ETV Bharat / state

ಜಿಂದಾಲ್ ಉಕ್ಕು ಕಾರ್ಖಾನೆಗೆ ಭೂಮಿ ಕೊಡಲೇಬೇಕು: ಎಫ್​ಕೆಸಿಸಿಐ ಅಧ್ಯಕ್ಷ ಆಗ್ರಹ

author img

By

Published : Jun 8, 2019, 9:40 PM IST

ಜಿಂದಾಲ್ ಸಂಸ್ಥೆಗೆ ಆ ಭೂಮಿಯನ್ನು ಪರಭಾರೆ ಮಾಡೋದಕ್ಕೆ ಹಿಂದೇಟು ಹಾಕಿದ್ರೆ, ಭವಿಷ್ಯದಲ್ಲಿ ಕರ್ನಾಟಕ ರಾಜ್ಯಕ್ಕೆ ಕೈಗಾರಿಕಾ ಕಂಪನಿಗಳು ಬರೋದಿಲ್ಲ. ಈ ಸೂಕ್ಷ್ಮ ಅಂಶವನ್ನು ಗಮನದಲ್ಲಿಟ್ಟುಕೊಂಡೇ ರಾಜ್ಯ ಸರ್ಕಾರ ಉದ್ದಿಮೆದಾರರೊಂದಿಗೆ ವ್ಯವಹರಿಸಬೇಕಾಗುತ್ತದೆ ಎಂದು ಸೂಚಿಸಿದರು.

ಜಿಂದಾಲ್ ಉಕ್ಕು ಕಾರ್ಖಾನೆಗೆ ಭೂಮಿ ಪರಭಾರೆ ಮಾಡಲೇಬೇಕು

ಬಳ್ಳಾರಿ: ಜಿಂದಾಲ್ ಉಕ್ಕು ಕಾರ್ಖಾನೆಗೆ ಅಂದಾಜು 3,667 ಎಕರೆ ಭೂಮಿಯನ್ನು ಪರಭಾರೆ ಮಾಡಲೇಬೇಕು. ಯಾರ ವಿರೋಧಕ್ಕೂ ಮಣಿಯಬಾರದೆಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ರಾಜ್ಯ ಘಟಕದ ಅಧ್ಯಕ್ಷ ಸುಧಾಕರ ಎಸ್.ಶೆಟ್ಟಿ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲಿನ ಜಿಂದಾಲ್ ವಿದ್ಯಾನಗರದಲ್ಲಿಂದು ನಡೆದ ರಾಜ್ಯಮಟ್ಟದ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಮಾವೇಶದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಗುತ್ತಿಗೆ ಮತ್ತು ಮಾರಾಟ ಕರಾರಿನ ಅನ್ವಯ ರಾಜ್ಯ ಸರ್ಕಾರವು 3,667 ಎಕರೆ ಭೂಮಿಯನ್ನು ಮಂಜೂರಾತಿ ಮಾಡಿದೆ. ಲೀಸ್ ಕಂ ಸೇಲ್ ಡೀಡ್​ನಡಿ ಮಾಡಲಾದ ಈ ಭೂಮಿಯನ್ನು ಜಿಂದಾಲ್ ಸಮೂಹ ಸಂಸ್ಥೆ ಹೆಸರಿನಡಿ ಪರಭಾರೆ ಮಾಡಲೇಬೇಕು. ಇಲ್ಲವಾದ್ರೆ ರಾಜ್ಯದಲ್ಲಿ ಕೈಗಾರಿಕಾ ಉದ್ದಿಮೆಗಳು ಭಯಪಡುತ್ತಾರೆ. ಕೇವಲ ಬೆಂಗಳೂರು ಕೇಂದ್ರಿತವಾಗಿ ಕೈಗಾರಿಕಾ ಸಂಸ್ಥೆಗಳ ಸ್ಥಾಪನೆಗೆ ಮುಂದಾಗುವುದರಿಂದ ಬಳ್ಳಾರಿ ಸೇರಿದಂತೆ ಉಳಿದ ಜಿಲ್ಲೆಗಳ ಜನರು ಬೆಂಗಳೂರಿನತ್ತ ಮುಖ ಮಾಡಬೇಕಾಗುತ್ತೆ ಎಂದರು.

