2019, 5:24 PM IST

ಬಳ್ಳಾರಿ: ಸಾರ್ವಜನಿಕರ ಹಿತಾಸಕ್ತಿಗಾಗಿ ಬಳ್ಳಾರಿ ನಗರದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಅಂದಾಜು 3 ಕೋಟಿ ರೂ. ವೆಚ್ಚದಲ್ಲಿ ಭಾನುವಾರದ ಸಂತೆ ಮಾರುಕಟ್ಟೆ ನಿರ್ಮಿಸಲಾಗಿದ್ದು, ಸಣ್ಣ ಪುಟ್ಟ ಸಮಸ್ಯೆಗಳಿರುವ ಹಿನ್ನೆಲೆ ಈವರೆಗೂ ಆ ಮಾರುಕಟ್ಟೆಯನ್ನು ಬಳಸಲು ಮುಂದಾಗಿಲ್ಲ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.

ಬಳ್ಳಾರಿ ನಗರದ ಡಾ. ರಾಜ್ ರಸ್ತೆಯಲ್ಲಿರುವ ಬಿಡಿಎಎ ಫುಟ್ಬಾಲ್ ಮೈದಾನದಲ್ಲಿಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಿಂದ ಆಯೋಜಿಸಿದ್ದ ಜಿಲ್ಲಾಧಿಕಾರಿ ಅವರೊಂದಿಗಿನ ಸಂವಾದ ಸಭೆಯಲ್ಲಿ ಅವರು ಮಾತನಾಡಿ, ರಾಜ್ಯ ಸರ್ಕಾರ ಅಂದಾಜು ಮೂರು ಕೋಟಿ ರೂ. ವೆಚ್ಚದಲ್ಲಿ ಭಾನುವಾರದ ಸಂತೆ ಮಾರುಕಟ್ಟೆಗೆ ವ್ಯವಸ್ಥೆ ಮಾಡಿದೆ. ಬೀದಿ ಬದಿ ಹಾಗೂ ಬಡ ವ್ಯಾಪಾರಸ್ಥರ ನಡುವಿನ ಕಿತ್ತಾಟದಿಂದಾಗಿ ಸಂತೆ ಮಾರುಕಟ್ಟೆ ಬಳಕೆಯಾಗುತ್ತಿಲ್ಲ ಎಂದಿದ್ದಾರೆ.

ಜಿಲ್ಲಾಧಿಕಾರಿ ಎಸ್.ಎಸ್.ನಕುಲ್

ಈಗಾಗಲೇ ಎಪಿಎಂಸಿ ಮಾರುಕಟ್ಟೆ ಅಧಿಕಾರಿಗಳಿಗೆ ನೋಟಿಸ್ ನೀಡಿರುವೆ. ಸಣ್ಣ ಪುಟ್ಟ ಸಮಸ್ಯೆಗಳ ಕಾರಣಗ‌ಳ ನೆಪವೊಡ್ಡಿ ಈ ಸಂತೆ ಮಾರುಕಟ್ಟೆ ಬಳಕೆಯಾಗುತ್ತಿಲ್ಲ ಎಂಬ ಸಬೂಬು ನೀಡಿದ್ದಾರೆ. ಹೀಗಾಗಿ, ಆದಷ್ಟು ಬೇಗ ಸಮಸ್ಯೆ ಬಗೆಹರಿಸಿಕೊಳ್ಳಿ. ಇಲ್ಲವಾದ್ರೆ, ಜಿಲ್ಲಾಡಳಿತ ಮಧ್ಯಪ್ರವೇಶ ಮಾಡಿದ್ರೆ ಕಷ್ಟವಾಗುತ್ತದೆ. ವಾರದಲ್ಲಿ ಈ ಸಮಸ್ಯೆಯನ್ನು ಬಗೆಹರಿಸಬೇಕು. ಹಾಗೊಂದು ವೇಳೆ ಜಿಲ್ಲಾಡಳಿತ ಮಧ್ಯಪ್ರವೇಶಿಸಿದರೆ ಜಿಲ್ಲಾಡಳಿತದ ಆದೇಶಕ್ಕೆ ತಾವೆಲ್ಲ ಬದ್ಧರಾಗಿರಬೇಕಾಗುತ್ತದೆ ಎಂದು ಕಟ್ಟಪ್ಪಣೆ ನೀಡಿದ್ದಾರೆ.

