ಬಳ್ಳಾರಿ : ತೈಲ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಎಸ್ಯುಸಿಐ(ಸಿ) ಸಂಘಟನೆ ಸದಸ್ಯರು ನಗರದ ರಾಘವೇಂದ್ರ ಸಿನಿಮಾ ಚಿತ್ರಮಂದಿರದ ಮುಂಭಾಗದ ನಡು ರಸ್ತೆಯಲ್ಲಿ ಪ್ರತಿಭಟಿಸಿದರು.
ಜಾಗತಿಕವಾಗಿ ತೈಲ ಬೆಲೆ ಕುಸಿತಗೊಂಡಿದ್ರೂ, ದೇಶದಲ್ಲಿ ಮಾತ್ರ ವಿಪರೀತ ಏರಿಕೆ ಮಾಡಿ ಜನರಿಂದ ಲೂಟಿ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಪ್ರತಿಕೃತಿ ದಹಿಸಿದರು.
ಸಂಘಟನೆ ಜಿಲ್ಲಾ ಸಮಿತಿಯ ಸದಸ್ಯ ಎ.ದೇವದಾಸ್ ಮಾತನಾಡಿ, ಕೊರೊನಾ ವೈರಸ್ ಸಮಯದಲ್ಲಿ ಕಳೆದ 21 ದಿನಗಳಿಂದ ನಿರಂತರವಾಗಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಿದೆ. ಜನರು ದುಡಿಯಲು ಕೆಲಸವಿಲ್ಲ. ಇಂತಹ ಸಮಯದಲ್ಲಿ ಬೆಲೆ ಏರಿಕೆ ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಜನರ ತಮ್ಮ ಕುಟುಂಬಗಳ ನಿರ್ವಾಹಣೆ ಹೇಗೆ? ಎಂದು ಆಲೋಚಿಸುತ್ತಿದ್ದಾರೆ. ಕೇಂದ್ರ ಬಿಜೆಪಿ ಸರ್ಕಾರ ಪೆಟ್ರೋಲ್, ಡೀಸೆಲ್ ವಿಚಾರದಲ್ಲಿ ಗ್ರಾಹಕರು ಮತ್ತು ಜನರನ್ನು ಲೂಟಿ ಮಾಡುತ್ತಿದೆ. ತೈಲ ಬೆಲೆ ಇಳಿಸಬೇಕು ಎಂದು ಒತ್ತಾಯಿಸಿದರು.