ETV Bharat / state

ಗಣಿ ಜಿಲ್ಲೆಯಲ್ಲಿ ಚಾಲನಾ ಪರವಾನಗಿ ಪತ್ರದ ಹಂಚಿಕೆ ಸಲೀಸು

ಲಘು ಮತ್ತು ಭಾರಿ ಹಾಗೂ ದ್ವಿಚಕ್ರ ವಾಹನ ಖರೀದಿದಾರರ ಸಂಖ್ಯೆ ಕಮ್ಮಿಯಾದ ಹಿನ್ನೆಲೆಯಲ್ಲಿ ಚಾಲನಾ ಪರವಾನಗಿ ಪತ್ರದ ಡಿಮ್ಯಾಂಡ್ ಕೂಡ ಕಮ್ಮಿಯಾಗಿದೆ. ಲಾಕ್ ಡೌನ್ ಮತ್ತು ಅನ್​ಲಾಕ್​ ಜಾರಿಗೊಳ್ಳುವ ಮುನ್ನ ದಿನಾಲೂ ನೂರಾರು ಚಾಲನಾ ಪರವಾನಗಿ ಪತ್ರಗಳುಳ್ಳ ಆನ್​ಲೈನ್​ ಅರ್ಜಿಗಳನ್ನ ಸ್ವೀಕರಿಸಲಾಗುತ್ತಿತ್ತು. ಆದರೀಗ ಕೇವಲ ಹತ್ತಾರು ಅರ್ಜಿಗಳನ್ನ ಮಾತ್ರ ಸ್ವೀಕರಿಸಲಾಗುತ್ತಿದೆ.‌

Car
ಕಾರು
author img

By

Published : Feb 11, 2021, 3:40 PM IST

ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಚಾಲನಾ ಪರವಾನಗಿ ಪತ್ರದ ಹಂಚಿಕೆ ಸಲೀಸಾಗಿ ನಡೆಯುತ್ತಿದೆ.‌ ಈವರೆಗೂ ಶೇಕಡ 80 ರಷ್ಟು ಪ್ರಮಾಣದಲ್ಲಿ ಚಾಲನಾ ಪರವಾನಗಿ ಪತ್ರಗಳನ್ನ ಅಂಚೆ ಮೂಲಕ ಕಳಿಸಿಕೊಡಲಾಗಿದೆ. ಕೇವಲ ಶೇಕಡ 2ರಷ್ಟು ಪ್ರಮಾಣದಷ್ಟು ಅಂಚೆ ಪತ್ರಗಳು ವಾಪಸ್ ಬಂದಿರೋದು ಬಿಟ್ಟರೇ ಬೇರೇನೂ ಸಮಸ್ಯೆ ಎದುರಾಗಿಲ್ಲ.

ಹೌದು, ಗಣಿಜಿಲ್ಲೆಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ಆವರಣದಲ್ಲಿ ಸದಾ ಜನಜಂಗುಳಿ ಕೂಡಿ ಕೊಂಡಿರುತ್ತಿತ್ತು. ಆದರೆ, ಮಹಾಮಾರಿ ಈ ಕೋವಿಡ್ ಸೋಂಕು ಹರಡುವಿಕೆ ಹಿನ್ನೆಲೆಯಲ್ಲಿ ಅನ್ ಲಾಕ್ ಆಗಿ ಸಡಿಲಿಕೆಯಾದ್ರೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಮಾತ್ರ ಕಟ್ಟುನಿಟ್ಟಾಗಿ ಸಾಮಾಜಿಕ ಅಂತರ ಮತ್ತು ಕಡ್ಡಾಯ ಮಾಸ್ಕ್ ಧರಿಸೋದನ್ನ ಪಾಲಿಸುತ್ತದೆ.‌ ಕಳೆದ ಮೂರ್ನಾಲ್ಕು ತಿಂಗಳಿಂದಲೂ ಕೂಡ ಚಾಲನಾ ಪರವಾನಗಿ ಪತ್ರ ಪಡೆಯೋರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ತಗ್ಗಿದೆ.