ಕೇವಲ ಚುನಾವಣೆ ಬಂದಾಗ ಮಾತ್ರ ರಾಜಕಾರಣಿಗಳು ಬಳ್ಳಾರಿಗೆ ಬರುತ್ತಾರೆ. ಗೆದ್ದಾದ ಮೇಲೆ ಬೆಂಗಳೂರಿಗೆ ಶಿಫ್ಟ್ ಆಗಿಬಿಡುತ್ತಾರೆ. ಅವರು ಗೆದ್ದಿರೋದು ಬೆಂಗಳೂರಿನಲ್ಲಿ ಮನೆ, ಮಠ ಸ್ಥಾಪನೆ ಮಾಡೋಕಲ್ಲ. ಇಲ್ಲಿದ್ದೇ, ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು. ಅದುಬಿಟ್ಟು ಬೆಂಗಳೂರಿಗೆ ಶಿಫ್ಟ್ ಆಗುತ್ತಿರೋದು ದೊಡ್ಡ ದುರಂತವೇ ಸರಿ ಎಂದು ರಾಜಕಾರಣಿಗಳ ವಿರುದ್ಧ ಹರಿಹಾಯ್ದರು.

Intro:ಜಿಂದಾಲ್ ಉಕ್ಕು ಕಾರ್ಖಾನೆಗೆ ಭೂಮಿ ಪರಭಾರೆ ಮಾಡಲೇ ಬೇಕು: ಎಫ್ ಕೆಸಿಸಿಐ ಅಧ್ಯಕ್ಷರ ಆಗ್ರಹ
ಬಳ್ಳಾರಿ: ಜಿಂದಾಲ್ ಉಕ್ಕು ಕಾರ್ಖಾನೆಗೆ ಅಂದಾಜು 3667 ಎಕರೆ ಭೂಮಿಯನ್ನು ಪರಭಾರೆ ಮಾಡಲೇಬೇಕು. ಯಾರ ವಿರೋಧಕ್ಕೂ ಮಣಿಯಬಾರದೆಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ರಾಜ್ಯ ಘಟಕದ ಅಧ್ಯಕ್ಷ ಸುಧಾಕರ ಎಸ್.ಶೆಟ್ಟಿ ಆಗ್ರಹಿಸಿದ್ದಾರೆ.
ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲಿನ ಜಿಂದಾಲ್ ವಿದ್ಯಾನಗರದಲ್ಲಿಂದು ನಡೆದ ರಾಜ್ಯಮಟ್ಟದ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಮಾವೇಶದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಗುತ್ತಿಗೆ ಮತ್ತು ಮಾರಾಟ ಕರಾರಿನ ಅನ್ವಯ ರಾಜ್ಯ ಸರ್ಕಾರವು 3667 ಎಕರೆ ಭೂಮಿಯನ್ನು ಮಂಜೂರಾತಿ ಮಾಡಿದೆ. ಲೀಸ್ ಕಂ ಸೇಲ್ ಡೀಡ್ ನಡಿ ಮಾಡಲಾದ ಈ ಭೂಮಿಯನ್ನು ಜಿಂದಾಲ್ ಸಮೂಹ ಸಂಸ್ಥೆ ಹೆಸರಿನಡಿ ಪರಭಾರೆ ಮಾಡಲೇಬೇಕು. ಇಲ್ಲವಾದ್ರೆ ರಾಜ್ಯದಲ್ಲಿ ಕೈಗಾರಿಕಾ ಉದ್ದಿಮೆಗಳು ಭಯಪಡುತ್ತಾರೆ. ಕೇವಲ ಬೆಂಗಳೂ ರು ಕೇಂದ್ರೀತವಾಗಿ ಕೈಗಾರಿಕಾ ಸಂಸ್ಥೆಗಳ ಸ್ಥಾಪನೆಗೆ ಮುಂದಾ ಗೋದರಿಂದ ಬಳ್ಳಾರಿ ಸೇರಿದಂತೆ ಉಳಿದ ಜಿಲ್ಲೆಗಳ ಜನರು ಬೆಂಗಳೂರಿನತ್ತ ಮುಖಮಾಡಬೇಕಾಗುತ್ತೆ ಎಂದರು.
ಅಲ್ಲದೇ, ಜಿಂದಾಲ್ ಸಂಸ್ಥೆಗೆ ಆ ಭೂಮಿಯನ್ನು ಪರಭಾರೆ ಮಾಡೋದಕ್ಕೆ ಹಿಂದೇಟು ಹಾಕಿದ್ರೆ. ಭವಿಷ್ಯದಲ್ಲಿ ಕರ್ನಾಟಕ ರಾಜ್ಯಕ್ಕೆ ಬರುವ ಕೈಗಾರಿಕಾ ಕಂಪನಿಗಳು ಬರೋದಿಲ್ಲ. ಈ ಸೂಕ್ಷ್ಮ ಅಂಶವನ್ನು ಗಮನದಲ್ಲಿಟ್ಟುಕೊಂಡೇ ರಾಜ್ಯ ಸರ್ಕಾರ ಉದ್ದಿಮೆದಾರರೊಂದಿಗೆ ವ್ಯವಹರಿಸಬೇಕಾಗುತ್ತದೆಂದರು.

