ETV Bharat / state

ಶ್ರೀಕೃಷ್ಣ ದೇವರಾಯ ವಿವಿಯಲ್ಲಿ ಅವ್ಯವಹಾರ ಆರೋಪ: ಎಬಿವಿಪಿಯಿಂದ ಪ್ರತಿಭಟನೆ - undefined

ಶ್ರೀ ಕೃಷ್ಣ ದೇವರಾಯ ವಿವಿಯಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕಾತಿಯಲ್ಲಿ ಭ್ರಷ್ಟಚಾರ ನಡೆದಿದೆ ಎಂದು ಆರೋಪಿಸಿ ಎಬಿವಿಪಿವತಿಯಿಂದ ಪ್ರತಿಭಟನೆ.

ಎಬಿವಿಪಿಯಿಂದ ಭ್ರಷ್ಟಚಾರ ಖಂಡಿಸಿ ಪ್ರತಿಭಟನೆ
author img

By

Published : Jun 9, 2019, 10:21 AM IST

ಬೆಂಗಳೂರು: ವಿಜಯನಗರ ಶ್ರೀ ಕೃಷ್ಣ ದೇವರಾಯ ವಿವಿಯಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕಾತಿಯಲ್ಲಿ ಭಾರಿ ಭ್ರಷ್ಟಾಚಾರವಾಗಿದೆ ಎಂದು ಆರೋಪಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ​ವತಿಯಿಂದ ಮಲ್ಲೇಶ್ವರಂನಲ್ಲಿ ಪ್ರತಿಭಟನೆ ನಡೆಸಲಾಯಿತು.

ಬಳ್ಳಾರಿ ಹಾಗು ಕೊಪ್ಪಳ ಜಿಲ್ಲೆಗಳಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವ ಈ ವಿಶ್ವವಿದ್ಯಾಲಯ 2011 ರಲ್ಲಿ ಪ್ರಾರಂಭವಾಯಿತು. ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಹಾಗೂ ಆಡಳಿತ ನೀಡಬೇಕಾದ ವಿಶ್ವವಿದ್ಯಾಲಯ ಇಂದು ಸಾಕಷ್ಟು ಭ್ರಷ್ಟಾಚಾರ ಹಗರಣಗಳಿಗೆ ಹೆಸರುವಾಸಿ ಆಗುತ್ತಿದೆ. 2016ರಲ್ಲಿ ಈ ವಿಶ್ವವಿದ್ಯಾಲಯಕ್ಕೆ ಕುಲಪತಿಗಳಾಗಿ ನೇಮಕಗೊಂಡ ಪ್ರೊ. ಎಮ್.ಎಸ್. ಸುಭಾಷ ಜವರು ಆರಂಭದ ದಿನಗಳಿಂದಲೂ ವಿವಿಯನ್ನು ಒಂದಲ್ಲ ಒಂದು ವಿವಾದಕ್ಕೆ ಎಡೆ ಮಾಡಿ ಕೊಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.

ಎಬಿವಿಪಿಯಿಂದ ಭ್ರಷ್ಟಾಚಾರ ಖಂಡಿಸಿ ಪ್ರತಿಭಟನೆ

ಕುಲಸಚಿವರ ಹಾಗೂ ಕುಲಪತಿಗಳ ಆಂತರಿಕ ಕಚ್ಚಾಟ, ವಿವಿಯಲ್ಲಿ ದಾಖಲಾದ ಜಾತಿ ನಿಂದನೆ ಪ್ರಕರಣಗಳು, ಬೇಕಾಬಿಟ್ಟಿ ಸಿಬ್ಬಂದಿ ವರ್ಗಾವಣೆ ಹಾಗೂ ವಜಾಗೊಳಿಸುವಿಕೆ ಸೇರಿ ಅನೇಕ ಸ್ವಪಕ್ಷಿಯ ನಿರ್ಧಾರಗಳಿಂದ ಕುಲಪತಿಗಳು ವಿವಿಯನ್ನು ತಮ್ಮ ಸ್ವತ್ತಿನಂತೆ ವರ್ತಿಸುತ್ತಿದ್ದಾರೆ. ಪ್ರಸ್ತುತ 5-6 ತಿಂಗಳಿನಿಂದ ಬೋಧಕ -ಬೋಧಕೇತರ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಯಲ್ಲಿ ಧನ ಸಹಾಯ ಆಯೋಗ ನೀತಿ ನಿಯಮಗಳನ್ನು ಉಲ್ಲಂಘಿಸಿ, ಅಕ್ರಮವಾಗಿ ನಡೆಸುತ್ತಿದ್ದು, ಕುಲಪತಿಗಳು ಬಡ ಮತ್ತು ಪ್ರತಿಭಾನ್ವಿತ ಅಭ್ಯರ್ಥಿಗಳ ಜೊತೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ವಿವಿಯಲ್ಲಿ ನೇಮಕಾತಿಗೆ ಸಂಬಂಧಿಸಿದಂತೆ ಭಾರಿ ಭ್ರಷ್ಟಾಚಾರ ನಡೆಯುತ್ತಿದ್ದರೂ ರಾಜ್ಯ ಸರ್ಕಾರ, ಉನ್ನತ ಶಿಕ್ಷಣ ಇಲಾಖೆ, ಸಚಿವರು ಹಾಗೂ ರಾಜ್ಯಪಾಲರು ಮೌನವಹಿಸಿರುವುದು ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ. ಈ ಕ್ರಮವನ್ನು ಎಬಿವಿಪಿ ತೀವ್ರವಾಗಿ ಖಂಡಿಸಿ, ಅಕ್ರಮ ನೇಮಕಾತಿ ರದ್ದು ಮಾಡಬೇಕೆಂದು ಆಗ್ರಹಿಸಿದೆ.

