ETV Bharat / state

ಹಂಪಿಯ ಬಡವಿಲಿಂಗ ದೇವರ ಅರ್ಚಕ ಕೆ ಎನ್​ ಕೃಷ್ಣ ಭಟ್ ನಿಧನ.. ಸಚಿವ ಶ್ರೀರಾಮುಲು ಸಂತಾಪ - Sriramulu condoles the death of KN Krishna Bhatt

ವಿಶ್ವವಿಖ್ಯಾತ ಹಂಪಿಯ ಬಡವಿಲಿಂಗ ದೇವರ ಅರ್ಚಕರಾದ ಕೆ ಎನ್ ಕೃಷ್ಣ ಭಟ್ (89) ಅವರು ನಿಧನರಾಗಿದ್ದಾರೆ. ಈ‌ ಕುರಿತು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರು ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದಾರೆ.

kn-krishna-bhatt
ಕೆ ಎನ್​ ಕೃಷ್ಣ ಭಟ್
author img

By

Published : Apr 25, 2021, 3:51 PM IST

ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯಲ್ಲಿ ಬಡವಿಲಿಂಗ ದೇವರ ಅರ್ಚಕರಾದ ಕೆ ಎನ್ ಕೃಷ್ಣ ಭಟ್ (89) ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ.

30 ವರ್ಷಗಳಿಂದ ಕೃಷ್ಣ ಭಟ್ ಅವರು ಬಡವಿಲಿಂಗಕ್ಕೆ ಪೂಜೆ ಮಾಡುತ್ತಾ ಬಂದಿದ್ದರು. ಕಳೆದ ಆರು ತಿಂಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು, ಇಂದು ಬೆಳಗಿನ ಜಾವ ಇಹಲೋಕ ತ್ಯಜಿಸಿದ್ದಾರೆ.

ಬಡವಿಲಿಂಗ ಭಾರತೀಯ ಪುರಾತತ್ವ ಇಲಾಖೆ ಹಾಗೂ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಕೃಷ್ಣ ಭಟ್​ ಅವರು ಸ್ವಯಂ ಪ್ರೇರಿತರಾಗಿ ಬಡವಿ ಲಿಂಗ ದೇವರ ವಿಗ್ರಹಕ್ಕೆ ಪೂಜೆಯನ್ನು ನೆರವೇರಿಸುತ್ತಾ ಬಂದಿದ್ದರು.

  • ವಿಶ್ವವಿಖ್ಯಾತ ಹಂಪಿಯಲ್ಲಿ 450 ವರ್ಷಗಳ ಬಳಿಕ ಪೂಜೆ ಆರಂಭಿಸಿ ಕಳೆದ ನಾಲ್ಕು ದಶಕಗಳಿಗಿಂತ ಹೆಚ್ಚು ಅವಧಿಗೆ ನಿತ್ಯ ಬಡವಿ ಲಿಂಗಕ್ಕೆ ಪೂಜೆ ಮಾಡುತ್ತಿದ್ದ ಶ್ರೀ ಕೆ.ಎನ್. ಕೃಷ್ಣ ಭಟ್ ಅವರ ನಿಧನದ ಸುದ್ದಿ ತಿಳಿದು ಮನಸ್ಸಿಗೆ ಘಾಸಿಯಾಗಿದೆ. ಅವರ ಆತ್ಮಕ್ಕೆ ಭಗವಂತನು ಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
    ಓಂ ಶಾಂತಿ. pic.twitter.com/ZlvFWY7s1Z

    — B Sriramulu (@sriramulubjp) April 25, 2021 " class="align-text-top noRightClick twitterSection" data=" ">

ಈ‌ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರು ಸಂತಾಪ ಸೂಚಿಸಿದ್ದು, ವಿಶ್ವವಿಖ್ಯಾತ ಹಂಪಿಯಲ್ಲಿ 450 ವರ್ಷಗಳ ಬಳಿಕ ಪೂಜೆ ಆರಂಭಿಸಿ ಕಳೆದ ನಾಲ್ಕು ದಶಕಗಳಿಗಿಂತ ಹೆಚ್ಚು ಅವಧಿಗೆ ನಿತ್ಯ ಬಡವಿ ಲಿಂಗಕ್ಕೆ ಪೂಜೆ ಮಾಡುತ್ತಿದ್ದ ಶ್ರೀ ಕೆ.ಎನ್. ಕೃಷ್ಣ ಭಟ್ ಅವರ ನಿಧನದ ಸುದ್ದಿ ತಿಳಿದು ಮನಸ್ಸಿಗೆ ಘಾಸಿಯಾಗಿದೆ. ಅವರ ಆತ್ಮಕ್ಕೆ ಭಗವಂತನು ಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು ಬರೆದುಕೊಂಡಿದ್ದಾರೆ.

ಓದಿ: ವಾರಾಂತ್ಯ ಕರ್ಫ್ಯೂ.. 300ಕ್ಕೂ ಅಧಿಕ ಮಂದಿಗೆ ಅನ್ನ ನೀಡಿ ಮಾನವೀಯತೆ ಮೆರೆದ ಕುಡ್ಲದ ಹೋಟೆಲ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.