Body:ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡುವಲ್ಲಿ ಕೈಗಾರಿಕೆಗಳ ಪಾತ್ರ ಮಹತ್ವದ್ದಾಗಿದೆ. ಅವುಗಳಿಗೆ ಉತ್ತೇಜನ ನೀಡಬೇಕೇ ಹೊರತು ಕಾಲೆಯುವಂತಹ ಕಾರ್ಯಕ್ಕೆ ಯಾವುದೇ ಸರ್ಕಾರ ಮುಂದಾಗಬಾರದು ಎಂದರು.
ಬಳ್ಳಾರಿ ಎಂದರೆ ದಾಯಾದಿ ಮನೋಭಾವನೆ: ಬಳ್ಳಾರಿ ಜಿಲ್ಲೆ ಎಂದರೆ ದಾಯಾದಿ ಮನೋಭಾವನೆಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿದೆ. ಆ ರೀತಿಯ ಮನೋಭಾವ ಇರ ಬಾರದು. ಈ ಭಾಗದಲ್ಲಿ ಕೈಗಾರಿಕೆಗಳು ಹೆಚ್ಚೆಚ್ಚು ಬೆಳೆಯ ಬೇಕು. ಅವುಗಳ ಬರುವಿಕೆಗೆ ರಾಜಕೀಯ ಇಚ್ಚಾಸಕ್ತಿ ಇರ ಬೇಕು. ಜಿಲ್ಲೆಯಲ್ಲಿ ಅಂದಾಜು ಆರು ಸಾವಿರಕ್ಕೂ ಅಧಿಕ ಯುವಕ- ಯುವತಿಯರು ಹೊಸದಾಗಿ ಕೈಗಾರಿಕಾ ಉದ್ದಿಮೆ ಆರಂಭಿಸಲು ಉತ್ಸುಕರಾಗಿದ್ದಾರೆ. ಅವರೆಲ್ಲರಿಗೂ ಸೂಕ್ತ ವೇದಿಕೆ ಕಲ್ಪಿಸಿಕೊಡಬೇಕೆಂದರು.
ವಿದ್ಯಾವಂತರೆಲ್ಲರೂ ಬೆಂಗಳೂರಿಗೆ ಶಿಫ್ಟ್ : ಜಿಲ್ಲೆಯ ವಿದ್ಯಾವಂತರೆಲ್ಲರೂ ಬೆಂಗಳೂರಿನತ್ತ ಮುಖಮಾಡಿದ್ದಾರೆ.‌ ಅದಕ್ಕೆ ಮುಖ್ಯಕಾರಣ, ಇಲ್ಲಿ ಜಿಂದಾಲ್ ಸಂಸ್ಥೆಯೊಂದು ಬಿಟ್ಟರೆ ಯಾವುದೇ ಕೈಗಾರಿಕಾ ಸಂಸ್ಥೆಗಳಿಲ್ಲ. ಆಗಾಗಿ, ಬೆಂಗಳೂರಿನ ಗಲ್ಲಿ, ಗಲ್ಲಿಗಳಲ್ಲಿ ಬಳ್ಳಾರಿಗರನ್ನ ಕಾಣ
ಬಹುದು ಎಂದರು.
ರಾಜಕಾರಣಿಗಳೂ ಕೂಡ ಬೆಂಗಳೂರಿಗೆ ಶಿಫ್ಟ್: ಕೇವಲ ಚುನಾವಣೆ ಬಂದಾಗ ಮಾತ್ರ ರಾಜಕಾರಣಿಗಳು ಬಳ್ಳಾರಿಗೆ ಬರುತ್ತಾರೆ. ಗೆದ್ದಾದ ಮೇಲೆ ಬೆಂಗಳೂರಿಗೆ ಶಿಫ್ಟ್ ಆಗಿ ಬಿಡು ತ್ತಾರೆ. ಅವರು ಗೆದ್ದಿರೋದು ಬೆಂಗಳೂರಿನಲ್ಲಿ ಮನೆ, ಮಠ ಸ್ಥಾಪನೆ ಮಾಡೋಕಲ್ಲ. ಇಲ್ಲಿದ್ದೇ, ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು. ಅದುಬಿಟ್ಟು ಬೆಂಗಳೂರಿಗೆ ಶಿಫ್ಟ್ ಆಗುತ್ತಿರೋದು ದೊಡ್ಡ ದುರಂತವೇ ಸರಿ ಎಂದರು.
ಜಿಂದಾಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಸಜ್ಜನ್ ಜಿಂದಾಲ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಡಾ.ಡಿ. ಎಲ್.ರಮೇಶಗೋಪಾಲ ಇದ್ದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_03_08_FKCCI_PRESIDENT_PRESS_MEET_BYTE_7203310

KN_BLY_03g_08_FKCCI_PRESIDENT_PRESS_MEET_BYTE_7203310

KN_BLY_03h_08_FKCCI_PRESIDENT_PRESS_MEET_BYTE_7203310

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.