ಬಳ್ಳಾರಿ: ನಗರದಲ್ಲಿಂದು ಶ್ರೀ ಕನಕದುರ್ಗಮ್ಮ ದೇವಿ ಸಿಡಿಬಂಡಿ ಉತ್ಸವದಲ್ಲಿ ಪಾಲ್ಗೊಂಡಿದ್ದ ಸಾವಿರಾರು ಜನರು ತಾಯಿ ದರ್ಶನ ಪಡೆದು ಪುನಿತರಾದರು.
ನಗರದ ಗಾಣಿಗ ಬೀದಿಯ ಮೂರು ಜೊತೆ ಎತ್ತುಗಳಿಗೆ ಪೂಜೆ, ಆರತಿ ಮಾಡಿ. ನಂತರ ನಗರದ ಕೌಲ್ ಬಜಾರ್ ಹತ್ತಿರದ ಸಣ್ಣ ದುರ್ಗಮ್ಮ ದೇವಸ್ಥಾನದಿಂದ ಸಿಡಿಬಂಡಿ ಆರಂಭಿಸಿಲಾಯಿತು. ಭಕ್ತರು ಸಿಡಿಬಂಡಿ ಎಳೆಯುವ ಮೂಲಕ ಎತ್ತುಗಳಿಗೆ ಹೂವಿನ ಹಾರ, ಕಾಯಿ, ಕರ್ಪೂರದ ಮೂಲಕ ಮಂಗಳಾರತಿ ಮಾಡಿ ಆರ್ಶಿವಾದ ಪಡೆದರು. ಇದನ್ನು ನೋಡಲು ಸಾವಿರಾರು ಭಕ್ತರು ಆಗಮಿಸಿದ್ದು ವಿಶೇಷವಾಗಿತ್ತು.
ಇಂದು ಗಾಣಿಗ ಸಮುದಾಯದ ಮೂರು ಜೊತೆಯ ಆರು ಎತ್ತುಗಳು ಸಿಡಿಬಂಡಿಯನ್ನು ಎಳೆದುಕೊಂಡು ನಗರದ ಕೌಲ್ ಬಜಾರ್, ಮೊದಲನೇ ಗೇಟ್ ಮಾರ್ಗವಾಗಿ, ಬಸವಕುಂಟೆ, ಎಸ್.ಪಿ ಸರ್ಕಲ್ನಿಂದ ಶ್ರೀ ಕನಕ ದುರ್ಗಮ್ಮ ದೇವಸ್ಥಾನ ತಲುಪುತ್ತವೆ.
ನಾಳೆ ಸಂಜೆ 5 ಗಂಟೆ 30 ನಿಮಿಷಕ್ಕೆ ಸಿಡಿಬಂಡಿ ಶ್ರೀ ಕನಕದುರ್ಗಮ್ಮ ದೇವಿಯ ದೇವಸ್ಥಾನದ ಮೂರು ಸುತ್ತುಗಳ ಪ್ರದರ್ಶನ ಹಾಕಲಾಗುತ್ತದೆ.