Intro:ಜಿಲ್ಲಾಧಿಕಾರಿ ನಕುಲ್ ಅವರೊಂದಿಗಿನ ಸಂವಾದ
ಸಣ್ಣ, ಪುಟ್ಟ ಸಮಸ್ಯೆಗಳಿಗೆ ಭಾನುವಾರದ ಸಂತೆ ಮಾರುಕಟ್ಟೆ ಸ್ಥಗಿತ: ಆತಂಕ ವ್ಯಕ್ತಪಡಿಸಿದ ಡಿಸಿ!
ಬಳ್ಳಾರಿ: ಸಾರ್ವಜನಿಕರ ಹಿತಾಸಕ್ತಿಗಾಗಿ ಬಳ್ಳಾರಿ ನಗರದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಅಂದಾಜು 3 ಕೋಟಿ ರೂ. ವೆಚ್ಚದಲ್ಲಿ ಭಾನುವಾರದ ಸಂತೆ ಮಾರುಕಟ್ಟೆ ನಿರ್ಮಿಸ ಲಾಗಿದ್ದು, ಸಣ್ಣ, ಪುಟ್ಟ ಸಮಸ್ಯೆಗಳಿಗೆ ಈವರೆಗೂ ಆ ಮಾರು ಕಟ್ಟೆ ಬಳಕೆಗೆ ಮುಂದಾಗಿಲ್ಲ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಆತಂಕ ವ್ಯಕ್ತಪಡಿಸಿದ್ದಾರೆ.
ಬಳ್ಳಾರಿ ನಗರದ ಡಾ.ರಾಜ್ ರಸ್ತೆಯಲ್ಲಿರುವ ಬಿಡಿಎಎ ಪುಟ್ಬಾಲ್ ಮೈದಾನದಲ್ಲಿಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಿಂದ ಆಯೋಜಿಸಿದ್ದ ಜಿಲ್ಲಾಧಿಕಾರಿ ಅವರೊಂದಿಗಿನ ಸಂವಾದ ಸಭೆಯಲ್ಲಿ ಅವರು ಮಾತನಾಡಿ, ರಾಜ್ಯ ಸರ್ಕಾರ ಅಂದಾಜು ಮೂರುಕೋಟಿ ರೂ. ವೆಚ್ಚದಲ್ಲಿ ಭಾನುವಾರದ ಸಂತೆ ಮಾರುಕಟ್ಟೆ ವ್ಯವಸ್ಥೆ ಮಾಡಿದರೆ, ಬೀದಿ ಬದಿ ಹಾಗೂ ದಡ ವ್ಯಾಪಾರಸ್ಥರ ನಡುವಿನ ಕಿತ್ತಾಟದಿಂದಾಗಿ ಸಂತೆ ಮಾರುಕಟ್ಟೆ ಬಳಕೆಯಾಗುತ್ತಿಲ್ಲ ಎಂದರು.
ಈಗಾಗಲೇ ಎಪಿಎಂಸಿ ಮಾರುಕಟ್ಟೆ ಅಧಿಕಾರಿಗಳಿಗೆ ನೋಟಿಸ್ ನೀಡಿರುವೆ. ಅವರಿಂದ ಸಣ್ಣ, ಪುಟ್ಟ ಸಮಸ್ಯೆಗಳ ಕಾರಣಗ‌ಳ ನೆಪವೊಡ್ಡಿ ಈ ಸಂತೆ ಮಾರುಕಟ್ಟೆ ಬಳಕೆಯಾಗುತ್ತಿಲ್ಲ ಎಂಬ ಸಬೂಬು ನೀಡಿದ್ದಾರೆ. ಹೀಗಾಗಿ, ತಾವುಗಳೇ ಮುಂದೆ ನಿಂತು ಕೊಂಡೇ ಈ ಸಮಸ್ಯೆ ಬಗೆಹರಿಸಿ. ಇಲ್ಲವಾದ್ರೆ, ಜಿಲ್ಲಾಡಳಿತ ಮಧ್ಯೆ ಪ್ರವೇಶ ಮಾಡಿದ್ರೆ ಕಷ್ಟವಾಗುತ್ತದೆ. ವಾರದಲ್ಲಿ ಈ ಸಮಸ್ಯೆಯನ್ನು ಬಗೆಹರಿಸಬೇಕು. ಹಾಗೊಂದು ವೇಳೆ ಜಿಲ್ಲಾಡಳಿತ ಮಧ್ಯೆಪ್ರವೇಶಿಸಿದರೆ ಜಿಲ್ಲಾಡಳಿತದ ಆದೇಶಕ್ಕೆ ತಾವೆಲ್ಲ ಬದ್ಧರಾಗಿರಬೇಕಾಗುತ್ತದೆ ಎಂದು ಕಟ್ಟಪ್ಪಣೆಯನ್ನು ನೀಡಿದ್ದಾರೆ.

