ETV Bharat / state

ಮಾನಸಿಕ ಅಸ್ವಸ್ಥತನ ಆಡಿಯೋ ವೈರಲ್​ ಪ್ರಕರಣ: ಬಳ್ಳಾರಿ ಎಸ್ಪಿ ಸ್ಪಷ್ಟನೆ - ಮಾನಸಿಕ ಅಸ್ವಸ್ಥತನ ಆಡಿಯೋ ವೈರಲ್​ ಪ್ರಕರಣ

ಅನೇಕ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಸಿದ್ದಾಗಿ ವ್ಯಕ್ತಿಯೋರ್ವನ ಆಡಿಯೋ ವೈರಲ್ ಪ್ರಕರಣ ಸಂಬಂಧ ಎಸ್ಪಿ ಸೈದುಲು ಅಡಾವತ್ ಸ್ಪಷ್ಟನೆ ನೀಡಿದ್ದಾರೆ.

SP Saidulu Adavat
ಎಸ್ಪಿ ಸೈದುಲು ಅಡಾವತ್
author img

By

Published : Sep 16, 2021, 8:48 PM IST

ಬಳ್ಳಾರಿ: ಗಣಿನಾಡಿನಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದ್ದ ಮಾನಸಿಕ ಅಸ್ವಸ್ಥತನ ಆಡಿಯೋ ವೈರಲ್​ ಪ್ರಕರಣ ಸಂಬಂಧ ಎಸ್ಪಿ ಸೈದುಲು ಅಡಾವತ್ ಸ್ಪಷ್ಟನೆ ನೀಡಿದರು.

ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್ಪಿ, ಆಡಿಯೋದಲ್ಲಿ ಮಾತನಾಡಿರುವ ವ್ಯಕ್ತಿ ಬಿಜಾಪುರ ಮುದ್ದೆಬೀಹಾಳ ತಾಲೂಕಿನ ನಾಲಕವಾಡ ಗ್ರಾಮದವ. ಈತ ಪೇಂಟರ್​ ಆಗಿ ಕೆಲಸ ಮಾಡುತ್ತಿದ್ದಾನೆ. ಮಾನಸಿಕ ಅಸ್ವಸ್ಥನಾಗಿದ್ದು, ಈ ರೀತಿಯಾಗಿ ಮಾತನಾಡಿದ್ದಾನೆ ಎಂದು ತನಿಖೆಯಿಂದ ತಿಳಿದು ಬಂದಿದೆ.

ಎಸ್ಪಿ ಸೈದುಲು ಅಡಾವತ್ ಸ್ಪಷ್ಟನೆ

ಪದೇ ಪದೇ ಈ ರೀತಿಯ ಅಸಭ್ಯವಾಗಿ ಮಾತನಾಡುವುದೇ ವ್ಯಕ್ತಿಯ ಪ್ರವೃತ್ತಿಯಾಗಿತ್ತು. ಆದರೆ ಬಿಜಾಪುರದ ವರದಿಗಾರ ಎಂದು ಹೇಳಿಕೊಳ್ಳುವ ವ್ಯಕ್ತಿಯ ಹತ್ತಿರ ಇದೇ ರೀತಿ ಮಾತನಾಡುವಾಗ ಆಡಿಯೋ ರೆಕಾರ್ಡ್ ಮಾಡಿದ್ದರಿಂದ ಆಡಿಯೋ ವೈರಲ್ ಆಗಿದೆ ಎಂದು ತಿಳಿಸಿದರು.

ಅಪರಿಚಿತ ಆರೋಪಿ ತನ್ನ ಸ್ನೇಹಿತನಿಗೆ ಪೋನ್ ಮಾಡುವಾಗ, ಆ ಫೋನ್​ ಕಾಲ್​ ಮಿಸ್​ ಆಗಿ ಬೇರೆಯವರಿಗೆ ಕನೆಕ್ಟ್​​ ಆಗಿದೆ. ಆಗ ಆತ ತಮ್ಮದೊಂದು ಗ್ಯಾಂಗ್ ಇದೆ. ಹುಡುಗಿಯರನ್ನು ರೇಪ್ ಮಾಡೋದೇ ನಮ್ಮ ಕೆಲಸ ಎಂದಿದ್ದಾನೆ. ಒಮ್ಮೆ ರೇಪ್ ಮಾಡುವಾಗ ಓರ್ವ ಯುವತಿ ಸಾವನ್ನಪ್ಪಿದ್ದಳು. ಹೀಗಾಗಿ ಸ್ನೇಹಿತರ ಗುಂಪು ಚದುರಿ ಹೋಗಿದೆ ಎಂದು ಮಾತನಾಡಿದ್ದಾನೆ. ಈ ಆಡಿಯೋ ಇದೀಗ ಜಿಲ್ಲೆಯಾದ್ಯಂತ ವೈರಲ್ ಆಗಿತ್ತು.

ಇದನ್ನೂ ಓದಿ: ಬಳ್ಳಾರಿ ಜಿಲ್ಲೆಯಲ್ಲಿ ರೇಪಿಸ್ಟ್ ಗ್ಯಾಂಗ್ ಆಡಿಯೋ ಹಿಂದಿನ ಅಸಲಿಯತ್ತೇನು? ಎಸ್ಪಿ ಸ್ಪಷ್ಟನೆ ಹೀಗಿದೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.