ಲಘು ಮತ್ತು ಭಾರಿ ಹಾಗೂ ದ್ವಿಚಕ್ರ ವಾಹನ ಖರೀದಿದಾರರ ಸಂಖ್ಯೆ ಕಮ್ಮಿಯಾದ ಹಿನ್ನೆಲೆಯಲ್ಲಿ ಚಾಲನಾ ಪರವಾನಗಿ ಪತ್ರದ ಡಿಮ್ಯಾಂಡ್ ಕೂಡ ಕಮ್ಮಿಯಾಗಿದೆ. ಲಾಕ್​​​ಡೌನ್ ಮತ್ತು ಅನ್​ಲಾಕ್​ ಜಾರಿಗೊಳ್ಳುವ ಮುನ್ನ ದಿನಾಲೂ ನೂರಾರು ಚಾಲನಾ ಪರವಾನಗಿ ಪತ್ರಗಳುಳ್ಳ ಆನ್​ಲೈನ್​ ಅರ್ಜಿಗಳನ್ನ ಸ್ವೀಕರಿಸಲಾಗುತ್ತಿತ್ತು. ಆದರೀಗ ಕೇವಲ ಹತ್ತಾರು ಅರ್ಜಿಗಳನ್ನ ಮಾತ್ರ ಸ್ವೀಕರಿಸಲಾಗುತ್ತಿದೆ.‌ ಇದರಿಂದ ಚಾಲನಾ ಪರವಾನಗಿ ಪತ್ರಗಳಿಗೆ ಕೊಂಚಮಟ್ಟಿಗೆ ಡಿಮ್ಯಾಂಡ್ ಕಮ್ಮಿಯಾಗಿದೆ ಎಂದು ಹೇಳಬಹುದಾಗಿದೆ.

ಇನ್ನೂ ಲಾಕ್ ಡೌನ್ ಮುಂಚಿತವಾಗಿಯೇ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಜಾಸ್ತಿಯಾಗಿತ್ತು.‌‌ ಹಿಂದಿನ ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ ಮಲ್ನಾಡ್ ಅವರು ವಿಶೇಷ ಮುತುವರ್ಜಿಯಿಂದ ಆನ್​ಲೈನ್​ ಅರ್ಜಿಗಳ ಸ್ವೀಕೃತಿಯಿಂದಾಗಿ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಲಾಯಿತು. ‌ಇದೀಗ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಿ ನೇರವಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ ಬಂದರೆ ಸಾಕು.‌ ಅತ್ಯಂತ ಸರಾಗವಾಗಿ ಚಾಲನಾ ಪರವಾನಗಿ ಪತ್ರಗಳನ್ನ ಪಡೆಯಬಹುದು. ಕಡಿಮೆ ಶುಲ್ಕದಲ್ಲೇ ಈ ಚಾಲನಾ ಪರವಾನಗಿ ಪತ್ರ ಪಡೆಯಲು ಈಗ ಸಕಾಲ ಬಂದೊದಗಿದೆ.

ವಾಸ್ತವವೇ ಬೇರೆ: ಆನ್​ಲೈನ್​ನಲ್ಲಿ ಅರ್ಜಿ ಸ್ವೀಕೃತಿಯಾದರೂ ಕೆಳಹಂತದ ಅಧಿಕಾರಿ ಮತ್ತು ಸಿಬ್ಬಂದಿ ಮಾತ್ರ ಭ್ರಷ್ಟಾಚಾರ ನಡೆಸದೇ ಚಾಲನಾ ಪರವಾನಗಿ ಪತ್ರ ಫಲಾನುಭವಿಗಳಿಗೆ ವಿತರಿಸದಿರೋದನ್ನ‌ ನಾನಂತೂ ನೋಡಿಯೇ ಇಲ್ಲ ಎಂದು ಚಾಲನಾ ಪರವಾನಗಿ ಪತ್ರಕ್ಕೆ ಅರ್ಜಿ ಸಲ್ಲಿಸಿದ ಫಲಾನುಭವಿಗಳು ದೂರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.