ಹೊಸಪೇಟೆ: ತಾಲೂಕಿನ ಸೀತಾರಾಮ ತಾಂಡದಲ್ಲಿ ಮಕ್ಕಳು ಸೇರಿದಂತೆ ಹಲವರು ತೀವ್ರವಾಗಿ ಜ್ವರಬಾಧೆಯಿಂದ ಬಳಲುತ್ತಿದ್ದು, ಇದರಿಂದ ತಾಂಡ ಜನತೆ ಭಯಭೀತರಾಗಿದ್ದಾರೆ.
ಸೀತಾರಾಮ ತಾಂಡದ ಜನರು, ಕಳೆದ ಒಂದು ವಾರದಿಂದ ದಿನನಿತ್ಯ ಆಸ್ಪತ್ರೆಗೆ ಅಲೆದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ತಾಂಡದ ಮನೆಗಳಲ್ಲಿ ಜನರು ಹಾಸಿಗೆ ಹಿಡಿದ್ದಾರೆ. ಸೀತಾರಾಮ ತಾಂಡ ಜನರು ಜ್ವರಬಾಧೆಗೆ ತತ್ತರಿಸಿ ಹೋಗಿದ್ದಾರೆ. ಜನರು ಶಂಕಿತ ಡೆಂಗಿ ಜ್ವರ ಎಂದು ಹೇಳುತ್ತಿದ್ದಾರೆ.
ಓದಿ: ಜೆಡಿಎಸ್ ಜಾತ್ಯತೀತತೆ ಪರೀಕ್ಷಿಸಲು ಹೊರಟವರಿಗೆ ಧರ್ಮೇಗೌಡರ ಸಾವೇ ಉತ್ತರ: ಹೆಚ್‌ಡಿಕೆ ಕಣ್ಣೀರು
'ಈಟಿವಿ ಭಾರತ'ದೊಂದಿಗೆ ತಾಲೂಕು ವೈದ್ಯಾಧಿಕಾರಿ ಡಾ. ಡಿ.ಭಾಸ್ಕರ್ ಮಾತನಾಡಿ, ಸೀತಾರಾಮ ತಾಂಡದ 11 ಜನರ ರಕ್ತದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಆದರೆ ಡೆಂಗಿ ಜ್ವರ ಪತ್ತೆಯಾಗಿಲ್ಲ. ಅಲ್ಲದೆ ಕೆಲವರಲ್ಲಿ ಟೈಫಾಯಿಡ್ ಜ್ವರ ಕಾಣಿಸಿಕೊಂಡಿದೆ.
ಪ್ರತಿನಿತ್ಯ ಆರೋಗ್ಯ ತಪಾಸಣೆ ಮಾಡಲಾಗುತ್ತಿದ್ದು, ಲಾರ್ವಾ ಸರ್ವೇಯನ್ನು ಸಹ ನಡೆಸಲಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಗ್ರಾಮ ಪಂಚಾಯಿತಿಯಿಂದ ಫಾಗಿಂಗ್ ಮಾಡಿಸಲಾಗಿದೆ ಎಂದು ಹೇಳಿದರು.