ETV Bharat / state

ಗಣಿನಾಡಿನಲ್ಲಿ ಬ್ಲ್ಯಾಕ್​ ಫಂಗಸ್​ಗೆ ಔಷಧಿ ಕೊರತೆ: ಕೇಳಿದ್ದು ಬೆಟ್ಟದಷ್ಟು, ಕೊಟ್ಟಿದ್ದು ಮಾತ್ರ ಸಾಸಿವೆ ಕಾಳಿನಷ್ಟು! - ಗಡಿನಾಡು ಬಳ್ಳಾರಿ

ಗಡಿನಾಡು ಬಳ್ಳಾರಿ ಹಾಗೂ ವಿಜಯನಗರದಲ್ಲಿ ದಿನದಿಂದ ದಿನಕ್ಕೆ ಬ್ಲ್ಯಾಕ್​ ಫಂಗಸ್​ ಸೋಂಕಿತ ಪ್ರಕರಣ ಹೆಚ್ಚಾಗಿ ಕಂಡು ಬರುತ್ತಿದ್ದು, ಆದರೆ ರಾಜ್ಯ ಸರ್ಕಾರ ಸರಿಯಾಗಿ ಇಂಜೆಕ್ಷನ್​ ಸರಬರಾಜು ಮಾಡ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

Rising black fungus cases in bellary
Rising black fungus cases in bellary
author img

By

Published : May 29, 2021, 2:53 AM IST

ಬಳ್ಳಾರಿ: ಗಣಿನಾಡು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಬ್ಲ್ಯಾಕ್​​ ಫಂಗಸ್​ಗೆ ಔಷಧಿಯ ಕೊರತೆ ಎದುರಾಗಿದ್ದು, ಜಿಲ್ಲಾಡಳಿತ ಕೇಳಿದ್ದು ಬೆಟ್ಟದಷ್ಟಾದರೆ ರಾಜ್ಯ ಸರ್ಕಾರ ಕೊಟ್ಟಿದ್ದು ಮಾತ್ರ ಸಾಸಿವೆ ಕಾಳಿನಷ್ಟು ಎಂಬಂತಾಗಿದೆ.

ಬ್ಲ್ಯಾಕ್​ ಫಂಗಸ್​ಗೆ ಸಿಗದ ಇಂಜೆಕ್ಷನ್​

ಹೌದು, ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಜಿಲ್ಲಾಡಳಿತ 200 ಇಂಜೆಕ್ಷನ್​ ಕೇಳಿದರೆ ರಾಜ್ಯ ಸರ್ಕಾರ ಕೇವಲ 10 ಇಂಜೆಕ್ಷನ್​​ ಮಾತ್ರ ನೀಡಿದೆ. ಹೀಗಾಗಿ ಗಡಿ ಜಿಲ್ಲೆಯಲ್ಲಿ ಮತ್ತಷ್ಟು ಆತಂಕ ಎದುರಾಗಿದೆ. ಕಳೆದ ಕೆಲ ದಿನಗಳಿಂದ ಉಭಯ ಜಿಲ್ಲೆಗಳಲ್ಲಿ ಕೊರೊನಾ ಕಂಟಕದ ಮಧ್ಯೆ ಬ್ಲ್ಯಾಕ್​​ ಫಂಗಸ್‍ನಿಂದ ಮೃತಪಡುತ್ತಿರುವವರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಇದರ ಮಧ್ಯೆ ಸಕಾಲಕ್ಕೆ ಔಷಧಿ ಸಿಗದ ಕಾರಣ ಫಂಗಸ್​ ನಿವಾರಣೆ ಮುಂದಿನ ದಿನಗಳಲ್ಲಿ ಮತ್ತಷ್ಟು ಕಠಿಣವಾಗಲಿದೆ ಎಂಬ ಮಾತು ಕೇಳಿ ಬಂದಿದೆ

ಕೇಳಿದ್ದು 200 ಇಂಜೆಕ್ಷನ್​, ಆದರೆ ನೀಡಿದ್ದು 10 ಮಾತ್ರ

ಗಣಿ ಜಿಲ್ಲೆಗೆ ತುರ್ತಾಗಿ 200 ಇಂಜೆಕ್ಷನ್‍ಗಳ ಅವಶ್ಯಕತೆ ಇರುವ ಕುರಿತು ಜಿಲ್ಲಾಡಳಿತದಿಂದ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಈ ದಿನವೇ ಉಭಯ ಜಿಲ್ಲೆಗಳಿಗೆ ಕೇವಲ 10 ಇಂಜೆಕ್ಷನ್ ಮಾತ್ರ ಬಂದಿವೆ. ಹೀಗಾಗಿ ಬ್ಲ್ಯಾಕ್​ ಫಂಗಸ್​ ಸೋಂಕಿತರಿಗೆ ಚಿಕಿತ್ಸೆ ನೀಡುವುದು ದೊಡ್ಡ ಸವಾಲಾಗಿದೆ.

