ಬಳ್ಳಾರಿ: ಚಾಮರಾಜಪೇಟೆ ಶಾಸಕ ಜಮೀರ್ ಅಹಮ್ಮದ್ ಖಾನ್ ಅವರು ಬಳ್ಳಾರಿ ಭೇಟಿ ನೀಡಿರುವ ಹಿನ್ನೆಲೆಯಲ್ಲಿ ಇಂದು ಬಳ್ಳಾರಿ- ಕುಡಿತಿನಿ ಮಾರ್ಗದ ಸಂಚಾರದಲ್ಲಿ ಅಡೆತಡೆ ಉಂಟಾಗಿರುವುದರಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಕ್ಷಮೆ ಯಾಚಿಸಿದ್ದಾರೆ.
ಪ್ರಚೋದನಕಾರಿ ಭಾಷಣದ ಆರೋಪ ಹೊತ್ತಿರುವ ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿಯವರ ವಿರುದ್ಧ ಈ ದಿನ ಶಾಸಕ ಜಮೀರ್ ಅಹಮ್ಮದ ಖಾನ್ ಅವರು ಬಳ್ಳಾರಿ ಭೇಟಿ ನೀಡಿದ್ದರಿಂದ ಕೆಲಕಾಲ ಬಳ್ಳಾರಿ-ಕುಡಿತಿನಿ ಮಾರ್ಗದ ಸಂಚಾರದಲಿ ಅಡೆತಡೆ ಉಂಟಾಗಿತ್ತು. ಸಾರ್ವಜನಿಕರ ಸಹಕಾರದೊಂದಿಗೆ ಜಮೀರ್ ಅಹಮ್ಮದ್ ಖಾನ್ ಅವರನ್ನ ತಡೆದು ವಾಪಾಸ್ ಕರೆತರಲು ಸಹಕಾರಿಯಾಯಿತು ಎಂದು ಎಸ್ಪಿ ಸಿ.ಕೆ.ಬಾಬಾ ತಿಳಿಸಿದ್ದಾರೆ.
ಸ್ಟೇಷನ್ ಬೇಲ್ ನೀಡಲಾಗಿದೆ: ಚಾಮರಾಜಪೇಟೆ ಶಾಸಕ ಜಮೀರ್ ಅಹಮ್ಮದ್ ಖಾನ್ ಅವರನ್ನ ವೇಣಿವೀರಾಪುರ ಬಳಿ ಬಂಧಿಸಲಾಗಿದ್ದು, ತೋರಣಗಲ್ಲು ಪೊಲೀಸ್ ಠಾಣೆಗೆ ಕರೆತರಲಾಗಿದೆ. ಅವರಿಗೆ ಸ್ಟೇಷನ್ ಬೇಲ್ ನೀಡುವ ಮೂಲಕ ಬಂಧಿಸಿ, ಬಿಡುಗಡೆ ಮಾಡಲಾಗಿದೆ ಎಂದು ಎಸ್ಪಿ ಬಾಬಾ ತಿಳಿಸಿದರು. ಅಲ್ಲದೇ ಶಾಸಕ ಜಮೀರ್ ಅವರೊಂದಿಗೆ ಅಂದಾಜು ಇಪ್ಪತ್ತೈದು ಮಂದಿ ಬೆಂಬಲಿಗರನ್ನು ಬಂಧಿಸಿ, ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.