ಹೊಸಪೇಟೆ: ತಾಲೂಕಿನ ಇಂಗಳಗಿ ಗ್ರಾಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ(ಹುಡಾ)ದಿಂದ 24 ಎಕರೆಯಲ್ಲಿ ನಿವೇಶಗಳನ್ನು ನಿರ್ಮಿಸಲಾಗುತ್ತಿದೆ ಎಂದು ಹುಡಾ ಆಯುಕ್ತ ಗುರುಪ್ರಸಾದ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೇಕಡಾ 50:50 ಅನುಪಾತದಲ್ಲಿ ನಿವೇಶನಗಳನ್ನು ರಚಿಸಲು ಸರ್ಕಾರದಿಂದ ಅನುಮತಿ ಪಡೆಯಲಾಗಿದೆ. ನಿವೇಶನ ನೀಡುವುದು ಟೆಂಡರ್ ಹಂತದಲ್ಲಿದೆ ಎಂದು ತಿಳಿಸಿದರು.
30X40 ಅಡಿ ಅಳತೆಯಲ್ಲಿ 302 ನಿವೇಶನಗಳು ಬರುತ್ತವೆ. ಭೂ ಮಾಲೀಕರಿಗೆ 151 ಪ್ಲಾಟ್ ಹಾಗೂ 151 ಹುಡಾದವರಿಗೆ ಹಂಚಿಕೆ ಆಗುತ್ತದೆ. 1998ರ ನಂತರ ಇದೇ ಮೊದಲ ಬಾರಿಗೆ ಹುಡಾದಿಂದ ನಿವೇಶನವನ್ನು ಮಾಡಲಾಗುತ್ತಿದೆ ಎಂದರು.