ETV Bharat / state

ವಿಜಯನಗರ: ನಿಧಿ ಆಸೆಗಾಗಿ ನಂದಿ ಬಸವೇಶ್ವರ ವಿಗ್ರಹ ವಿರೂಪಗೊಳಿಸಿದ ಆರೋಪ - ನಿಧಿ ಆಸೆಗಾಗಿ ದೇವರ ವಿಗ್ರಹ ವಿರೂಪ

ನಿಧಿ ಆಸೆಗಾಗಿ ಬಸವೇಶ್ವರ ದೇವಸ್ಥಾನದಲ್ಲಿ ನಂದಿ ಬಸವೇಶ್ವರ ವಿಗ್ರಹವನ್ನು ದುಷ್ಕರ್ಮಿಗಳು ವಿರೂಪಗೊಳಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಆರೋಪಿಗಳನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

some were damaged An idol of God in hosapete
ನಂದಿ ಬಸವೇಶ್ವರ ವಿಗ್ರಹ
author img

By

Published : Jun 22, 2021, 5:31 PM IST

ಹೊಸಪೇಟೆ (ವಿಜಯನಗರ): ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕೆರೆಗುಡಿಹಳ್ಳಿ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ನಂದಿ ಬಸವೇಶ್ವರ ವಿಗ್ರಹವನ್ನು ದುಷ್ಕರ್ಮಿಗಳು ವಿರೂಪಗೊಳಿಸಿದ್ದು, ಕೂಡಲೇ ತಪ್ಪಿಸ್ಥರನ್ನು ಪತ್ತೆ ಹಚ್ಚಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ನಂದಿ ಬಸವೇಶ್ವರ ವಿಗ್ರಹ ವಿರೂಪಗೊಳಿಸಿದ ಆರೋಪ

ತಡರಾತ್ರಿ ಕಳ್ಳರು ನಿಧಿ ಆಸೆಗಾಗಿ ಈ ರೀತಿ ವಿಗ್ರಹವನ್ನು ಮುಕ್ಕು ಮಾಡಿರುವ ಅನುಮಾನ ವ್ಯಕ್ತವಾಗಿದೆ. ಕಳೆದ ತಿಂಗಳು ದೇವಸ್ಥಾನದ ಗಂಟೆ, ಸಿಸಿ ಕ್ಯಾಮರಾಗಳನ್ನು ಕಳವು ಮಾಡಲಾಗಿತ್ತು. ಪದೇ ಪದೆ ಈ ರೀತಿ ಕೃತ್ಯಗಳು ನಡೆಯುತ್ತಿದ್ದು, ಧಾರ್ಮಿಕ ಭಾವನೆಗೆ ಧಕ್ಕೆಯುಂಟಾಗಿದೆ ಎಂದು ಭಕ್ತರು ಬೇಸರ ವ್ಯಕ್ತಪಡಿಸಿದ್ದಾರೆ.

ದೇವಸ್ಥಾ‌ನಕ್ಕೆ ಸೂಕ್ತ ಭದ್ರತೆ ಒದಗಿಸಬೇಕು. ಅಲ್ಲದೇ, ಆರೋಪಿಗಳನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಿಪಿಐ ತಾಲೂಕು ಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ್ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಮೊಸರಲ್ಲಿ ಕಲ್ಲು ಹುಡುಕುವ ಕಾಂಗ್ರೆಸ್ಸಿಗರಿಗೆ ದೇವರು ಒಳ್ಳೆಯ ಬುದ್ದಿ ಕೊಡಲಿ : ಸಚಿವ ಆರ್. ಅಶೋಕ್​

ಘಟನೆ ಬೆಳೆಕಿಗೆ ಬರುತ್ತಿದ್ದಂತೆ ಅರಸೀಕೆರೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮಸ್ಥರಾದ ರಾಜಶೇಖರ್, ರೇವಣಸಿದ್ದಪ್ಪ, ಗುರುಶಾಂತಪ್ಪ, ಹರ್ಷವರ್ಧನ, ಎನ್. ಮಂಜುನಾಥ್, ಕಲ್ಲೇಶ್, ಶಿವನಾಗಪ್ಪ ಸೇರಿದಂತೆ ಇತರರು ಇದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.