Body:ಇದಕ್ಕೂ ಮುಂಚೆ ಎಪಿಎಂಸಿ‌ ಮಾರುಕಟ್ಟೆ ಸಮಿತಿ ದಲ್ಲಾಳಿ ವರ್ತಕ ಮಹಾರುದ್ರಗೌಡ ಮಾತನಾಡಿ, ಎಪಿಎಂಸಿ ಮಾರುಕಟ್ಟೆ ದ್ವಾರ ಬಾಗಿಲಿಗೆ ಗೇಟ್ ಇಲ್ಲ. ದಶಕಗಳೇ ಕಳೆದವು.‌ ಮಾರುಕಟ್ಟೆ ಒಳಗೆ ಸಾರ್ವಜನಿಕರ ಅತೀ ಕ್ರಮ ಪ್ರವೇಶವಾಗುತ್ತದೆ. ಅದರ ಕಡಿವಾಣಕ್ಕೆ ಎಪಿಎಂಸಿ ಅಧಿಕಾರಿಗಳು ಈವರೆಗೂ ಮುಂದಾಗಿ ಲ್ಲ. ಸಾರ್ವಜನಿಕ ಶೌಚಾಲಯ ನಿರ್ಮಾಣ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸುವಲ್ಲಿ ವಿಫಲವಾಗಿದೆ ಎಂದು ಸಂವಾದ ಸಭೆಯ ಗಮನ ಸೆಳೆದರು.
ಅತ್ಯಂತ ಸಾವಧಾನವಾಗಿ ದಲ್ಲಾಳಿ ವರ್ತಕ ಮಹಾರುದ್ರ
ಗೌಡರ ಸಮಸ್ಯೆಯನ್ನು ಆಲಿಸಿದ ಜಿಲ್ಲಾಧಿಕಾರಿ ನಕುಲ್ ಅವರು, ನಿಮ್ಮ ಸಮಸ್ಯೆಗಳನ್ನು ನಾನು ಸ್ವೀಕರಿಸುವೆ. ಆದರೆ, ನನ್ನ ಸಮಸ್ಯೆಯನ್ನೂ ಕೂಡ ತಾವು ಸ್ವೀಕರಿಸಬೇಕು. ನಮ್ಮಲ್ಲಿ ಸಂಡೇ ಮಾರುಕಟ್ಟೆ ಇದೆ. ತಮಗೆಲ್ಲಾ ಗೊತ್ತಾ.
ಹೌದು, ಸಭಿಕರೊಬ್ಬರು ಆದಿವಾರಂ ಅಥವಾ ಭಾನುವಾರದ ಮಾರುಕಟ್ಟೆ ಅಂತಾ ಕರಿತಾರೆ. ಅದನ್ನ ಏನಂತಾನೂ ಕರೀರಿ. ಆದರೆ, ಭಾನುವಾರದ ಸಂತೆ ಮಾರುಕಟ್ಟೆ ನಿರ್ಮಿಸೋದರ ಉದ್ದೇಶ ಸಾರ್ವಜನಿಕರಿಗೆ ಒಂದೆಡೆ ಮಾರುಕಟ್ಟೆಯ ವ್ಯವಸ್ಥೆ ಕಲ್ಪಿಸೋದರ ಬಗ್ಗೆ ಈ ಮಾರುಕಟ್ಟೆ ವ್ಯವಸ್ಥೆಯನ್ನು ಮಾಡಲಾ ಗಿದೆ ಎಂದರು.
ಸಣ್ಣ, ಪುಟ್ಟ ಸಮಸ್ಯೆಗಳಿಗೆ ಈ ಭಾನುವಾರದ ಸಂತೆ ಮಾರುಕಟ್ಟೆ ವ್ಯವಸ್ಥೆಯನ್ನು ಮಾಡಲಾಗಿದೆ. ಬೀದಿಬದಿ ವ್ಯಾಪಾರಸ್ಥರ ಬಳಿ ಹೋಗಿ ಸಾರ್ವಜನಿಕರು ಖರೀದಿ ಮಾಡುತ್ತಾರೆ. ಅವರು ಕುಳಿತಿರುವ ಸ್ಥಳ ಶುಚಿಯಾಗಿಲ್ಲ. ಆಗಾಗಿ, ಈ ಸಂತೆ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಕೂಡಲೇ ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿ ದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:ಪವರ್ ಡೈರೆಕ್ಟರ್ ನಲ್ಲಿ ಈ ವಿಡಿಯೊ ಕಳಿಸಿರುವೆ. ‌ಗಮನಿಸಿರಿ.
KN_BLY_2_DC_NAKUL_SAMVADA_SCRIPT_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.