ETV Bharat / state

ಬಳ್ಳಾರಿ ರೌಡಿಶೀಟರ್ ಹತ್ಯೆ ಕೇಸ್‌; 10 ಮಂದಿ ಆರೋಪಿಗಳ ಬಂಧನ

author img

By

Published : May 3, 2022, 10:26 AM IST

ಬಳ್ಳಾರಿ ನಗರದ ಹಾವಂಭಾವಿ ಪ್ರದೇಶದಲ್ಲಿ ರೌಡಿಶೀಟರ್‌ವೋರ್ವನನ್ನು ಸುಮಾರು 10ಕ್ಕೂ ಹೆಚ್ಚು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿ ಹತ್ಯೆ ಮಾಡಿದ್ದರು.

ಬಳ್ಳಾರಿ ಗ್ರಾಮಾಂತರ ಠಾಣೆ
ಬಳ್ಳಾರಿ ಗ್ರಾಮಾಂತರ ಠಾಣೆ

ಬಳ್ಳಾರಿ: ಕಳೆದ ರಾತ್ರಿ ನಗರದಲ್ಲಿ ಹಳೇ ದ್ವೇಷದ ಹಿನ್ನೆಲೆಯಲ್ಲಿ ರೌಡಿಶೀಟರ್‌ ಮಹೇಂದ್ರ (34) ಎಂಬಾತನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದ 10 ಮಂದಿಯನ್ನು ಬಳ್ಳಾರಿ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೇಶವ, ಬಾಬು, ನವೀನ್, ವಂಶಿ, ಶಂಕರ, ಧನಂಜಯ, ಟಿ.ರವಿ, ಸೂರಿ, ಪ್ರಕಾಶ್, ನವೀನ್ ಬಂಧಿತರು. ಆರೋಪಿಗಳಿಂದ ಮಚ್ಚು, ಕತ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕೊಲೆಯಾದ ರೌಡಿಶೀಟರ್‌ ಮಹೇಂದ್ರ, ತಾಂಡಾ ರಮೇಶ್​ ಎಂಬಾತನ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ. ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಹೊರಬಂದಿದ್ದ. ಈ ಹಿಂದೆ ಮೂರು ಬಾರಿ ಈತನ ಕೊಲೆಗೆ ಯತ್ನಿಸಲಾಗಿತ್ತು. ನಿನ್ನೆ ರಾತ್ರಿ ಮನೆ ತೆರಳುವ ವೇಳೆ ನಗರದ ಹಾವಂಭಾವಿ ಪ್ರದೇಶದಲ್ಲಿ ಅಡ್ಡಗಟ್ಟಿದ 10ಕ್ಕೂ ಹೆಚ್ಚು ದುಷ್ಕರ್ಮಿಗಳು ಏಕಾಏಕಿ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು.

ಇದನ್ನೂ ಓದಿ: 'ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಯಿಂದ ಮಕ್ಕಳನ್ನು ಮಾದರಿ ಶಾಲೆಗೆ ಕರೆತರಲು ಚಿಂತನೆ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.