ಬಳ್ಳಾರಿ :ಅಗ್ನಿಶಾಮಕ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಗ್ನಿಶಾಮಕ ಚಾಲಕ ಸೂಗನಗೌಡ ಅವರಿಗೆ ರಾಷ್ಟ್ರಪತಿ ಶೌರ್ಯ ಪ್ರಶಸ್ತಿ ಪದಕ ಒಲಿದಿದೆ.
ಸೂಗನಗೌಡ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಚಿಂಚೋಡಿ ಗ್ರಾಮದ ಹತ್ತಿರ ಕೃಷ್ಣ ನದಿಯಲ್ಲಿ 2018 ಆಗಸ್ಟ್ 29ರಂದು ಪ್ರವಾಹದಲ್ಲಿ 6 ಜನ ಕುರಿಗಾಹಿಗಳು ಮತ್ತು 165 ಕುರಿಗಳ ರಕ್ಷಣೆ ಮಾಡಿ ನಾಡಿನ ಗಮನ ಸಳೆದಿದ್ದರು.
ಇನ್ನೂ ಕೊಪ್ಪಳದ ಅಗ್ನಿಶಾಮಕ ಠಾಣಾಧಿಕಾರಿ ಜಿ. ಕೃಷ್ಣೋಜಿ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕಕ್ಕೆ ಪಾತ್ರರಾಗಿದ್ದಾರೆ. ಕೃಷ್ಣೋಜಿ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಾರಿಗನೂರು ಗ್ರಾಮದವರಾಗಿದ್ದು, ಸೇವಾ ಅವಧಿಯಲ್ಲಿ 17 ಬಾರಿ ಉತ್ತಮ ಕಾರ್ಯಕ್ಕಾಗಿ ಇಲಾಖೆಯಿಂದ ನಗದು ಬಹುಮಾನ ಪಡೆದಿದ್ದಾರೆ. ಬಳ್ಳಾರಿ ವಲಯದ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಎಸ್. ರವಿಪ್ರಸಾದ್ಗೆ ದೇಶದ ಪರಮೋಚ್ಚ ಪ್ರಶಸ್ತಿ ದೊರೆತಿದೆ.