Intro:ABVP protestBody:ವಿಜಯನಗರ ಶ್ರೀ ಕೃಷ್ಣ ದೇವರಾಯ ವಿವಿಯಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಅಕ್ರಮ
ನೇಮಕಾತಿಯಲ್ಲಿ ಭಾರಿ ಭ್ರಷ್ಟಾಚಾರವಾಗಿದೆ ಎಂದು ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಲ್ಲೇಶ್ವರಂನಲ್ಲಿ ಪ್ರತಿಭಟನೆ ನಡೆಸಿತು.

ಬಳ್ಳಾರಿ ಹಾಗು ಕೊಪ್ಪಳ ಜಿಲ್ಲೆ ಗಳಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವ ವಿಶ್ವವಿದ್ಯಾಲಯ
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ, ಈ ವಿಶ್ವವಿದ್ಯಾಲಯ 2011 ರಲ್ಲಿ ಪ್ರಾರಂಭವಾಯಿತು. ಈ
ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಹಾಗೂ ಆಡಳಿತ ನೀಡಬೇಕಾದ ವಿಶ್ವವಿದ್ಯಾಲಯ ಇಂದು ಸಾಕಷ್ಟು
ಭ್ರಷ್ಟಾಚಾರ ಹಗರಣಗಳಿಗೆ ಹೆಸರುವಾಸಿ ಯಾಗುತ್ತಿದೆ. 2016ರಲ್ಲಿ ಈ ವಿಶ್ವವಿದ್ಯಾಲಯಕ್ಕೆ ಕುಲಪತಿಗಳಾಗಿ
ನೇಮಕಗೊಂಡ ಪ್ರೋ. ಎಮ್.ಎಸ್.ಸುಭಾಷ ಜವರು ಆರಂಭದ ದಿನಗಳಿಂದಲೂ ವಿವಿಯನ್ನು ಒಂದಲ್ಲ ಒಂದು
ವಿವಾದಕ್ಕೆ ಎಡೆ ಮಾಡಿ ಕೊಡುತ್ತಿದ್ದಾರೆ, ಕುಲಸಚಿವರ ಹಾಗೂ ಕುಲಪತಿಗಳ ಆಂತರಿಕ ಕಚ್ಚಾಟ, ವಿವಿಯಲ್ಲಿ ದಾಖಲಾದ
ಜಾತಿ ನಿಂದನೆ ಪ್ರಕರಣ ಗಳು, ಬೇಕಾಬಿಟ್ಟಿ ಸಿಬ್ಬಂದಿಗಳ ವರ್ಗಾವಣೆ ಹಾಗೂ ವಜಾ ಗೊಳಿಸುವಿಕೆ ಇಂತಹ ಅನೇಕ ಸ್ವಪಕ್ಷಿಯ ನಿರ್ಧಾರಗಳಿಂದ ಕುಲಪತಿಗಳು ವಿವಿಯನ್ನು ತನ್ನ ಸ್ವತ್ತಿನಂತೆ ವರ್ತಿಸುತ್ತಿದ್ದಾರೆ.
ಪ್ರಸ್ತುತ 5-6 ತಿಂಗಳುಗಳಿಂದ ಬೋಧಕ ಬೋಧಕೇತರ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಯನ್ನು ಧನ ಸಹಾಯ
ಆಯೋಗ ನೀತಿ ನಿಯಮಗಳನ್ನು ಉಲ್ಲಂಘಿಸಿ, ಅಕ್ರಮವಾಗಿ ನಡೆಸುತ್ತಿದ್ದು, ಕುಲಪತಿಗಳು ವಿಶ್ವವಿದ್ಯಾಲಯ ಹಾಗೂ
ಬಡ ಮತ್ತು ಪ್ರತಿಭಾನ್ವಿತ ಅಭ್ಯರ್ಥಿಗಳ ಜೊತೆ ಚೆಲ್ಲಾಟ ಮಾಡುತ್ತಿದ್ದಾರೆ. ವಿವಿಯಲ್ಲಿ ನೇಮಕಾತಿಗೆ ಸಂಬಂಧಿಸಿದಂತೆ
ಭಾರಿ ಭ್ರಷ್ಟಾಚಾರ ನಡೆಯದಿದ್ದರೂ ರಾಜ್ಯ ಸರ್ಕಾರದ, ಉನ್ನತ ಶಿಕ್ಷಣ ಇಲಾಖೆ, ಸಚಿವರು ಹಾಗೂ ರಾಜ್ಯಪಾಲರು
ಮೌನವಹಿಸಿರುವುದು ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ. ಈ ಕ್ರಮವನ್ನು ಎಬಿವಿಪಿ ತೀವ್ರವಾಗಿ ಖಂಡಿಸಿ ಪ್ರತಿಭಟನೆ ಮಾಡಿ, ಅಕ್ರಮ ನೇಮಕಾತಿ ರದ್ದು ಮಾಡಬೇಕು ಎಂದು ಆಗ್ರಹಿಸಿದರುConclusion:Visual from mojo

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.