41 ಸಕ್ರಿಯ ಪ್ರಕರಣ

ಕಳೆದೆರಡು ದಿನಗಳ ಅಂತರದಲ್ಲಿ ಬ್ಲ್ಯಾಕ್​ ಫಂಗಸ್​​ನಿಂದಾಗಿ ಮೂವರು ಸಾವನ್ನಪ್ಪಿದ್ದು, ಈಗಾಗಲೇ ಮೃತರ ಸಂಖ್ಯೆ 6ಕ್ಕೇರಿದೆ.ಈಗಾಗಲೇ ಜಿಲ್ಲೆಯಲ್ಲಿ ಬ್ಲ್ಯಾಕ್​ ಫಂಗಸ್​ ಸೋಂಕಿತ ಸಕ್ರಿಯ ಪ್ರಕರಣಗಳ ಸಂಖ್ಯೆ 41ಕ್ಕೆ ಏರಿಕೆಯಾಗಿದೆ. ರಾಜ್ಯ ಸರ್ಕಾರದಿಂದ ಬಂದಿರುವ ಕೇವಲ 10 ಇಂಜೆಕ್ಷನ್​ ಯಾರಿಗೆ ಕೊಡಬೇಕು? ಎಂಬುದು ವೈದ್ಯರಿಗೆ ಅರ್ಥವಾಗುತ್ತಿಲ್ಲ.

ಇದನ್ನೂ ಓದಿ: Oxygen Bus: ತುರ್ತು ಆಮ್ಲಜನಕ ಸೇವೆಗೆ ಸಂಚಾರಿ ಬಸ್​ ಸೇವೆ ಆರಂಭ

ಪ್ರಮುಖವಾಗಿ ಉಭಯ ಜಿಲ್ಲೆಗಳ ವ್ಯಾಪ್ತಿಯ ಹೂವಿನ ಹಡಗಲಿ, ಕೂಡ್ಲಿಗಿ, ಹರಪನಹಳ್ಳಿ ತಾಲೂಕಿನಲ್ಲಿ ಬ್ಲ್ಯಾಕ್​ ಫಂಗಸ್​ ಪ್ರಕರಣ ಹೆಚ್ಚಾಗಿ ಕಂಡು ಬಂದಿವೆ. 41ರ ಪೈಕಿ 35 ಸಕ್ರಿಯ ಪ್ರಕರಣಗಳಿದ್ದು, ಬಳ್ಳಾರಿಯ ವಿಮ್ಸ್​​ನಲ್ಲಿ 20ಕ್ಕೂ ಹೆಚ್ಚು ಫಂಗಸ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಪರಿಸ್ಥಿತಿ ಇದೇ ರೀತಿಯಾಗಿ ಮುಂದುವರಿದರೆ ಸಕಾಲಕ್ಕೆ ತುರ್ತು ಚಿಕಿತ್ಸೆ ನೀಡದಿದ್ದಲ್ಲಿ ಕೊರೊನಾ ಸೋಂಕಿಗಿಂತ ಈ ಬ್ಲ್ಯಾಕ್​ ಫಂಗಸ್ ವೇಗವಾಗಿ ಹಬ್ಬಿ ಜನರ ಜೀವನಕ್ಕೆ ಮಾರಕವಾಗೋದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುತ್ತಿದ್ದಾರೆ ವೈದ್ಯರು.

ಪ್ರತ್ಯೇಕ ವಾರ್ಡ್​: ಉಭಯ ಜಿಲ್ಲೆಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆಯಾದರೂ, ಮೃತರ ಸಂಖ್ಯೆ ಕಡಿಮೆಯಾಗುತ್ತಿಲ್ಲ.ಇದರ ಮಧ್ಯೆ ಬ್ಲ್ಯಾಕ್​ ಫಂಗಸ್ ದಿನದಂದ ದಿನಕ್ಕೆ ಹೆಚ್ಚಳವಾಗುತ್ತಿರುವುದರಿಂದ ಬಳ್ಳಾರಿಯ ವಿಮ್ಸ್​ನಲ್ಲಿ ಪ್ರತ್ಯೇಕ ಮೂರು ವಾರ್ಡ್​ ಚಿಕಿತ್ಸೆಗೆ ಮೀಸಲಿಡಲಾಗಿದೆ.

ಬ್ಲ್ಯಾಕ್​ ಫಂಗಸ್​ ಸಂಖ್ಯೆ ಹೆಚ್ಚಾದಂತೆ ವಾರ್ಡ್​ಗಳ ಸಂಖ್ಯೆಯಲ್ಲೂ ಹೆಚ್ಚಳ ಮಾಡುವುದಕ್ಕೆ ನಿರ್ಧಾರ ಮಾಡಲಾಗಿದೆ. ಕೆಲ ಸೋಂಕಿತರು ಮಾತ್ರ ಹುಬ್ಬಳ್ಳಿ ಮತ್ತು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ಆದರೆ, ವಿಮ್ಸ್​​ನಲ್ಲಿರುವ ಹಾಲಿ ರೋಗಿಗಳಿಗೆ ಔಷಧದ ಕೊರತೆ ಎದುರಾಗಿದೆ. ರಾಜ್ಯ ಸರ್ಕಾರ, ಸಕಾಲಕ್ಕೆ ಔಷಧವನ್ನು ಸಮರ್ಪಕವಾಗಿ ಪೂರೈಕೆ ಮಾಡದ ಪರಿಣಾಮ ಚಿಕಿತ್ಸೆ ನೀಡುವುದು ವೈದ್ಯರಿಗೆ ಸವಾಲಾಗಿದೆ ಎಂದು ಡಿಹೆಚ್ ಒ ಡಾ.ಹೆಚ್. ಎಲ್.ಜನಾರ್ಧನ್ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.