ETV Bharat / state

ಮೋದಿ-ಬೊಮ್ಮಾಯಿ ಸರ್ಕಾರಗಳ ವಿಕಾಸ ನೋಡಿ ಜನ ಮುಂದೆಯೂ ಬಿಜೆಪಿ ಗೆಲ್ಲಿಸುತ್ತಾರೆ : ಅರುಣ್ ಸಿಂಗ್ - ಜನ ಮುಂದೆಯೂ ಬಿಜೆಪಿ ಗೆಲ್ಲಿಸುತ್ತಾರೆ

ಈ ಪ್ರಕರಣದ ತನಿಖೆ ನಡೆಯುತ್ತಿದ್ದು, ಫಲಿತಾಂಶ ಏನು ಬರುತ್ತದೋ ಕಾದು ನೋಡೋಣ. ಕುರುಬ ಸಮಾಜದಲ್ಲಿ ಬಡವರಾಗಿ ಹುಟ್ಟಿ ಈಶ್ವರಪ್ಪ ಈ ಹಂತಕ್ಕೆ ಬಂದಿದ್ದಾರೆ. ಅವರು ಆರೋಪ ಮುಕ್ತರಾಗಿ ಹೊರ ಬರುತ್ತಾರೆ ಎಂಬ ನಂಬಿಕೆ ನಮಗಿದೆ. ಇಂದು ಪಕ್ಷ ಈ ಹಂತಕ್ಕೆ ಬರಲು ಅವರ ಪರಿಶ್ರಮವೂ ಕಾರಣ ಎಂದು ಅರುಣ್ ಸಿಂಗ್ ಹೇಳಿದರು..

ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್
ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್
author img

By

Published : Apr 16, 2022, 8:36 PM IST

Updated : Apr 16, 2022, 9:18 PM IST

ವಿಜಯನಗರ : ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ವಿಜಯದ ಸಂಕಲ್ಪ ಮಾಡಿ ವಿಜಯನಗರದಿಂದ ರಾಜ್ಯ ಕಾರ್ಯಕಾರಿಣಿ ಮಾಡಲಾಗುತ್ತಿದೆ. ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದು ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು.

ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿಣಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಇತ್ತೀಚೆಗೆ ಚುನಾವಣೆ ನಡೆದ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿದಿದ್ದನ್ನು ಕಂಡ ಕಾರ್ಯಕರ್ತರು ಉತ್ಸುಕರಾಗಿದ್ದಾರೆ. ಪ್ರಧಾನಿ ಮೋದಿ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರಗಳ ವಿಕಾಸದ ಆಧಾರದ ಮೇಲೆ ಜನ ಮುಂದೆಯೂ ಬಿಜೆಪಿಯನ್ನು ಗೆಲ್ಲಿಸುತ್ತಾರೆ ಎಂದರು.

ಮೋದಿ-ಬೊಮ್ಮಾಯಿ ಸರ್ಕಾರಗಳ ವಿಕಾಸ ನೋಡಿ ಜನ ಮುಂದೆಯೂ ಬಿಜೆಪಿ ಗೆಲ್ಲಿಸುತ್ತಾರೆ : ಅರುಣ್ ಸಿಂಗ್

ಕಾಂಗ್ರೆಸ್​ನಲ್ಲಿ ಸಿಎಂ ಯಾರಾಗಬೇಕು ಎನ್ನುವ ಮಾತುಗಳು ಈಗಾಗಲೇ ಆರಂಭವಾಗಿವೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ .ಶಿವಕುಮಾರ್ ಅವರು ಸಿದ್ದರಾಮಯ್ಯರನ್ನು ತುಳಿಯೋಕೆ ನೋಡುತ್ತಿದ್ದಾರೆ. ದೇಶದ ಜನರಿಗೆ ಕಾಂಗ್ರೆಸ್ ಮೇಲೆ ಭರವಸೆ ಹೋಗಿದೆ. ಕಾಂಗ್ರೆಸ್ ಎಂದರೆ ಕನ್ಫ್ಯೂಸ್ ಹಾಗೂ ಕುತಂತ್ರಿ ಪಾರ್ಟಿ. ಮುಂದೆ ಜನರೇ ಕಾಂಗ್ರೆಸ್ ಪಕ್ಷವನ್ನು ಧರೆಗೆ ಕಳಿಸುತ್ತಾರೆ ಎಂದರು.

ನಾಳೆ ನಡ್ಡಾ ಭಾಗಿ : ಬಿಜೆಪಿ ಅಧ್ಯಕ್ಷರಾದ ಜೆ ಪಿ ನಡ್ಡಾ ಅವರು ಮೊದಲ ಬಾರಿಗೆ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಾಳಿನ ಸಮಾರೋಪದಲ್ಲಿ ಅವರು ಭಾಗವಹಿಸಲಿದ್ದಾರೆ. ಈಶ್ವರಪ್ಪ ನಮ್ಮ ನಾಯಕರು. ಆರೋಪ ಕೇಳಿ ಬಂದ ತಕ್ಷಣವೇ ಅವರು ರಾಜೀನಾಮೆ ನೀಡಿದ್ದಾರೆ. ಇದರ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎನ್ನುವ ಅನುಮಾನವಿದೆ ಎಂದರು.

ಈ ಪ್ರಕರಣದ ತನಿಖೆ ನಡೆಯುತ್ತಿದ್ದು, ಫಲಿತಾಂಶ ಏನು ಬರುತ್ತದೋ ಕಾದು ನೋಡೋಣ. ಕುರುಬ ಸಮಾಜದಲ್ಲಿ ಬಡವರಾಗಿ ಹುಟ್ಟಿ ಈಶ್ವರಪ್ಪ ಈ ಹಂತಕ್ಕೆ ಬಂದಿದ್ದಾರೆ. ಅವರು ಆರೋಪ ಮುಕ್ತರಾಗಿ ಹೊರ ಬರುತ್ತಾರೆ ಎಂಬ ನಂಬಿಕೆ ನಮಗಿದೆ. ಇಂದು ಪಕ್ಷ ಈ ಹಂತಕ್ಕೆ ಬರಲು ಅವರ ಪರಿಶ್ರಮವೂ ಕಾರಣ ಎಂದು ಅರುಣ್ ಸಿಂಗ್ ಹೇಳಿದರು.

ಇದನ್ನೂ ಓದಿ: ಕರ್ನಾಟಕದಲ್ಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷ‌ ಸ್ಪರ್ಧೆ ಬಗ್ಗೆ ಸಿಎಂ ಜಗನ್​ ಜತೆ ಚರ್ಚೆ : ಆಂಧ್ರ ಸಚಿವೆ ಉಷಾ ಶ್ರೀಚರಣ್

Last Updated : Apr 16, 2022, 9:18 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.