ETV Bharat / state

ಶೀಘ್ರ ಸಬ್ ಕಮಿಟಿ ವರದಿ ಸಲ್ಲಿಕೆ: ಮೀಸಲು ಘೋಷಣೆ ರಾಜ್ಯ ಸರ್ಕಾರಕ್ಕೆ ಬಿಟ್ಟಿದ್ದು ಎಂದ ಶ್ರೀರಾಮುಲು

author img

By

Published : Feb 8, 2021, 6:14 PM IST

Updated : Feb 8, 2021, 6:46 PM IST

ನಾಳೆ ನಡೆಯಲಿರುವ ವಾಲ್ಮೀಕಿ ಜಾತ್ರೆಯಲ್ಲಿ ಈ ಮೀಸಲಾತಿ ಘೋಷಣೆ ಮಾಡ್ತಾರಾ ಅಥವಾ ಇಲ್ಲ ಅಂತ ನನಗಂತೂ ಗೊತ್ತಿಲ್ಲ. ಯಾಕಂದ್ರೆ ಈ ಸಬ್ ಕಮಿಟಿಯ ವರದಿಯೇ ಸಿಎಂ ಬಿಎಸ್​​ವೈ ಕೈಗೆ ಸೇರಿಲ್ಲ. ಆಗಾಗಿ, ನಾನೇನು ಹೇಳಲಿಕ್ಕಾಗಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಸ್ಪಷ್ಪನೆ ನೀಡಿದ್ದಾರೆ.

Sri Ramulu
ಶ್ರೀರಾಮುಲು

ಬಳ್ಳಾರಿ: ಎಸ್ ಟಿ ಸಮುದಾಯಕ್ಕೆ 7.5 ಮೀಸಲಾತಿ ಹೆಚ್ಚಳ ವಿಚಾರವಾಗಿ ರಚಿಸಲಾದ ಸಬ್ ಕಮಿಟಿ ವರದಿ ಶೀಘ್ರವೇ ಸಿಎಂ ಬಿಎಸ್ ಯಡಿಯೂರಪ್ಪ ಕೈಸೇರಲಿದೆ. ಆ ಬಳಿಕ, ಮೀಸಲಾತಿ ಘೋಷಣೆ ಮಾಡ್ಬೇಕೋ ಅಥವಾ ಬೇಡವೊ ಎಂಬ ನಿರ್ಧಾರಕ್ಕೆ ರಾಜ್ಯ ಸರ್ಕಾರ ಬರಲಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಸ್ಪಷ್ಪನೆ ನೀಡಿದ್ದಾರೆ.

ಬಳ್ಳಾರಿಯ ಕೋಟೆ ಮಲ್ಲೇಶ್ವರ ದೇಗುಲದ ಜೀರ್ಣೋದ್ಧಾರ ಕಾರ್ಯವನ್ನ ವೀಕ್ಷಿಸಿದ ಬಳಿಕ ಈಟಿವಿ ಭಾರತದೊಂದಿಗೆ ಮಾತನಾಡಿದ ಸಚಿವ ಶ್ರೀರಾಮುಲು, ಎಸ್ ಟಿ ಸಮುದಾಯಕ್ಕೆ ಶೇಕಡ 7.5 ರಷ್ಟು ಹಾಗೂ ಎಸ್ಸಿ ಸಮುದಾಯದ ಉಪ ಜಾತಿಗಳಿಗೆ ಶೇಕಡಾ 17 ರಷ್ಟು ಮೀಸಲಾತಿ ನೀಡಬೇಕೆಂಬ ವಿಚಾರ ಸಚಿವ ಸಂಪುಟದ ಸಭೆಯಲ್ಲಿ ಚರ್ಚೆಗೆ ಬಂದಾಗ, ಸಿಎಂ ಬಿ ಎಸ್ ಯಡಿ ಯೂರಪ್ಪ ಸಬ್ ಕಮಿಟಿ ರಚನೆ ಮಾಡಿ, ನಿಮ್ಮನ್ನೇ ಆ ಸಬ್ ಕಮಿಟಿ ಚೇರ್ ಮನ್ ಆಗಿ ನೇಮಿಸುತ್ತೇವೆ ಎಂದಿದ್ದರು. ಅದರಂತೆಯೇ ಸಬ್ ಕಮಿಟಿ ರಚನೆಯಾಗಿದೆ. ಇನ್ನೊಂದು ಎರಡ್ಮೂರು ಮೀಟಿಂಗ್ ಆಗುವಷ್ಟರಲ್ಲಿಯೇ ಸಬ್ ಕಮಿಟಿಯ ವರದಿಯು ಸಿಎಂ ಬಿಎಸ್ ಯಡಿಯೂರಪ್ಪ ಕೈ ಸೇರಲಿದೆ. ಆ ಬಳಿಕ, ಈ ಮೀಸಲಾತಿ ಘೋಷಣೆ ಮಾಡೋ ವಿಚಾರವನ್ನ ಸಿಎಂ ಬಿಎಸ್ ಯಡಿಯೂರಪ್ಪ ವಿವೇಚನೆಗೆ ಬಿಟ್ಟ ವಿಚಾರವಾಗಿದೆ ಎಂದು ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.

ಮೀಸಲು ಘೋಷಣೆ ರಾಜ್ಯ ಸರ್ಕಾರಕ್ಕೆ ಬಿಟ್ಟಿದ್ದು ಎಂದ ಶ್ರೀರಾಮುಲು

ನಾಳೆ ನಡೆಯಲಿರುವ ವಾಲ್ಮೀಕಿ ಜಾತ್ರೆಯಲ್ಲಿ ಈ ಮೀಸಲಾತಿ ಘೋಷಣೆ ಮಾಡ್ತಾರಾ ಅಥವಾ ಇಲ್ಲ ಅಂತ ನನಗಂತೂ ಗೊತ್ತಿಲ್ಲ. ಯಾಕಂದ್ರೆ ಈ ಸಬ್ ಕಮಿಟಿಯ ವರದಿಯೇ ಸಿಎಂ ಬಿಎಸ್​​ವೈ ಕೈಗೆ ಸೇರಿಲ್ಲ. ಆಗಾಗಿ, ನಾನೇನು ಹೇಳಲಿಕ್ಕಾಗಲ್ಲ. ಸಿಎಂ‌ ಬಿಎಸ್​​ವೈ ಅವರು, ರಾಜಕೀಯ ಲೆಕ್ಕಾಚಾರದ ವಿಚಾರವಾಗಿ ಏನಂತಾ ವಿಚಾರ ಮಾಡಿದ್ದಾರೆ ಎಂದು ನನಗಂತೂ ಗೊತ್ತಿಲ್ಲ. ಹೀಗಾಗಿ, ನಾಳಿನ ವಾಲ್ಮೀಕಿ ಜಾತ್ರೆಯಲಿ ಮೀಸಲಾತಿ ಘೋಷಣೆ ವಿಚಾರವನ್ನ ಸಿಎಂ ಬಿಎಸ್​​ವೈ ಪ್ರಸ್ತಾಪಿಸುತ್ತಾರೋ ಅಥವಾ ಇಲ್ಲವೋ ನಾನಂತೂ ಊಹೆ ಮಾಡಿಕೊಳ್ಳಲಿಕ್ಕಾಗುವುದಿಲ್ಲ ಎಂದು ತಿಳಿಸಿದರು.

ಹೋರಾಟ ನ್ಯಾಯಯುತವಾಗಲಿ:

ಕುರುಬ ಸಮುದಾಯದವರ ಎಸ್ ಟಿ ಮೀಸಲಾತಿ ಹಾಗೂ ಪಂಚಮ ಸಾಲಿ ಸಮುದಾಯದವರ ಪ್ರವರ್ಗ - 2 ಎ ಮೀಸಲಾತಿ ಘೋಷಣೆ ಹೋರಾಟ ಮಾಡೋದಕ್ಕೆ‌ ನನ್ನದೇನು ಅಭ್ಯಂತರ ಇಲ್ಲ.‌ ಆದರೆ, ಆ ಹೋರಾಟ ನ್ಯಾಯಯುತವಾಗಬೇಕಿದೆ. ಯಾವುದೇ ಮೀಸಲಾತಿ ಘೋಷಣೆಯ ಕುರಿತು ಸರ್ಕಾರ ನಿರ್ಧರಿಸೋಲ್ಲ. ಕಾನೂನಾತ್ಮಕ ತೊಡಕು ಉಂಟಾಗುವುದರಿಂದ ನ್ಯಾಯಸಮ್ಮತ ವಾಗಿಯೇ ಹೋರಾಡಿ ಈ ಮೀಸಲಾತಿ ಪಡೆಯಬೇಕಿದೆ. ಹೀಗಾಗಿ, ಆ ಸಮುದಾಯಗಳು ನ್ಯಾಯ ಸಮ್ಮತ ಹೋರಾಟಕ್ಕೆ ಅಣಿಯಾಗಬೇಕಿದೆ ಎಂದರು.

Last Updated : Feb 8, 2021, 6:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.